ಕೊರಟಗೆರೆ; ಆಸ್ತಿಗಾಗಿ ತಂದೆ ಮಗನನ್ನು ಕೊಲೆ ಮಾಡಲು ಯತ್ನ ನಡೆಸಿರುವ ಘಟನೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ದೊಡ್ಡನರಸಯ್ಯನ ಪಾಳ್ಯ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆ ಕೃಷ್ಣಪ್ಪ ಮಗನಾದ ಲಕ್ಷ್ಮೀಕಾಂತರಾಜುನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.
ಘಟನೆಯ ವಿವರ: ಆರೋಪಿ ಕೃಷ್ಣಪ್ಪನಿಗೆ ಇಬ್ಬರು ಗಂಡು ಮಕ್ಕಳಿದ್ದು, ಯಾರಿಗೂ ಜಮೀನಿನಲ್ಲಿ ಭಾಗ ಕೊಟ್ಟಿರುವುದಿಲ್ಲ. ಇಬ್ಬರೂ ಮಕ್ಕಳು ಕೂಲಿ ನಾಲಿ ಮಾಡಿಕೊಂಡು ಸಂಸಾರ ಜೀವನ ಸಾಗಿಸುತ್ತಿದ್ದಾರೆ.
ಲಕ್ಷ್ಮೀಕಾಂತರಾಜು ಹಾಗೂ ತಂದೆಗೆ ಪರಸ್ಪರ ವೈಷಮ್ಯವಿದ್ದು , ಕೃಷ್ಣಪ್ಪ ಅಗಾಗ್ಗೆ ಲಕ್ಷ್ಮೀಕಾಂತರಾಜು ಮತ್ತು ಸೊಸೆಯ ಜೊತೆ ಗಲಾಟೆ ಮಾಡುತ್ತಿದ್ದು ಮನೆ ಬಿಟ್ಟು ಹೋಗುವಂತೆ ಹೇಳುತ್ತಿದ್ದ ಎನ್ನಲಾಗಿದೆ. ಆದರೆ ಮನೆ ಬಿಟ್ಟು ಹೋಗದ ಮಗ ಮತ್ತು ಸೊಸೆಯ ಮೇಲೆ ಸಿಟ್ಟು ಬಂದು ಮಗನ ಮೇಲೆ ಕಬ್ಬಿಣದ ಸಲಾಕೆಯಿಂದ ಲಕ್ಷ್ಮೀಕಾಂತನ ಮೇಲೆ ಹಲ್ಲೆ ನಡೆಸಿದ್ದಾನೆ ಈ ವೇಳೆ ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದಾನೆ, ಈ ವೇಳೆ ನೆರೆಹೊರೆಯವರು ಲಕ್ಷ್ಮೀಕಾಂತನ ರಕ್ಷಣೆಗೆ ಬಂದಿದ್ದಾರೆ.
ನೆರೆಹೊರೆಯವರು ಸೇರುತ್ತಲೇ ಕೃಷ್ಣಪ್ಪ ಸ್ಥಳದಿಂದ ಕಾಲ್ಕಿತ್ತಿದ್ದಾನೆ, ಗಂಭೀರ ಗಾಯಗೊಂಡ ಲಕ್ಷ್ಮೀಕಾಂತನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬೆಂಗಳೂರಿನ ನಿಮ್ಮಾನ್ಸ್ ಅಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಕೃಷ್ಣಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿ ಕೃಷ್ಣಪ್ಪನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ಓದಿ: ಕೆಪಿಟಿಸಿಎಲ್ ಅಕ್ರಮ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಡಿವೈಸ್ ನೀಡಿದ್ದ ಆರೋಪಿ ಸೆರೆ