Advertisement
ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆ ಕಚೇರಿ ಆವರಣದಲ್ಲಿ ಬಹುಜನ ಸಮಾಜವಾದಿ ಪಕ್ಷ ಮತ್ತು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಘಟಕದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ನವೀನ್ ವಿರುದ್ದ ಪ್ರತಿಭಟನೆ ನಡೆಸಿ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಂಡು ಪತ್ರಕರ್ತರಿಗೆ ರಕ್ಷಣೆ ನೀಡಬೇಕಿದೆ ಎಂದು ಒತ್ತಾಯ ಮಾಡಿದರು.
Related Articles
Advertisement
ಪ್ರತಿಭಟನೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡರಾದ ದಿನೇಶ್, ನಾಗೇಶ್, ಜಬೀವುಲ್ಲಾ, ಸೈಯದ್ ಅರಿಫ್, ಸೈಮನ್, ಮುತ್ತುರಾಜು, ಪ್ರಕಾಶ್, ಸೋಮಶೇಖರ್, ಪಾರೋಕ್, ನಾಗರಾಜು, ಪ್ರಕಾಶ್, ಅರವಿಂದ್, ಮಲ್ಲಣ್ಣ, ಗೋವಿಂದರಾಜು, ಸೈಯದ್ ಸೈಪುಲ್ಲಾ, ನಟರಾಜ್ ಸೇರಿದಂತೆ ಇತರರು ಇದ್ದರು.
ಅಮಾನತಿಗೆ ಆಗ್ರಹ
ಕರ್ತವ್ಯಲೋಪ ಎಸಗಿರುವ ವೈದ್ಯ ಡಾ.ನವೀನ್ ಅಮಾನತಿ ಮಾಡಿ ತನಿಖೆ ನಡೆಸಬೇಕಿದೆ. ವೈದ್ಯಕೀಯ ಸೇವೆಯ ಬಗ್ಗೆ ಇವರಿಗೆ ಮತ್ತೋಮ್ಮೆ ತರಬೇತಿ ಅಗತ್ಯವಿದೆ. ಸನ್ಮಾನ್ಯ ರಾಜ್ಯ ಸರಕಾರ, ಮುಖ್ಯಮಂತ್ರಿ, ಆರೋಗ್ಯ ಸಚಿವ, ಕೇಂದ್ರ ವಾರ್ತ ಮತ್ತು ಪ್ರಸಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಮಹಾನಿರೀಕ್ಷರು, ನಾಗರೀಕ್ಷ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿವರ್ಗ ತಕ್ಷಣ ವೈದ್ಯನ ವಿರುದ್ದ ಕ್ರಮ ಜಗುರಿಸಬೇಕು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗಿದೆ.
ಕೊರಟಗೆರೆ ಪಿಎಸೈ ನಾಗರಾಜು ಎತ್ತಂಗಡಿ
ಡಾ.ನವೀನ್.ಕೆ ಎಂಬಾತನ ಕರ್ತವ್ಯಲೋಪ ಪ್ರಶ್ನಿಸಿದ ಪತ್ರಕರ್ತರ ಮೇಲೆಯೇ ದೈಹಿಕ ಹಲ್ಲೆ ನಡೆಸಿ ತಾನೇ ನೀಡಿದ ಸುಳ್ಳು ದೂರನ್ನು ಪರಿಶೀಲನೆ ನಡೆಸದೇ ಪ್ರಕರಣ ದಾಖಲಿಸಿದ ಕೊರಟಗೆರೆ ಪಿಎಸೈ ನಾಗರಾಜು ಅವರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ. ವೈದ್ಯ ನವೀನ್ ನೀಡಿದ ದೂರು ತಡರಾತ್ರಿ 2 ಗಂಟೆಗೆ ದಾಖಲಾಗಿದೆ. ಪತ್ರಕರ್ತರು ನೀಡಿರುವ ದೂರು 3 ದಿನವಾದರೂ ಪ್ರಕರಣ ದಾಖಲಾಗದೇ ಇರುವುದೇ ಹಲವು ಅನುಮಾನಗಳಿಗೆ ಕಾರಣವಾಗಿದೆ.