Advertisement

ಕೊರಟಗೆರೆ : ಅಕ್ರಮ ಕಸಾಯಿ ಖಾನೆ ಮೇಲೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

04:59 PM May 29, 2022 | Team Udayavani |

ಕೊರಟಗೆರೆ : ಪಟ್ಟಣದಲ್ಲಿ ಕಸಾಯಿ ಖಾನೆ ಮೇಲೆ ದಿಡೀರ್ ದಾಳಿ ನಡೆಸಿದ ಕೊರಟಗೆರೆ ಪೋಲೀಸರ ತಂಡ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ 4 ಜನ ಆರೋಪಿಗಳನ್ನ ಬಂಧಿಸಿದ್ದು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

Advertisement

ಗೋಗ್ಯಾನ್ ಫೌಂಡೇಶನ್ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪಟ್ಟಣದಲ್ಲಿನ ಕಸಾಯಿ ಖಾನೆಗಳ ಮೇಲೆ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ನೇತೃತ್ವದ ಪೊಲೀಸರ ತಂಡದಿಂದ ದಿಡೀರ್ ದಾಳಿ ಮಾಡಲಾಗಿದೆ.

ಕೊರಟಗೆರೆ ಪಟ್ಟಣದ 4 ಮತ್ತು 5ನೇ ವಾರ್ಡಿನಲ್ಲಿರುವ 4 ಕಸಾಯಿ ಖಾನೆ ಹಾಗೂ ಒಂದು ಮನೆ ಮೇಲೆ ಗೋಗ್ಯಾನ್ ಫೌಂಡೇಶನ್ ನೀಡಿದ ದೂರಿನ ಅನ್ವಯ ಕೊರಟಗೆರೆಯ ಪೊಲೀಸರ ತಂಡ ದಿಡೀರ್ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

ಸರ್ಕಾರ ಗೋ ಮಾಂಸವನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಿದ್ದರೂ ಸಹ ನಿಗೂಢವಾಗಿ ಎಗ್ಗಿಲ್ಲದೆ ಗೋ ಮಾಂಸ ಮಾರಾಟ ನಡೆಯುತ್ತಿದ್ದು ಕ್ರಮಕೈಗೊಳ್ಳುವಂತೆ ಕುಣಿಗಲ್ ನ ಗೋಗ್ಯಾನ್ ಫೌಂಡೇಶನ್ ನ ಮಂಜುನಾಥ್ ಎಂಬವರು ದೂರು ನೀಡಿದ್ದರು.

ಇದನ್ನೂ ಓದಿ : ಪತ್ತೆಯಾದ ನೇಪಾಳ ವಿಮಾನ: ಲಾಮ್ಚೆ ನದಿಯಲ್ಲಿ ಪತನಗೊಂಡ 22 ಜನರಿದ್ದ ತಾರಾ ಏರ್ ಕ್ರಾಫ್ಟ್

Advertisement

ಈ ದೂರಿನ ಮೇಲೆ ವಾಸದ ಮನೆ ಮತ್ತು ಅಂಗಡಿಯಲ್ಲಿ ಶೇಖರಣೆ ಮಾಡಲಾಗಿದ್ದ 4 ಟನ್ ಗೂ ಅಧಿಕ ದನದ ಮಾಂಸದ ಜೊತೆಯಲ್ಲಿ ಮತ್ತು ಮಾರಾಟ ಮಾಡುವ 4 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಉಳಿದಂತೆ ಕರುಗಳ ಸಾಗಾಣಿಕೆಗೆ ಬಳಸುತ್ತಿದ್ದ ಟಾಟಾ ಏಸ್ ವಾಹನ ಮತ್ತು ಮಾಂಸವನ್ನು ಕಟ್ ಮಾಡಲು ಬಳಸುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ಕೊರಟಗೆರೆಯ ಪೊಲೀಸ್ ಠಾಣಾ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ಮಂಜುಳ ಸೇರಿದಂತೆ 20ಕ್ಕೂ ಅಧಿಕ ಪೊಲೀಸರ ತಂಡ ಈ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಗೋಗ್ಯಾನ್ ಫೌಂಡೇಶನ್ ಎನ್ ಜಿ ಒ ತಂಡದ ಮಂಜುನಾಥ್ ಮಾತನಾಡಿ ನಮ್ಮ ಕೆಲಸವೇ ಗೋ ರಕ್ಷಣೆ ಮಾಡುವುದು ಅನೇಕ ಕಡೆ ನಮ್ಮ ಮೇಲೆ ದಾಳಿ ಮಾಡಲು ಕೂಡ ಯತ್ನಿಸಿದ್ದಾರೆ ತಲೆ ಕೆಡಿಸಿಕೊಳ್ಳದ ನಾವು ಈಗಾಗಲೇ ಅನೇಕ ಭಾಗಗಳಲ್ಲಿ ಗೋವುಗಳನ್ನು ರಕ್ಷಣೆ ಮಾಡಿದ್ದೇವೆ
ಕೊರಟಗೆರೆಯ ಸ್ಥಳೀಯರ ಮಾಹಿತಿ ಮೇರೆಗೆ ನಾವು ಇಲ್ಲಿಗೆ ಬಂದು ನೋಡಿದಾಗ ದೊಡ್ಡ ಆಘಾತವೇ ಕಾದಿತ್ತು ತಕ್ಷಣ ಕೊರಟಗೆರೆ ಪೊಲೀಸ್ ಠಾಣೆ ಅಧಿಕಾರಿಗಳ ಸಹಕಾರದಿಂದ ಎಲ್ಲವನ್ನು ವಶಪಡಿಸಿಕೊಂಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದರಿಂದ ಕೆಲಸ ಯಶಸ್ವಿಯಾಗಿ ನೆರವೇರಿದೆ ಕೊರಟಗೆರೆ ಪೋಲಿಸ್ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next