ಕೊರಟಗೆರೆ: ಮಧುಗಿರಿ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಾದ ಕೊರಟಗೆರೆ ,ಮಧುಗಿರಿ ಸಿರಾ ಪಾವಗಡ ಯುವ ಮೋರ್ಚಾ ಸಮಾವೇಶವನ್ನು ಮಾರ್ಚ್12ರಂದು ಕೊರಟಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಒಕ್ಕೊರಲಿನಿಂದ ಏರ್ಪಡಿಸಲಾಗಿದೆ ಎಂದು ಮಧುಗಿರಿ ಜಿಲ್ಲೆಯ ಬಿಜೆಪಿ ಘಟಕದ ಅದ್ಯಕ್ಷ ಬಿ.ಕೆ ಮಂಜುನಾಥ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾದ್ಯಕ್ಷ ಬಿ. ಕೆ.ಮಂಜುನಾಥ್ ಮಾತನಾಡಿ 2023ರ ಚುನಾವಣೆಯಲ್ಲಿ ಪಾವಗಡ, ಮಧುಗಿರಿ, ಕೊರಟಗೆರೆ, ಸಿರಾ ವಿಧಾನ ಸಭಾ ಕ್ಷೇತ್ರಗಳ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಾರ್ಚ್12 ರಂದು ಕೊರಟಗೆರೆಯ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಯುವ ಮೋರ್ಚಾ ಸಮಾವೇಶ ಒಕ್ಕೊರಲಿನಿಂದ ಏರ್ಪಡಿಸಲಾಗಿದ್ದು ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ,ರಾಜ್ಯಸಭಾ ಸದಸ್ಯ ನಟ ಜಗ್ಗೇಶ್, ಸಂದೀಪ್ , ನವೀನ್ ಕುಮಾರ್, ಮಾಜಿ ಸಂಸದ ಮುದ್ದಹನುಮೇಗೌಡ ಸೇರಿದಂತೆ ಹಲವಾರು ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚು ಹೆಚ್ಚಾಗಿ ಯುವಕರನ್ನು ಪಕ್ಷಕ್ಕೆ ಕರೆತಂದು ಪಕ್ಷವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ಸದೃಢವಾಗಿದ್ದು ಸರ್ಕಾರದ ಕಾರ್ಯಕ್ರಮಗಳನ್ನು ನೀಡಿರುವ ಕೊಡುಗೆಗಳನ್ನು ತಿಳಿಸುವ ಉದ್ದೇಶದಿಂದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಜಯ ಸಂಕಲ್ಪ ಯಾತ್ರೆ ರಥ ಮಧುಗಿರಿಗೆ ಗೌರಿಬಿದನೂರಿನಿಂದ ರಥಯಾತ್ರೆ ಬರುವುದಿದೆ. ಶಿರಾ ಮಧುಗಿರಿ ಕೊರಟಗೆರೆ ಹಾಗೂ ಪಾವಗಡಕ್ಕೆ ರಥಯಾತ್ರೆ ಬಂದು ಮುಂದುವರೆಯುತ್ತದೆ 20 ದಿನಗಳಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುವುದಿದೆ. ಸಂತೋಷ್ ಜೀ ರವರು ನೆಡೆಸಿದ ಜಿಲ್ಲಾ ಕೋರ್ ಕಮಿಟಿಯ ಸಭೆಯಲ್ಲಿ ಮಧುಗಿರಿ ಜಿಲ್ಲೆಯ ಕೊರಟಗೆರೆ ವಿಧಾನ ಸಭಾ ಆಕಾಂಕ್ಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಅನಿಲ್ ಕುಮಾರ್ ಮತ್ತು ಡಾ. ಲಕ್ಷೀಕಾಂತ್ ಮೂವರು ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದು ಆ ಮೂವರ ಹೆಸರನ್ನು ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗಿದ್ದು ಮೂವರಲ್ಲಿ ಒಬ್ಬರಿಗೆ ಖಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ,ತಾಲೂಕು ಅಧ್ಯಕ್ಷ ಪವನ್ ಕುಮಾರ್, ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ರುದ್ರೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಭರತ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಯುವ ಮೋರ್ಚಾ ಜಿಲ್ಲಾ ಸಮಾವೇಶದ ಉಸ್ತುವಾರಿಗಳಾದ ಶಿವಕುಮಾರಸ್ವಾಮಿ,ಆಕಾಂಕ್ಷಿತರಾದ ಮಾಜಿ ಶಾಸಕ ಗಂಗಹನುಮಯ್ಯ
ಅನಿಲ್ ಕುಮಾರ್ ಮತ್ತು ಡಾ.ಲಕ್ಷ್ಮೀ ಕಾಂತ್, ಜಿಲ್ಲಾ ಉಪಾಧ್ಯಕ್ಷರಾದ ಸುಶೀಲಮ್ಮ, ವಿಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ್ ಸಾಕೇಲ್,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗುರುದತ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರದೀಪ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ವಿಶ್ವನಾಥ್ ಅಪ್ಪಾಜಪ್ಪ,ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಮಾರುತಿಗಂಗಹನುಯ್ಯ,ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಅರುಣ್ ,ಲೋಕೇಶ್, ದರ್ಶನ್, ಕೃಷ್ಣಮೂರ್ತಿ, ಶಿವಕುಮಾರ್, ಪ್ರಕಾಶ್ ರೆಡ್ಡಿ, ಮಹೇಶ್, ವೆಂಕಟೇಶ್, ಸಿದ್ದನಂಜಪ್ಪ, ಹೇಮಲತಾ ಇತರರು ಉಪಸ್ಥಿತರಿದ್ದರು.