Advertisement

ಕೊರಟಗೆರೆ: ಹಲವೆಡೆ ಜಪ್ತಿ ಮಾಡಿದ್ದ ಮದ್ಯ ಅಧಿಕಾರಿಗಳಿಂದ ನಾಶ

06:15 PM Mar 23, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ವಿವಿಧೆಡೆ ಜಪ್ತಿ ಮಾಡಿದ್ದ ಮದ್ಯವನ್ನು 211.680 ಲೀಟರ್ ಮದ್ಯ, 5.580 ಲೀಟರ್ ಬಿಯರ್ ಮತ್ತು 16.400 ಲೀಟರ್ ಸೇಂದಿಯನ್ನು ಅಬಕಾರಿ ಅಧಿಕಾರಿ ಶ್ರೀಲತಾ ಮತ್ತು ತಂಡದ ಸಿಬ್ಬಂದಿಗಳು ಬುಧವಾರ ನಾಶ ಮಾಡಿದ್ದಾರೆ.

Advertisement

ತುಮಕೂರು ಜಿಲ್ಲೆಯ ಮಾನ್ಯ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಹಾಗೂ ಮಧುಗಿರಿ ವಿಭಾಗದ ಮಾನ್ಯ ಉಪ ಅಧೀಕ್ಷಕರ ನೇತೃತ್ವದಲ್ಲಿ ಉಪ ತಹಶಿಲ್ದಾರ್, ಕೆ ಎಸ್ ಬಿಸಿಎಲ್ ಡಿಪೋ ತುಮಕೂರು,ಮತ್ತು ಸ್ಥಳೀಯ ಪಂಚರ ಸಮಕ್ಷಮದಲ್ಲಿ ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಪಟ್ಟಣ ಪಂಚಾಯತಿ ಕಸ ತ್ಯಾಜ್ಯ ವಿಲೇವಾರಿ ಘಟಕ ಬೋಡ ಬಂಡೇನಹಳ್ಳಿ ರಸ್ತೆ ಕೊರಟಗೆರೆ ಟೌನ್ ಇಲ್ಲಿ ಅಧಿಕಾರಿಗಳ ಸಮಕ್ಷಮದಲ್ಲಿ ಮದ್ಯವನ್ನು ನಾಶಪಡಿಸಲಾಗಿದೆ.

ನಾಶ ಪಡಿಸುವ ಸಮಯದಲ್ಲಿ ಮಧುಗಿರಿಯ ಅಬಕಾರಿ ಉಪ ಅಧೀಕ್ಷಕರಾದ ಸುರೇಶ್.ಆರ್ ಕೆಎಸ್ ಬಿಸಿಎಲ್ ಘಟಕ ತುಮಕೂರು ಉಪ ವಿಭಾಗದ ಕೆ.ನಾರಾಯಣ್, ಉಪ ತಹಶಿಲ್ದಾರ್ ಹೆಚ್ ಕೆ. ಚಂದ್ರಪ್ಪ, ಕೊರಟಗೆರೆಯ ಅಬಕಾರಿ ನಿರೀಕ್ಷಕರಾದ ಶ್ರೀ ಲತಾ, ಉಪ ನಿರೀಕ್ಷಕರಾದ ವೈಷ್ಣವಿ ಕುಲಕರ್ಣಿ,ಹೆಚ್.ಜಿ ಲೀಲಾ ವೆಂಕಟೇಶ್,ಸಿಬ್ಬಂದಿಗಳಾದ ಹಮೀದ್ ಬುಡಕಿ,ಮಲ್ಲಿಕಾರ್ಜುನ್, ಮಂಜುಳಾ,  ಕಿರಣ್ ಕುಮಾರ್ ಇತರರು ಹಾಜರಿದ್ದರು‌.

Advertisement

Udayavani is now on Telegram. Click here to join our channel and stay updated with the latest news.

Next