Advertisement
250ವರ್ಷಗಳ ಇತಿಹಾಸ ಇರುವ ಕೊರಟಗೆರೆಯ ಧರ್ಮಸಾಗರ ಕೆರೆಗೆ 426ಎಕರೆ ಭೂ ವಿಸ್ತೀರ್ಣವಿದೆ. ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆಯೇ ಕೊರಟಗೆರೆಯಲ್ಲಿ ಇಲ್ಲ-ಸ್ಥಳೀಯ ಕ್ಯಾಮೇನಹಳ್ಳಿ ಗ್ರಾಪಂಗೆ ಕೆರೆಯ ರಕ್ಷಣೆ ಮತ್ತು ಅಭಿವೃದ್ದಿಯ ಕಾಳಜಿಯು ಇಲ್ಲದೇ ಭೂಗಳ್ಳರ ಹಾವಳಿಗೆ ಕೆರೆಯು ಬಲಿಯಾಗಿ ಅಂತರ್ಜಲ ಮಟ್ಟವು ಮತ್ತೆ ಪಾತಾಳಕ್ಕೆ ಕುಸಿದಿದೆ.
Related Articles
Advertisement
ಅನುದಾನ ಬರುತ್ತೇ ಅಭಿವೃದ್ದಿ ಆಗಿಲ್ಲ
ಜಯಮಂಗಲಿ ನದಿ ಪಾತ್ರದ ಧರ್ಮಸಾಗರ ಕೆರೆಯು ತುಂಬಿ ಹರಿದರೇ 95ಗ್ರಾಮದ ರೈತರಿಗೆ ಅಂತರ್ಜಲದ ವರದಾನ. ಸಣ್ಣ ನೀರಾವರಿ ಮತ್ತು ಕ್ಯಾಮೇನಹಳ್ಳಿ ಗ್ರಾಪಂಯಿಂದ ಕೆರೆಯ ಅಭಿವೃದ್ದಿ ಶೂನ್ಯ. ಸರಕಾರದಿಂದ ಪ್ರತಿವರ್ಷವು ಅನುದಾನ ಬರುತ್ತೇ ಅಷ್ಟೇ, ಆದರೇ ಕಾಮಗಾರಿ ಆಗೋದೇ ಗೊತ್ತಾಗಲ್ಲ. ಇನ್ನೂ ನರೇಗಾ ಕಾಮಗಾರಿಯು ಗ್ರಾಪಂ ಸದಸ್ಯರ ಅನುಕೂಲಕ್ಕೆ ತಕ್ಕಂತೆ ಮಾಡ್ತಾರೇ. 250ಎಕರೇ ವಿಸ್ತೀರ್ಣದಲ್ಲಿ ಸೀಮೆಜಾಲಿಯ ಮರಗಳು ಬಿಟ್ಟರೇ ಅಭಿವೃದ್ದಿಯು ಶೂನ್ಯ.
ಭೂಗಳ್ಳರ ಹಾವಳಿಗೆ ಗಿಡಗಳ ನಾಶ
ಪರಿಸರ ಮತ್ತು ಅಂತರ್ಜಲ ರಕ್ಷಣೆಗಾಗಿ ಸಾಮಾಜಿಕ ವಲಯ ಅರಣ್ಯದಿಂದ ಕಳೆದ 10ವರ್ಷಗಳಿಂದ ಸಂರಕ್ಷಣೆ ಮಾಡಿದ್ದ 1500ಕ್ಕೂ ಹೆಚ್ಚು ಹಕ್ರ್ಯೂಲೇಸ್, ಸೀಮೆತುಂಗಡಿ, ಹೊಂಗೆ ಮರಗಳು ಭೂಗಳ್ಳರ ಹಾವಳಿಯಿಂದ ರಾತ್ರೋರಾತ್ರಿ ಕರಗಿವೆ. ಲಕ್ಷಾಂತರ ರೂ ಬೆಲೆ ಬಾಳುವ ಮರಗಿಡ ನಾಶ ಆಗಿರುವ ಮಾಹಿತಿಯೇ ಗ್ರಾಪಂ ಮತ್ತು ಅರಣ್ಯ ಇಲಾಖೆಗೂ ಗೊತ್ತಿಲ್ಲ. ಬೆಂಗಳೂರಿನ ಭೂಗಳ್ಳರಿಗೆ ಅಧಿಕಾರಿ ವರ್ಗದ ಮೌನದ ಶ್ರೀರಕ್ಷೆಯು ಅರಣ್ಯ ನಾಶಕ್ಕೆ ಬಲನೀಡಿದೆ.
ಸರ್ವೆಗೆ ತಹಶೀಲ್ದಾರ್ ಖಡಕ್ ಆದೇಶ
ರೈತಸಂಘ ಕಳೆದ 10ವರ್ಷದಿಂದ ಧರ್ಮಸಾಗರ ಕೆರೆಯ ಸರ್ವೆಗೆ ಮನವಿ ಮಾಡಿದ್ರು ಪ್ರಯೋಜನ ಆಗಿರಲಿಲ್ಲ. ರೈತಸಂಘದ ದೂರಿನ ಅನ್ವಯ ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ ರೈತರ ಜೊತೆ ಗೂಡಿ ಕೆರೆಯ ನಾಲ್ಕುದಿಕ್ಕಿನ ಮಾಹಿತಿ ಕಲೆಹಾಕಿದ್ದಾರೆ. ಕೆರೆಯ ಭೂಮಿ ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಮಾಡಿಸ್ತೇನೆ. ಕಂದಾಯ ಮತ್ತು ಸರ್ವೆ ಇಲಾಖೆ ಜಂಟಿಯಾಗಿ ಸರ್ವೆ ನಡೆಸುವಂತೆ ಕೆರೆಯಲ್ಲಿಯೇ ಅಧಿಕಾರಿಗಳಿಗೆ ಖಡಕ್ ಆದೇಶ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಭೂಗಳ್ಳರ ಹಾವಳಿಗೆ ಚಿಕ್ಕಾವಳ್ಳಿಯ ಧರ್ಮಸಾಗರ ಕೆರೆಯ 50ಎಕರೇ ಭೂಮಿ ಕರಗಿದೆ. ಅರಣ್ಯದಿಂದ ಬೆಳೆಸಿದ ಮರಗಿಡ ಮಾಯವಾಗಿ ಎಸ್ಟೇಟ್ ತಲೆ ಎತ್ತಿವೆ. 95ಗ್ರಾಮದ ರೈತರ ಜೀವನಾಡಿಯ ಕೆರೆಗೆ ರಕ್ಷಣೆ ಮತ್ತು ನಿರ್ವಹಣೆಯೇ ಯಕ್ಷಪ್ರಶ್ನೆ. ರೈತಸಂಘದ ದೂರಿನ ಅನ್ವಯ ತಹಶೀಲ್ದಾರ್ ಸರ್ವೆಗೆ ಆದೇಶ ಮಾಡಿರುವುದು ಸಂತಷದ ವಿಚಾರ.
-ಸಿದ್ದರಾಜು. ಅಧ್ಯಕ್ಷ, ರೈತಸಂಘ ಕೊರಟಗೆರೆ
ಅನುಧಾನ ಬರುತ್ತೇ ಆದರೇ ಅಭಿವೃದ್ದಿ ಮಾತ್ರ ಆಗೋದಿಲ್ಲ. ಧರ್ಮಸಾಗರ ಕೆರೆ ತುಂಬಿದ್ರು ಒಂದೇ ವರ್ಷಕ್ಕೆ ಖಾಲಿ ಆಯ್ತು. ಧರ್ಮಸಾಗರ ಕೆರೆಯ 250ಎಕರೇಯಲ್ಲಿ ಸೀಮೆಜಾಲಿ ಗಿಡಗಳು ಬೆಳೆದು ನಿಂತಿವೆ. ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ದಿ ಆಗಿಲ್ಲ. ನರೇಗಾ ಯೋಜನೆಯು ಗ್ರಾಪಂ ಸದಸ್ಯರಿಗೆ ಮಾತ್ರ ಅನುಕೂಲ ಅಷ್ಟೆ.
-ರಾಜಗೋಪಾಲ್. ರೈತ, ಕೋಡ್ಲಹಳ್ಳಿ
ಚಿಕ್ಕಾವಳ್ಳಿಯ ಧರ್ಮಸಾಗರ ಕೆರೆ ತುಂಬಿದ್ರೇ ಅಂತರ್ಜಲ ಅಭಿವೃದ್ದಿ ಆಗುತ್ತೇ. ಕೆರೆಗಳ ಒತ್ತುವರಿ ಮಾಡಿ ತೋಟ ಕಟ್ಟಿದ್ರೇ ಮತ್ತೇ ಪಶ್ಚಾತಾಪ ಪಡ್ತಾರೇ. ರೈತರ ಜೊತೆ ಬೇಟಿನೀಡಿ ಪರಿಶೀಲನೆ ನಡೆಸಿದ್ದೇನೆ. ಕಂದಾಯ ಮತ್ತು ಸರ್ವೆ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಒತ್ತುವರಿ ತೆರವು ಮಾಡ್ತೀವಿ.– ಮಂಜುನಾಥ.ಕೆ. ತಹಶೀಲ್ದಾರ್. ಕೊರಟಗೆರೆ ವರದಿ: ಸಿದ್ದರಾಜು. ಕೆ ಕೊರಟಗೆರೆ