ಕೊರಟಗೆರೆ: ತಾಯಿ ಮಗಳ ಜಗಳ ಒಬ್ಬಳ ಸಾವಿನಲ್ಲಿ ಅಂತ್ಯವಾದ ಘಟನೆ ತಾಲೂಕಿನ ಚಿಕ್ಕಸಾಗ್ಗೇರೆ ಗ್ರಾಮದಲ್ಲಿ ನಡೆದಿದೆ.
ವೇಣುಗೋಪಾಲ್ ಅವರ ಪತ್ನಿ ಲಕ್ಷ್ಮೀದೇವಮ್ಮ (37 ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಿತ್ತಾಡಿಕೊಂಡ ಬಳಿಕ ತಾಯಿ ಕುಪಿತಗೊಂಡು ನಾನೇ ಸಾಯುತ್ತೇನೆ ಎಂದು ಮನೆಯಿಂದ ಹೋದವಳು ನೇರವಾಗಿ ಮಾವತ್ತೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಕ್ಷ್ಮೀದೇವಮ್ಮ ಹಾಗೂ ಮಗಳಾದ ದೀಪಿಕಾ ನಡುವೆ ಜಗಳವಾಗಿದ್ದು, ಭಾನುವಾರ ಮಧ್ಯಾಹ್ನ ಇಬ್ಬರೂ ಮಾತು ಬೆಳೆಸಿ ವಿಕೋಪಕ್ಕೆ ಹೋಗಿ ತಾಯಿ ದ್ವಿಚಕ್ರವಾಹನದಲ್ಲಿ ಹೋರಾಟಗಳು ನೇರವಾಗಿ ಮಾವತ್ತೂರು ಕೆರೆಯ ಬಳಿ ಬಂದು ಅರಸೇಶ್ವರಿ ದೇವಸ್ಥಾನಕ್ಕೆ ಕೈಮುಗಿದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೆರೆ ಏರುವುದನ್ನ ಮೇಕೆ ಮೇಯಿಸುವವರು ನೋಡಿದರಾದರೂ 10-15 ನಿಮಿಷವಾದ ಕಾರಣ ಯಾರೊಬ್ಬರೂ ನೀರಿನಲ್ಲಿ ಮುಳುಗಿ ಮೇಲೆತ್ತುವ ಸಾಹಸಕ್ಕೆ ಕೈ ಹಾಕಲಿಲ್ಲ. ಸಾರ್ವಜನಿಕರು ವಿಚಾರವನ್ನು ಲಕ್ಷ್ಮೀ ದೇವಮ್ಮನವರ ಮನೆಗೆ ಹಾಗೂ ಪೊಲೀಸ್ ಠಾಣೆಗೆ ತಿಳಿಸಿದ ನಂತರ ಅಗ್ನಿಶಾಮಕದಳ ಹಾಗೂ ಈಜು ತಜ್ಞರು ಸೋಮವಾರ ಬೆಳಗ್ಗೆ 9 ಕ್ಕೆ ಮಹಾಲಕ್ಷ್ಮೀಯ ಮೃತ ದೇಹವನ್ನು ಹೊರ ತೆಗೆದಿದ್ದಾರೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ರೇಣುಕಾ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.