ಕೊರಟಗೆರೆ: ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ವಿದ್ಯಾವಂತ ಪದವಿ ಡಿಪ್ಲೊಮ ಪಡೆದ ಗ್ರಾಮೀಣ ನಿರುದ್ಯೋಗ ಯುವಕ ಯುವತಿಯರಿಗೆ ವಿವಿಧ ಕಂಪನಿಗಳು ಸಂದರ್ಶನದ ಮುಖಾಂತರ ಪಕ್ಷತೀತಾವಾಗಿ ಕ್ಷೇತ್ರದ ಎಲ್ಲಾ 18ವರ್ಷದ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಅನೂಕೂಲವಾಗಲೆಂದು ಬೃಹತ್ ಉದ್ಯೋಗ ಮೇಳ ಮಾ.5 ರಂದು ಅಯೋಜನೆ ಮಾಡಲಾಗಿದೆಯೆಂದು ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಎಂ.ಮುನಿಯಪ್ಪ ತಿಳಿಸಿದರು.
ಅವರು ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಕಛೇರಿಯಲ್ಲಿ ಕ್ಷೇತ್ರದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ನಮ್ಮ ಪ್ರತಿಯೊಬ್ಬ ಬೂತ್ ಮಟ್ಟದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಗ್ರಾಮೀಣ ಭಾಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಬೃಹತ್ ಉದ್ಯೋಗ ಮೇಳದ ಕಾರ್ಯಕ್ರಮದ ಮಾಹಿತಿಯನ್ನು
ಕರ ಪತ್ರದ ಮೂಲಕ ತಲುಪಿಸಬೇಕು.ಬಡತನದ ಕುಟುಂಬಗಳಲ್ಲಿ ಯಾರಾದರೂ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿದ್ಯಾರ್ಥಿಗಳಿಗೆ ನಾನು ಆ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದರ ಮೂಲಕ ಮಕ್ಕಳ ಶಿಕ್ಷಣ ಮುಂದುವರೆಸಲು ಬೇಕಾದ ಸಹಾಯ ಮತ್ತು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದರು.
ಕ್ಷೇತ್ರದ ಕುಟುಂಬದಲ್ಲಿ ವಿದ್ಯಾರ್ಥಿಗಳು ಸರ್ಧಾತ್ಮಕ ಪರೀಕ್ಷೆ ಗಳ ಆಕಾಂಕ್ಷಿಗಳಿಗೆ ಉಚಿತವಾಗಿ ಕೆಎಎಸ್, ಐಎಎಸ್ ತರಭೇತಿ ಕೊಡಿಸುವುದರ ಮೂಲಕ ಯುವಕ ಯುವತಿಯರಿಗೆ ಉನ್ನತ ಹುದ್ದೆಗೆ ಸೇರಿಕೊಳ್ಳಲು ಬೇಕಾದ ತರಬೇತಿ ಮತ್ತು ಮಾರ್ಗದರ್ಶನವನ್ನು ಏಸ್ ಇಂಡಿಯಾ ಐಎಎಸ್ ಕೇಂದ್ರದ ಮೂಲಕ ಕೊಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡರಾದ ರಾಜೇಶ್, ದ್ವಾರಕನಾಥ್, ಪ್ರಣವ್ ಕುಮಾರ್, ಚೇತನ್ ಬಾಬು, ಅಳಾಲ ಸಂದ್ರ ಮಂಜಣ್ಣ ಭಾಗಿಯಾಗಿದ್ದರು.