Advertisement

ಕೊರಟಗೆರೆ: ಅಲೆಮಾರಿ ಗೊಲ್ಲರ ಹಟ್ಟಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ

06:54 PM Feb 04, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಡ್ಡೇನಹಳ್ಳಿ ಗೊಲ್ಲರಹಟ್ಟಿಯ ಶಾಲಾ ಆವರಣದಲ್ಲಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Advertisement

ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ಅನಂತರಾಜು ಮಾತನಾಡಿ ಗೊಲ್ಲರಹಟ್ಟಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು, ಬಹಳ ನೋವಿನ ಸಂಗತಿಯಾಗಿದೆ. ಈ ಬಗ್ಗೆ ಅರಿವನ್ನು ಮೂಡಿಸಲು ಇಲಾಖೆ ಮುಂದಾಗಿದೆ. ಈಗಾಗಲೇ ಸಮುದಾಯಕ್ಕೆ1034 ಮನೆ ಮಂಜೂರಾಗಿದ್ದು ಈಗ ಪ್ರಸ್ತುತ ಕೇವಲ 342 ಮನೆಗಳನ್ನು ಮಾತ್ರ ನಿರ್ಮಿಸಿಕೊಂಡಿದ್ದಾರೆ ಎಂದರು.

ಕಾಡುಗೊಲ್ಲರ ಯುವ ಸೇವೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಮುತ್ತುರಾಜ್.ಹೆಚ್.ಬಿ ಮಾತನಾಡಿ ಗೊಲ್ಲರಹಟ್ಟಿಗಳಲ್ಲಿ ಸಮುದಾಯದ ನಾಗರಿಕರಿಗೆ, ಪೋಷಕರಿಗೆ ,ಹೆಣ್ಣು ಮಕ್ಕಳಿಗೆ ಮೊದಲು ಶಿಕ್ಷಣಕ್ಕೆ ಆದ್ಯತೆ‌ ನೀಡಬೇಕು. ಈ ಜನಾಂಗದ ಹೆಣ್ಣು ಮಕ್ಕಳು ಋತುಮತಿಯಾದಾಗ ಒಂದು ವಾರ ಊರ ಹೊರಗಿನ ಬಯಲಿನಲ್ಲಿ ವಾಸ ಮಾಡುತ್ತಿರುವುದು ಈಗಲೂ ರೂಢಿಯಲ್ಲಿದೆ. ಬದಲು ಮನೆಯಲ್ಲಿಯೇ ಇರಲು ಸಮುದಾಯದ ಊರಿನ ಯಜಮಾನರಿಗೆ, ಗೌಡರಿಗೆ, ಮತ್ತು ಪೂಜಾರಿಗೆ ತಿಳುವಳಿಕೆ ನೀಡಿದರು. ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಮುದಾಯದ ಸಾಂಪ್ರಾದಾಯಿಕ ಆಚರಣೆ, ಮೂಡನಂಬಿಕೆಗಳು, ಕಂದಾಚಾರ ಮತ್ತು ಮೌಡ್ಯತೆಯನ್ನು ಬಿಟ್ಟು ಹೊರ ಬರಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ದಾಸಪ್ಪಮಾತನಾಡಿ, ಬೈಚಾಪುರ ಗ್ರಾಪಂ ಅದ್ಯಕ್ಷೆ ಕಾಂಚನಾ,ಉಪಾದ್ಯಕ್ಷ ಕರಿಯಪ್ಪ, ಇಲಾಖೆಯ ಅನಂತರಾಜು,ಬುಡ್ಡೇನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಶಂಕರಯ್ಯ ಕಾಡು ಗೊಲ್ಲ ಯುವ ಸೇನೆಯ ಕಾರ್ಯದರ್ಶಿ ಸುರೇಶ್ .ಡಿ
ಹಾಗೂ ಸಮುದಾಯದ ಹೆಣ್ಣು ಮಕ್ಕಳು, ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next