ಕೊರಟಗೆರೆ: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎನ್ನುವ ನಾಮಫಲಕ ಶಾಲೆಯಲ್ಲಿದ್ದರೂ ಮದ್ಯವ್ಯಸನಿಗಳು ಶುಕ್ರವಾರ ರಾತ್ರಿ ಸರಕಾರಿ ಉರ್ದು ಶಾಲೆಯ ಬಾಗಿಲನ್ನು ಮುರಿದು ಶಾಲೆಯ ಒಳಗಡೆಯೇ ಮದ್ಯಾರಾಧನೆ ಮಾಡಿ ಹೋಗಿರುವ ಘಟನೆ ಹೊಳವನಹಳ್ಳಿಯಲ್ಲಿ ನಡೆದಿದೆ.
ಶಾಲೆಯ ಪಕ್ಕದಲ್ಲಿಯೇ ಉಪ ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ ಕಚೇರಿ ಜನನಿಬಿಡ ಪ್ರದೇಶ ವಿದ್ದರೂ ಸಹ ಕುಡುಕರು ತಮ್ಮ ಕುಡಿತದ ಅಮಲಿಗೆ ಶಾಲೆಯನ್ನು ಬಳಸಿಕೊಂಡಿರುವುದು ಆಕ್ರೋಶಕ್ಕೆ ಗುರಿಯಾಗಿದೆ.
ಈ ರೀತಿಯ ಘಟನೆಗಳು ಹಲವು ಬಾರಿ ಶಾಲೆಯಲ್ಲಿ ನೇಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್ ಡಿ ಎಂ ಸಿ ಸದಸ್ಯರದ ಸುರೇಶ್ ಮತ್ತು ಸಲ್ಮಾ ಬಾನು ಆರೋಪಿಸಿದ್ದಾರೆ. ಇನ್ನಾದರೂ ಶಾಲೆಗೆ ಸೂಕ್ತ ಬಂದೋಬಸ್ತ್ ಒದಗಿಸಿ ಉತ್ತಮ ರೀತಿಯಲ್ಲಿ ಶಾಲೆಯ ವಾತಾವರಣವನ್ನು ಕಾಪಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ನಿತ್ಯವೂ ನಮಗೆ ಇದೊಂದು ಮಾಮೂಲಿ ದೃಶ್ಯವಾಗಿದೆ ಎಲ್ಲಿದೆ ಮದ್ಯವ್ಯಸನಿಗಳು ಮದ್ಯಪಾನ ಮಾಡಿ ಬಾಟಲ್, ಬಿಡಿ, ಸಿಗರೇಟ್ ಮತ್ತು ಗುಟ್ಕಾದ ಪ್ಯಾಕೆಟ್ ನಮ್ಮ ಕಣ್ಣಿಗೆ ರಾಚುತ್ತಿರುತ್ತದೆ ಶಾಲೆ ನಡೆಯುವ ಸಂದರ್ಭದಲ್ಲಿ ನಿತ್ಯವೂ ನಾವು ಇವುಗಳನ್ನು ಹೊರಹಾಕಿ ಪಾಠ ಮಾಡುವಂತಹ ಅನಿವಾರ್ಯತೆ ಇದೆ.
ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ, ಉರ್ದು ಶಾಲೆ
ಕೆಪಿಎಸ್ ಶಾಲೆ ಆವರಣದಲ್ಲಿಯೇ ಉರ್ದು ಶಾಲೆ ಇದೆ, ಈ ರೀತಿಯ ಘಟನೆಗಳು ಹಲವು ಬಾರಿ ನಡೆದಿದೆ, ಪೊಲೀಸ್ ಠಾಣೆ ಶಾಲೆಯ ಕಾಂಪೌಂಡ್ ಗೆ ಹೊಂದಿಕೊಂಡಂತೆ ಇದೆ, ಆದರೂ ಮದ್ಯವ್ಯಸನಿಗಳ ಕಿರಿಕಿರಿ ಮಿತಿಮೀರಿದೆ, ಶಾಲೆಗೆ ಭೇಟಿ ನೀಡಿ, ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆಗೆ ಲಿಖಿತ ದೂರನ್ನು ನೀಡುತ್ತೇನೆ.
ಎನ್. ಎಸ್ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ, ಕೊರಟಗೆರೆ