Advertisement
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಮದ ಸಮೀಪದ ಸಸ್ಯಕ್ಷೇತ್ರದಲ್ಲಿ ಘಟನೆ ಜರುಗಿದೆ. ಬೈಚಾಪುರ ಗ್ರಾಮದ ಸರ್ವೇ ನಂ.43 ರಲ್ಲಿ 1 ಎಕರೇ 07 ಗುಂಟೆ ಸರಕಾರಿ ಭೂಮಿಯಿದೆ.1983 ರಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ನೇಡುತೋಪು ಹೆಸರಿನಲ್ಲೇ ಪಹಣಿ ಬರುತ್ತಿದೆ. 2019 ರಲ್ಲಿ ಏಕಾಏಕಿ ಕಂದಾಯ ಮತ್ತು ಸರ್ವೆ ಇಲಾಖೆ ಸ್ಥಳ ಪರಿಶೀಲನೆ ನಡೆಸದೇ 20ಗುಂಟೆ ಭೂಮಿಯನ್ನು ಬೈಚಾಪುರದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಸಾಮಾನ್ಯ ಜನತೆಯ ಶ್ಮಶಾನಕ್ಕೆ ಮೀಸಲಿಟ್ಟು ಮಂಜೂರು ಮಾಡಿದೆ.
Related Articles
Advertisement
ಬೈಚಾಪುರ ಸಮೀಪದ ಸಸ್ಯಕ್ಷೇತ್ರಕ್ಕೆ ಆಪತ್ತು..ಸಾಮಾಜಿಕ ವಲಯ ಅರಣ್ಯ ಇಲಾಖೆಯು 1983 ರಲ್ಲಿ ಪ್ರಾರಂಭವಾದ ವೇಳೆಯೇ ಬೈಚಾಪುರದಲ್ಲಿ ಸಸ್ಯಕ್ಷೇತ್ರ ಪ್ರಾರಂಭ. 40 ವರ್ಷದಿಂದ ಸಸ್ಯಕ್ಷೇತ್ರಕ್ಕೆ ಅವಶ್ಯಕತೆ ಇರುವ ೪ಕೊಳವೆಬಾವಿ, ಓವರ್‌ಹೇಟ್ ಟ್ಯಾಂಕು, ಭದ್ರತಾ ಕೊಠಡಿ, ನೀರಿನ ತೊಟ್ಟಿ, ಪೈಪ್‌ಲೈನ್, ಶೌಚಾಲಯ, ತಂತಿಬೇಲಿ ಅವವಡಿಕೆ ಮಾಡಲಾಗಿದೆ. ಪ್ರತಿವರ್ಷ ಸಸ್ಯಕ್ಷೇತ್ರದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ೧ಲಕ್ಷಕ್ಕೂ ಅಧಿಕ ಸಸಿಗಳ ಪೋಷಣೆ ಮಾಡಿ ರೈತರಿಗೆ ವಿತರಣೆ ಮಾಡ್ತಾರೇ. ೪೦ವರ್ಷದಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಹೆಸರಿನಲ್ಲಿ ಇರುವ ಸಸ್ಯಕ್ಷೇತ್ರದ ಭೂಮಿಯು ಕಂದಾಯ ಇಲಾಖೆಯ ಯಡವಟ್ಟಿನಿಂದ ಆಪತ್ತು ಎದುರಾಗಿದೆ. ದಲಿತರಿಗೆ ನದಿ-ಕೆರೆಕಟ್ಟೆಗಳೇ ಶ್ಮಶಾನ
ಬೈಚಾಪುರ ಗ್ರಾಮದಲ್ಲಿ 125 ಕ್ಕೂ ಅಧಿಕ ದಲಿತ ಕುಟುಂಬಗಳಿವೆ. 50 ವರ್ಷದಿಂದ ಬೈಚಾಪುರದ ದಲಿತರಿಗೆ ಶ್ಮಶಾನವೇ ಮರೀಚಿಕೆ ಆಗಿದೆ. ಜಯಮಂಗಲಿ ನದಿಯ ದಡ ಮತ್ತು ಕೆರೆಕಟ್ಟೆಗಳಲ್ಲಿ ಮೃತವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುತ್ತಾರೆ. ಮಳೆಯಾದರೆ ನದಿಯು ರಭಸವಾಗಿ ಹರಿದು ಸಮಾಧಿಗಳೇ ಕೊಚ್ಚಿಹೋಗುತ್ತಿವೆ. ಬೈಚಾಪುರ ಗ್ರಾಮದ ಅಕ್ಕಪಕ್ಕದಲ್ಲಿ ಸರಕಾರಿ ಜಮೀನೇ ಇಲ್ಲದಾಗಿದೆ. 3 ಕೀಮೀ ದೂರಕ್ಕೆ ಮೃತದೇಹ ಸಾಗಿಸಲು ನಮ್ಮಿಂದ ಆಗೋದಿಲ್ಲ. ಸರಕಾರ ನಮಗೇ ಮಂಜೂರು ಮಾಡಿರುವ ಜಾಗವೇ ನಮಗೇ ಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಬೈಚಾಪುರದ ದಲಿತರಿಗೆ50 ವರ್ಷದಿಂದ ಸ್ಮಶಾನವೇ ಇಲ್ಲದೇ ನದಿ-ಕೆರೆಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ.30 ವರ್ಷದ ಹೋರಾಟ ಫಲವಾಗಿ ನಮ್ಮ ಗ್ರಾಮಕ್ಕೆ ಶ್ಮಶಾನದ ಜಾಗ ಮಂಜೂರು ಆಗಿದೆ. ಸರಕಾರ ನಮಗೇ ಮಂಜೂರು ಮಾಡಿದ 20 ಗುಂಟೆ ಜಮೀನೇ ಸಾಕು. ಸಾಮಾಜಿಕ ವಲಯ ಅರಣ್ಯ ಇಲಾಖೆಯು ಬೈಚಾಪುರದ ಸಸ್ಯಕ್ಷೇತ್ರವನ್ನ ಬೇರೆಕಡೆ ಸ್ಥಳಾಂತರ ಮಾಡಲಿ.
ವೆಂಕಟಾರೆಡ್ಡಿ, ಗ್ರಾಪಂ ಸದಸ್ಯ. ಬೈಚಾಪುರ ಬೈಚಾಪುರದ ಸಸ್ಯಕ್ಷೇತ್ರಕ್ಕೆ ೪೦ವರ್ಷದ ಇತಿಹಾಸ ಇದೆ. ಲಕ್ಷಾಂತರ ರೂ ವೆಚ್ಚದಲ್ಲಿ ಮೂಲಸೌಲಭ್ಯ ಅಭಿವೃದ್ದಿ ಪಡಿಸಲಾಗಿದೆ. ಸಸ್ಯಕ್ಷೇತ್ರದಲ್ಲಿ ಪ್ರತಿವರ್ಷ ೧ಲಕ್ಷ ಸಸಿ ಪೋಷಣೆ ಮಾಡಿ ರೈತರಿಗೆ ಮಾಡಲಾಗುತ್ತೇ. ಸಸ್ಯಕ್ಷೇತ್ರದ ಭೂಮಿ ಉಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆ ಪರಿಶೀಲನೆ ನಡೆಸಿ ಸಸ್ಯಕ್ಷೇತ್ರದ ಉಳಿಸಲು ಅನುಕೂಲ ಕಲ್ಪಿಸಬೇಕಿದೆ.
ಶಿಲ್ಪಾ.ಎನ್.ಇ. ಸಾಮಾಜಿಕ ವಲಯ ಅರಣ್ಯಾಧಿಕಾರಿ. ಕೊರಟಗೆರೆ ಬೈಚಾಪುರ ಸರ್ವೆ ನಂ. 43ರಲ್ಲಿ ಸ್ಮಶಾನಕ್ಕೆ20 ಗುಂಟೆ ಜಮೀನು ನೀಡಲಾಗಿದೆ. ಸಸ್ಯಕ್ಷೇತ್ರದ ನಿರ್ವಹಣೆಯ ಜಮೀನು ಮಂಜೂರು ಮಾಡಿರುವ ಪರಿಣಾಮ ಸಮಸ್ಯೆ ಅಗಿದೆ. ಮಂಜೂರು ಮಾಡುವ ವೇಳೆ ಕೆಲವು ನ್ಯೂನತೆ ಆಗಿರುವುದು ಸತ್ಯ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಸ್ಮಶಾನಕ್ಕೆ ಪ್ರತ್ಯೇಕ ಜಮೀನು ಗುರುತಿಸಿ ಸಸ್ಯಕ್ಷೇತ್ರದ ಜಮೀನು ಉಳಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇವೆ.
ರಂಜಿತ್.ಕೆ.ಆರ್. ಪ್ರಭಾರ ತಹಶೀಲ್ದಾರ್