Advertisement
ತಾಲೂಕಿನ ಸೋಂಪುರದ ಪುಟ್ಟೇಶ್ವರ ಸ್ವಾಮಿಯ ವಿರಕ್ತ ಮಠದ (ದೊಡ್ಡ ಮಠ)ವನ್ನು ಹಲವು ವರ್ಷಗಳ ಹಿಂದೆ ಯಾರೂ ದಾನಿಗಳು 20 ಎಕರೆ ಭೂಮಿಯನ್ನು ಧಾನ ನೀಡಿ ಸ್ಥಾಪಿಸಿದ್ದರು. ಇಲ್ಲಿ ಸ್ಥಳೀಯ ಭಕ್ತರು ಚಂದ ವಸೂಲು ಮಾಡಿ ಪುಟ್ಟೇಶ್ವರ ದೇವಾಲಯದ ಹಳೆಯ ದೇವಾಲಯವನ್ನು ಕಟ್ಟಡವನ್ನು ಮತ್ತೆ ಹೊಸದಾಗಿ ಕಟ್ಟಿದರು, ಇಲ್ಲಿಗೆ ಪೂಜಾರಿಕಿಗೆ ಬಂದ್ದಿದ ಸ್ವಾಮೀಜಿ ಹಣ ಪಡೆದು ಅವರಿಗೆ ಹಕ್ಕಿಲ್ಲದ್ದಿದರೂ ಮುರಘಮಠಕ್ಕೆ ವಾರಸತ್ವನ್ನು ಪತ್ರದಲ್ಲಿ ನೀಡಿದ್ದಾರೆ ಎಂದು ಆ ಮಠದವರು ಹೇಳಿಕೊಂಡು ತಮಗೆ ಅನುಕೂಲಕರ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಮಠದ ಆಸ್ತಿ ಕಬಳಿಸಲು ಹನ್ನಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು, ಭಕ್ತಾದಿಗಳು ಆರೋಪಿಸಿದ್ದಾರೆ.
ಜೂನ್ 10 ಶುಕ್ರವಾರ ಸೋಂಪುರ ದೊಡ್ಡಮಠವನ್ನು ಮುರಘಾ ಮಠದ ಶಾಖಾ ಮಠವನ್ನಾಗಿ ಮಾಡಿಕೊಳ್ಳಲು ಮತ್ತು ನೂತನ ಸ್ವಾಮೀಜಿಯನ್ನು ನೇಮಿಸಲು ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಗಳು ಚಿತ್ರದುರ್ಗದಿಂದ ಬೆಳಗ್ಗೆ 11 ಗಂಟೆಗೆ ಬಗಿ ಪೊಲೀಸ್ ವ್ಯವಸ್ಥೆಯೊಂದಿಗೆ ಆಗಮಿಸಿದರು, ಸ್ವಾಮೀಜಿಗೂ ಸ್ವಲ್ಪ ಮುಂಚಿತವಾಗಿ ಮಠದ ನೂತನ ಪೀಠಾಧ್ಯಕ್ಷರಾಗಲು ಬಂದ ಬಸವಕಿರಣ ಸ್ವಾಮಿಗಳು ಹಾಗೂ ಮುರುಘಾ ಮಠದ ಕೆಲ ಬೆಂಬಲಿಗರು ಮಠಕ್ಕೆ ಬಂದ್ದಿದರು. ಅಲ್ಲಿಗೆ ಬಂದ ನೂರಾರು ಭಕ್ತರು ಸ್ವಾಮಿಜಿಯವರನ್ನು ಪೀಠಾರೋಹಣ ಕಾರ್ಯ ನಿಲ್ಲಿಸುವಂತೆ ಕೋರಿದರೂ ಪ್ರಯೋಜನವಾಗದೇ ಇದ್ದಾಗ ಕೂಗಾಡಿದರು. ಪೊಲೀಸರು ಅವರನ್ನು ಹೊರಹಾಕಿದರು. ಈ ನಡುವೆ ಶಿವಮೂರ್ತಿ ಮುರುಘಾ ಶರಣ ಶ್ರೀಗಳು ತರಾತುರಿಯಲ್ಲಿ ಬಸವಕಿರಣ ಸ್ವಾಮಿಜಿಗಳಿಗೆ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿದರು ಇದಕ್ಕೆ ಇಬ್ಬರು ಸ್ವಾಮಿಜಿಗಳು ಸಾಕ್ಷಿಯಾಗಿದ್ದರು, ಅಲ್ಲಿಯವರಿಗೂ ಬನ್ನಿ ಮಾತನಾಡೋಣ ಎನ್ನುತ್ತಿದ್ದ ಶಿವಮೂರ್ತಿ ಶ್ರೀಗಳು ಕಾರ್ಯಕ್ರಮ ಮುಗಿದ ಮೇಲೆ ಚಿತ್ರದುರ್ಗಕ್ಕೆ ಬನ್ನಿ ಎಂದು ಹೇಳಿ ಪೋಲೀಸ್ ಬಂದೋಬಸ್ತ್ ನಡುವೆ ಮರಳಿದರು. ನಂತರ ನೂತನ ಸ್ವಾಮಿಜಿ ಮತ್ತು ಭಕ್ತರ ಮುಂದೆ ಪಂಚಪೀಠ ಮತ್ತು ಬಸವತತ್ವದ ವಾದ ವಿವಾದಗಳು ನಡೆದವು.
Related Articles
Advertisement
ಈ ಘಟನೆಯಲ್ಲಿ ಮಧುಗಿರಿ ಡಿವೈಎಸ್‌ಬಿ ರಾಮಕೃಷ್ಣ ಮತ್ತು ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರರ ಪೊಲೀಸ್ ತಂಡವು ಭಕ್ತರನ್ನು ತಡೆಯಲು ಹರ ಸಾಹಸ ಪಟ್ಟಿತು. ನೂಕು ತಳ್ಳಾಟದ ಮದ್ಯೆ ಜನರನ್ನು ಸಮಾಧಾನ ಪಡಿಸಲು ಸಾಕಷ್ಟು ಶ್ರಮವಹಿಸಿ ಭಕ್ತರ ಆಕ್ರೋಶ ತಡೆಯಲು ಶಕ್ತಿ ಮೀರಿ ಪ್ರಯತ್ನಿಸಿದರು.