Advertisement

ಕೊರಟಗೆರೆ: ಪರಮೇಶ್ವರ್ ಸೋಲಿಸಲು ಭಾವನಾತ್ಮಕ ಚಾಟಿ ಬೀಸಿದ ಹೆಚ್‌ಡಿಡಿ

07:55 PM Apr 24, 2023 | Team Udayavani |

ಕೊರಟಗೆರೆ: ಲೋಕಸಭಾ ಚುನಾವಣೆಗೆ ನಾನು ನಿಲುವುದಿಲ್ಲ ಎಂದು ಹೇಳಿದೆ. ಆದರೇ ಕಾಂಗ್ರೆಸ್ ಪಕ್ಷದವರು ನನಗೇ ತುಮಕೂರಿಗೆ ಕರೆತಂದು ಸೋಲಿಸಿ ಅವಮಾನ ಮಾಡಿದರು.ಸೋಲಿಸಿ ಅವಮಾನ ಮಾಡಿದ ನೋವು ಇನ್ನೂ ಕಾಡುತ್ತಿದೆ. ನಮ್ಮೇಲ್ಲರ ಆತ್ಮೀಯ ಸುಧಾಕರ ಲಾಲ್ ಗೆಲ್ಲಿಸಿ ನನ್ನ ಕಣ್ಣೀರು ಒರೆಸಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಾನು 1994 ರಲ್ಲಿ ಸಿಎಂ ಆಗಿದ್ದಾಗ 11 ಕ್ಷೇತ್ರದಲ್ಲಿ 9 ಕ್ಷೇತ್ರ ಗೆಲ್ಲಿಸಿದ ತುಮಕೂರು ಜಿಲ್ಲೆಯ ಪುಣ್ಯಾತ್ಮರು ನೀವು. ಕಾಂಗ್ರೆಸ್ ನಾಯಕರು ನನಗೇ ಅವಮಾನ ಮಾಡಿದ ನೋವು ಇನ್ನೂ ನನ್ನನ್ನು ಕಾಡುತ್ತಿದೆ. ಸುಧಾಕರಲಾಲ್ ಬಡ ಕುಟಂಬದ ಒಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತ.
25 ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಬಡ ಜನರ ಸೇವೆ ಮಾಡುತ್ತಿದ್ದಾನೆ. ನೀವು ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿದ್ದಿರಾ 2023 ಕ್ಕೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ. ಕುಮಾರಸ್ವಾಮಿ ಸರಕಾರ ಸುಧಾಕರಲಾಲ್‌ಗೆ ವಿಶೇಷ ಸ್ಥಾನಮಾನ ನೀಡುತ್ತಾರೆ ಎಂದು ಭರವಸೆ ನೀಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಜೆಡಿಎಸ್ ಮುಸ್ಲಿಂ ಸಮಾಜಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಯಾವುದೇ ಪಕ್ಷ ರಾಜ್ಯಾಧ್ಯಕ್ಷನ ಪಟ್ಟ ನೀಡಿಲ್ಲ ಆದರೇ ಜೆಡಿಎಸ್ ನನಗೇ ನೀಡಿದೆ. ಮುಸ್ಲಿಂ ಸಮಾಜ ಜೆಡಿಎಸ್ ಪಕ್ಷದ ಪರವಾಗಿ ಇರಬೇಕಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿಗೆ ರೈತರ ಚಿಂತೆ ಆದರೇ ಪರಮೇಶ್ವರ್‌ಗೆ ಜೀರೋ ಟ್ರಾಫಿಕ್ ಚಿಂತೆ. ಮುಸ್ಲಿಂ ಮೀಸಲಾತಿ ರದ್ದತಿಯ ಬಗ್ಗೆ ಪರಮೇಶ್ವರ ಮಾತನಾಡಿದ್ರಾ ನೀವೇ ಹೇಳಿ. ಚುನಾವಣೆ ಭಾಷಣ ಮತ್ತು ೧ಸಾವಿರ ಹಣಕ್ಕೆ ನಾವು ಯಾಮಾರಬಾರದು ಎಂದು ಮನವಿ ಮಾಡಿದರು.

ತುಮಕೂರು ನಗರಕ್ಕೆ ಕಾಂಗ್ರೆಸ್ ಪಕ್ಷದಿಂದ ವೀಕ್ ಅಭ್ಯರ್ಥಿ ಹಾಕಿ ಬಿಜೆಪಿ ಜೊತೆ ಟೈಅಪ್ ಮಾಡಿಕೊಂಡರು. ಕೊರಟಗೆರೆ ಕ್ಷೇತ್ರಕ್ಕೆ ಜೀರೋ ಟ್ರಾಫಿಕ್ ಬೇಕಾ ಅಥವಾ ನಿಮ್ಮ ಮನೆ ಮಗ ಸುಧಾಕರಲಾಲ್ ಬೇಕಾ ಯೋಚಿಸಿ ಮತನೀಡಿ. ಮುಸ್ಲಿಂ ಸಮಾಜಕ್ಕೆ ಶೇ.4 ರಷ್ಟು ಮೀಸಲಾತಿ ಮತ್ತು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದವರು ದೇವೇಗೌಡರು ಎಂದರು.

Advertisement

ಪಿ.ಆರ್.ಸುಧಾಕರಲಾಲ್ ಮಾತನಾಡಿ, 25 ವರ್ಷ ಕೊರಟಗೆರೆ ಕ್ಷೇತ್ರದಲ್ಲಿ ಜನಸೇವೆ ಮಾಡಿದ್ದೇನೆ. ನೀರಾವರಿ, ಸಾಗುವಳಿ ಚೀಟಿ ಮತ್ತು ಗಂಗಾ ಕಲ್ಯಾಣಕ್ಕೆ ಆದ್ಯತೆ ಹಾಗೂ 35 ಸಾವಿರಕ್ಕೂ ಅಧಿಕ ಜನರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿದ್ದೇನೆ. ಇನ್ನೂ 15 ದಿನ ನನ್ನ ಜೊತೆ ಇರಿ ಮುಂದಿನ 5 ವರ್ಷ ನಿಮ್ಮ ಮನೆ ಮಗನಂತೆ ಕೆಲಸ ಮಾಡ್ತೀನಿ. ನನ್ನ ಹತ್ತಿರ ಹಣ ಬಲವಿಲ್ಲ ಆದರೇ ಜನ ಬಲ ಇದೆ. ಜೆಡಿಎಸ್ ಕಾರ್ಯಕರ್ತರೇ ನನ್ನ ಗೆಲುವಿನ ಶಕ್ತಿ ಆಗುತ್ತಾರೆ ಎಂದರು.

ಜೆಡಿಎಸ್ ಹಿಂದುಳಿದ ವರ್ಗಗಳ ಕಾರ್ಯಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ನಿಮ್ಮ ಮನೆ ಬಾಗಿಲಿಗೆ ಮತ ಯಾಚನೆಗೆ ಬರುವ ಜನಸೇವಕ ಮತ್ತೆ ನಿಮ್ಮ ಬಳಿಯ ಇರ್ತಾರೇ. ಚುನಾವಣೆ ವೇಳೆಯಲ್ಲೇ ಕೊರಟಗೆರೆ-ತುಮಕೂರು ನಗರಕ್ಕೆ ಮುಖಂಡರನ್ನು ಕರೆಸಿಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ ನಾಯಕ ಮುಂದೆ ನಿಮ್ಮ ಕೈಗೇ ಸಿಗ್ತಾರೇ. ೨೦೨೩ಕ್ಕೆ ಅಭಿವೃದ್ದಿಯ ಚಿಂತನೆಯುಳ್ಳ ಜನನಾಯಕ ಸುಧಾಕರಲಾಲ್ ಗೆಲುವು ಖಚಿತ ಎಂದು ತಿಳಿಸಿದರು.

ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಷನ್‌ಬೇಗ್, ಎಸ್‌ಸಿ ಘಟಕದ ಕಾರ್ಯಾಧ್ಯಕ್ಷ ಶ್ರೀರಾಮ್, ಜಿಲ್ಲಾಧ್ಯಕ್ಷ ಅಂಜಿನಪ್ಪ, ಮಹಿಳಾಧ್ಯಕ್ಷೆ ಕುಸುಮಾ, ಹಿರಿಯ ಮುಖಂಡ ಅಂದಾನಪ್ಪ, ಕೊರಟಗೆರೆ ಕಾರ್ಯಾಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್,ಉಪಾಧ್ಯಕ್ಷ ಮಂಜುನಾಥ, ಮುಖಂಡರಾದ ಸಿದ್ದಮಲ್ಲಪ್ಪ, ಪ್ರಕಾಶ್, ಫಾರುಕ್, ಲಕ್ಷ್ಮೀನರಸಪ್ಪ, ವೆಂಕಟೇಶ್, ರಮೇಶ್, ಲಕ್ಷ್ಮೀಕಾಂತ, ಸಂತೋಷಗೌಡ, ಕಿಶೋರ್, ನಯಾಜ್, ರವಿಕುಮಾರ್, ಮರುಡಪ್ಪ, ರೇಣುಕಾ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next