ಕೊರಟಗೆರೆ: ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ತಳ ಮಟ್ಟದಲ್ಲಿದ್ದ ಭಾರತೀಯ ಜನತಾ ಪಾರ್ಟಿಯನ್ನು ಸತತ 4ವರ್ಷಗಳಿಂದ ಜನತೆಯ ಕಷ್ಟಗಳಿಗೆ ಸ್ಫಂಧಿಸುವುದರ ಮೂಲಕ ಬಿಜೆಪಿಯ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿದ್ದೇನೆ.ಈ ಬಾರಿ ನನಗೆ ಟಿಕೇಟ್ ನೀಡಿದರೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸುವುದು ಖಚಿತ ಎಂದು ಬಿಜೆಪಿ ಆಕ್ಷಾಂಕಿ ಅಭ್ಯರ್ಥಿ ಕೆ.ಎಂ ಮುನಿಯಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮುನಿಯಪ್ಪರವರ ನಡೆ ಹಳ್ಳಿಯ ಕಡೆ ಎಂಬ ವಿಶೇಷ ಕಾರ್ಯಕ್ರಮದ ಮುಖೇನ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಡಿ ಭಾಗದ ವೀರನಾಗೇನಹಳ್ಳಿ ಗ್ರಾಮದಲ್ಲಿ ಪಕ್ಷದ ಪ್ರಚಾರದ ವೇಳೆ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ, ಅಂದಿನಿಂದಲೂ ಇಲ್ಲಿಯವರೆಗೂ ಕ್ಷೇತ್ರದಲ್ಲಿ ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಮುಂದೆಯೂ ಸಹ ಎಲ್ಲರ ಕಷ್ಟಗಳಿಗೆ ಸ್ಪಂದಿಸುವುದೇ ನನ್ನ ಮುಖ್ಯ ಗುರಿ. ರಾಜ್ಯದ ಹಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೇನೆ ಅವರು ನಮ್ಮೆಲ್ಲರ ಬೆಂಬಲ ನಿಮಗಿದೆ ಎಂದು ಭರವಸೆ ಕೂಡ ನೀಡಿದ್ದಾರೆ ಎಂದು ಹೇಳಿದರು.
ಮತದಾರ ಪ್ರಭುಗಳು ಮತ್ತು ಕಾರ್ಯಕರ್ತರು ಹೆಚ್ಚಾಗಿ ನನ್ನ ಪರವಾಗಿದ್ದು, ರಾಜ್ಯದ ಬಿಜೆಪಿ ಪಕ್ಷದ ನಾಯಕರು ನನ್ನ ಜನಪರ ಸೇವೆಯನ್ನು ಗುರುತಿಸಿ ಚುನಾವಣೆಗೆ ಸ್ಪರ್ದಿಸಲು ಟಿಕೆಟ್ ನ್ನು ನನಗೆ ನೀಡಬೇಕು ಎಂದರು.
ಮುನಿಯಪ್ಪನವರ ಸಾಮಾಜಿಕ ಸೇವೆಯ ಚಿತ್ರಣದೊಂದಿಗೆ 2023 ರ ನೂತನ ವರ್ಷದ ಕ್ಯಾಲೆಂಡರ್‌ನಲ್ಲಿ ಮುದ್ರಿಸಿ ಪುರವರ ಹೋಬಳಿ ಗ್ರಾಮಗಳಿಗೆ ಮತ್ತು ಹೊಳವನಹಳ್ಳಿ ಹೋಬಳಿ ಸಂಬಂಧಿಸಿದ ಗ್ರಾಮಗಳ ಜನರಿಗೆ ವಿತರಿಸಿ ಹೊಸ ವರ್ಷದ ಶುಭಾಶಯ ಕೋರಿ ಪಕ್ಷದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಈ ವೇಳೆ ಉಪಾಧ್ಯಕ್ಷ ರಾಜಣ್ಣ, ಜಿಲ್ಲಾ ಕಮಿಟಿ ಸದಸ್ಯ ಗೋವಿಂದರೆಡ್ಡಿ, ನಾಮಿನಿ ಸದಸ್ಯ ಚಂದ್ರಪ್ಪ, ಕೋಳಾಲ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜಣ್ಣ, ಆನಂದ್, ಜಗದೀಶ್, ಸೇರಿದಂತೆ ಹೆಚ್ಚಿನ ಕಾರ್ಯಕರ್ತರು ಹಾಜರಿದ್ದರು.
ಜ. 26ಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಮತ್ತು ಪುತ್ರ ವಿಜಯೇಂದ್ರ ಕ್ಷೇತ್ರಕ್ಕೆ ಭೇಟಿ.
ಬಿಜೆಪಿ ಪಕ್ಷವನ್ನು ಇನ್ನಷ್ಟು ಕ್ಷೇತ್ರದಲ್ಲಿ ಬಲಪಡಿಸುವ ದೃಷ್ಠಿಯಿಂದ ಜ26 ಕ್ಕೆ ಕೊರಟಗೆರೆ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರು ಹಾಗೂ ಪುತ್ರರಾದ ವಿಜಯೇಂದ್ರರವರು ಭೇಟಿ ನೀಡಲಿದ್ದಾರೆ. ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಲಿದ್ದು, ಹೆಚ್ಚಿನ ಸಂಖೈಯಲ್ಲಿ ಕ್ಷೇತ್ರದ ಜನರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಕಾಂಕ್ಷಿ ಅಭ್ಯರ್ಥಿ ಮುನಿಯಪ್ಪ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಸಾರ್ವಜನಿಕ ಸಭೆ, ರ‍್ಯಾಲಿ ನಿಷೇಧಿಸಿದ ಆಂಧ್ರ ಸರ್ಕಾರ