Advertisement

ಬೆಳ್ಳಂಬೆಳಗ್ಗೆ ಆಕಾಶದಲ್ಲಿ ವಿಚಿತ್ರ ಬೆಳಕಿನಾಟ : ಬೆರಗಾದ ಜನತೆ

07:34 PM Feb 14, 2022 | Team Udayavani |

ಗಂಗಾವತಿ: ಬೆಳಗಿನ ಜಾವ 5.30 ರ ಸುಮಾರಿಗೆ ಆಕಾಶದಲ್ಲಿ ಬೆಳಕಿನ ವಿಚಿತ್ರ ನಲಿದಾಟ ನಡೆದಿದ್ದು ಇದನ್ನು ಗಮನಿಸಿದ ಜನರು ಬೆರಗಾಗಿರುವ ಘಟನೆ ತಾಲೂಕಿನ ಬಾಪಿರೆಡ್ಡಿ ಕ್ಯಾಂಪಿನಲ್ಲಿ ಸೋಮವಾರ ನಡೆದಿದೆ.

Advertisement

ಬಾಪಿರೆಡ್ಡಿ ಕ್ಯಾಂಪಿನ ರೈತ ಟಿ.ಸತ್ಯನಾರಾಯಣ ಸೋಮವಾರ ಬೆಳಗಿನ ಜಾವ ತಮ್ಮ ಗದ್ದೆಗೆ ಹೋಗುವಾಗ ಪೂರ್ವದಿಕ್ಕಿನಲ್ಲಿ ಉದ್ದನೆ ಬೆಂಕಿ ಉಂಡೆಯಂತಹ ಸಾಲು ಕಾಣಿಸಿಕೊಂಡಿದ್ದು ಇದನ್ನು ಕುತುಹಲಕ್ಕಾಗಿ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ನಂತರ ಇಡೀ ಕ್ಯಾಂಪಿನ ಮೊಬೈಲ್ ವಾಟ್ಸಪ್ ಗ್ರುಪ್ ಗೆ ಹಾಕಿದ್ದರಿಂದ ಇದೀಗ ಆಕಾಶದಲ್ಲಿನ ಬೆಂಕಿಯ ಬೆಳಕಿನ ಉಂಡಿಯ ವಿಡಿಯೋ ಮತ್ತು ಪೊಟೋಗಳು ವೈರಲ್ ಆಗಿದ್ದು ಆಕಾಶ ಕಾಯದಲ್ಲಿಯ ವಿಚಿತ್ರ ಕಂಡು ಜನರು ಬೆರಗಾಗಿದ್ದಾರೆ.

ಇತ್ತೀಚಿಗೆ ಪತ್ರಿಕೆಗಳಲ್ಲಿ ಆಕಾಶದಲ್ಲಿ ಕ್ಷುದ್ರಗ್ರಹಗಳು ಭೂಮಿಗೆ ಹತ್ತಿರವಾಗಿ ಹೋಗುತ್ತವೆ ಇದರ ಪರಿಣಾಮದ ಕುರಿತು ವರದಿಗಳು ಪ್ರಕರಟವಾಗಿತ್ತು. ಕ್ಷುದ್ರ ಗ್ರಹಗಳು ಭೂಮಿಯ ಕಾಯದಲ್ಲಿ ಸಂಚರಿಸುವಾಗ ಗುರುತ್ವಾಕರ್ಷಣೆಯ ಪ್ರದೇಶದಲ್ಲಿ ಘರ್ಷಣೆಯ ಸಂದರ್ಭದಲ್ಲಿ ಕ್ಷುದ್ರಗ್ರಹಗಳಲ್ಲಿ ವ್ಯತ್ಯಾಸವಾಗಿ ಬೆಂಕಿ ಉಂಟಾಗುವ ಸಾಧ್ಯತೆ ಕುರಿತು ವರದಿಯಲ್ಲಿ ತಿಳಿಸಲಾಗಿತ್ತು. ಬಾಪಿರೆಡ್ಡಿಕ್ಯಾಂಪಿನಲ್ಲಿ ಇಂತಹ ಘಟನೆ ನಡೆದಿರುವ ಸಾಧ್ಯತೆ ಇದೆ.

ಇದನ್ನೂ ಓದಿ : ಧೋನಿ ಐಪಿಎಲ್ ಆಡದಿದ್ದರೆ, ನಾನೂ ಆಡುವುದಿಲ್ಲ: ರೈನಾ ಹಳೆಯ ವಿಡಿಯೋ ವೈರಲ್

ಕ್ಷುದ್ರ ಗ್ರಹಗಳಿರಬಹುದು :
ಆಕಾಶ ವಲಯದಲ್ಲಿ ನಿತ್ಯವೂ ಗ್ರಹಗಳು ನಕ್ಷತ್ರಗಳು ಚಲನ ವಲನದಲ್ಲಿ ವ್ಯತ್ಯಾಸವಾಗಿ ಬೆಂಕಿಯುಂಡೆಯಾಗುವ ಸಾಧ್ಯತೆ ಇದೆ. ನಕ್ಷಗಳು ಬೀಳುವುದರಿಂದ ಉದ್ದನೆ ಬೆಂಕಿ ಕಂಡು ಬರುತ್ತದೆ.

Advertisement

ಇತ್ತಿಚೆಗೆ ಖಗೋಳ ವಿಜ್ಞಾನಿಗಳು ಭೂಮಿಗೆ ಕ್ಷುದ್ರಗ್ರಹಣ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಬಾಪಿರೆಡ್ಡಿ ಕ್ಯಾಂಪಿನಲ್ಲಿ ಸೋಮವಾರ ಕಂಡು ಬಂದಿರುವ ಉದ್ದನೆ ಬೆಂಕಿಯ ಸಾಲು(ಮಿಂಚಿನಂತೆ ) ಎಲ್ಲರೂ ಬೆರಗಾಗುವಂತೆ ಮಾಡಿದೆ.

ಈ ಬೆಂಕಿಯ ಸಾಲಿನ ಸಂದರ್ಭದಲ್ಲಿ ಯಾವುದೇ ಶಬ್ದವಾಗಿಲ್ಲ ಎನ್ನವುದು ಸ್ಥಳೀಯರ ಹೇಳಿಕೆ ಗಮನಿಸಿದರೆ ಇದು ಕ್ಷುದ್ರಗ್ರಹ ಭೂಮಿಯ ಕಕ್ಷೆಗೆ ಬಂದಾಗ ಗುರುತ್ವಾಕರ್ಷಣೆಗೆ ಸಿಕ್ಕು ಸಂಚಾರದಲ್ಲಿ ವ್ಯತ್ಯಾಸವಾದಾಗ ಇಂತಹ ಬೆಂಕಿಯ ಬೆಳಕು ಸಹಜವಾಗುತ್ತದೆ. ಒಂದು ವೇಳೆ ಭೂಮಿಗೆ ಕ್ಷುದ್ರಗ್ರಹಗಳು ಬಿದ್ದರೆ ಬಹಳ ದೊಡ್ಡ ತೆಗ್ಗು ಬೀಳುವ ಸಾಧ್ಯತೆ ಇದೆ ಎಂದು ವಿಜ್ಞಾನ ಖಗೋಳ ಉಪನ್ಯಾಸಕ ರಾಜೇಶ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next