Advertisement
19 ವರ್ಷದ ಅನನ್ಯ ಮಾವತ್ತೂರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, 45 ವರ್ಷದ ರಂಗಶಾಮಯ್ಯನ ಮೃತದೇಹಕ್ಕಾಗಿ ಕೋಳಾಲ ಪೊಲೀಸರ ತಂಡ ಮತ್ತು ಕೊರಟಗೆರೆ ಅಗ್ನಿಶಾಮಕ ಸಿಬ್ಬಂದಿಗಳು ಕಳೆದ 12 ಗಂಟೆಯಿಂದ ಹುಡುಕಾಟ ನಡೆಸುತ್ತಿರುವ ಘಟನೆ ಶನಿವಾರ ನಡೆದಿದೆ.
Related Articles
Advertisement
ಕೋಳಾಲದ ಚೆನ್ನಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಮೃತ ಅನನ್ಯ(19) ಮೂಲತ ಲಕ್ಕಯ್ಯನಪಾಳ್ಯದ ಮಲ್ಲಿಕಾರ್ಜುನ್ ಎಂಬಾತನ ಒಬ್ಬಳೇ ಮಗಳು.
ಮಗಳಿಗೆ ಉನ್ನತ ವ್ಯಾಸಂಗ ಕೊಡಿಸುವ ಆಸೆಯಿಟ್ಟಿದ್ದ ತಂದೆ-ತಾಯಿ, ಅಣ್ಣನಿಗೆ ಆಕೆ ಮಾವತ್ತೂರು ಕೆರೆಯಲ್ಲಿ ಶವವಾಗಿ ಸಿಕ್ಕಿರುವುದು ಕುಟುಂಬ ದುಖಃದಲ್ಲಿದೆ. ಮಧುಗಿರಿ ಡಿವೈಎಸ್ಪಿ ರಾಮಚಂದ್ರ ನೇತೃತ್ವದಲ್ಲಿ ಕೊರಟಗೆರೆ ಸಿಪಿಐ ಅನಿಲ್, ಕೋಳಾಲ ಪಿಎಸೈ ರೇಣುಕಾ, ಪಿಎಸೈ ಯೊಗೀಶ್ ಮತ್ತು ಅಗ್ನಿಶಾಮಕ ಠಾಣೆಯ 20 ಕ್ಕೂ ಅಧಿಕ ಸಿಬ್ಬಂಧಿಗಳ ತಂಡ ಸೇರಿ ಈಜು ಪಟುಗಳಿಂದ ಮಾವತ್ತೂರು ಕೆರೆಯಲ್ಲಿ ಕಳೆದ 12 ಗಂಟೆಯಿಂದ ಬೂಟ್ ಮೂಲಕ ವ್ಯಕ್ತಿಯ ಶವಕ್ಕಾಗಿ ಹುಡುಕಾಟ ನಡೆಸುತ್ತಿದೆ.
ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆ ಏರಿಯ ಪಕ್ಕ ಕಾರು ಪತ್ತೆ:
ಮಾವತ್ತೂರು ಕೆರೆಯ ಏರಿಯ ಸಮೀಪವೇ ಕಾರು ನಿಂತಿದೆ. ಕಾರಿನಲ್ಲಿ ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ ಮತ್ತು ಲಕ್ಕಯ್ಯನಪಾಳ್ಯದ ಅನನ್ಯದ ಮೊಬೈಲ್ ಸಿಕ್ಕಿವೆ. ಕೆರೆಯ ದಡದ ಕಲ್ಲಿನ ಮೇಲೆ ಇಬ್ಬರ ಚಪ್ಪಲಿಗಳು ಪೊಲೀಸರಿಗೆ ಸಿಕ್ಕಿವೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಕುರಿತು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.
ರಂಗಶಾಮಯ್ಯನ ಶವಕ್ಕಾಗಿ ಹುಡುಕಾಟ:
ಮಡದಿ ಮತ್ತು ಮಕ್ಕಳಿದ್ದರೂ ಯುವತಿಯ ಸಹವಾಸ ಮಾಡಿದ ರಂಗಶಾಮಯ್ಯನ ಮೃತದೇಹಕ್ಕಾಗಿ ಅಗ್ನಿಶಾಮಕ ಮತ್ತು ಪೊಲೀಸರಿಂದ ಹುಡುಕಾಟ ನಡೆದಿದೆ. ಸಿಬ್ಬಂದಿಗಳಿಂದ ನಾಳೆಯವರೆಗೆ ಶವಕ್ಕಾಗಿ ಹುಡುಕಾಟ ನಡೆಯಲಿದೆ. ಇಬ್ಬರು ಜೊತೆಯಲ್ಲೇ ಕೆರೆಗೆ ಹಾರಿದ್ದರೆ ಶವ ಸಿಗಬಹುದು ಅಥವಾ ಯುವತಿ ಒಬ್ಬಳೇ ಬಿದ್ದಿದ್ದರೇ ತನಿಖೆಯ ರೂಪವೇ ಬದಲಾಗಿ ಪೊಲೀಸರಿಂದ ಮತ್ತೇ ಬೇರೆಯೇ ಮಾರ್ಗದಲ್ಲಿ ರಂಗಶಾಮಯ್ಯನ ಹುಡುಕಾಟ ಪ್ರಾರಂಭವಾಗಲಿದೆ.