Advertisement

ಕೊರಟಗೆರೆ: ಡಿ ಗ್ರೂಪ್ ನೌಕರನ ನೇಮಕ ಅಂಚೆ ಇಲಾಖೆ ಅಧೀಕ್ಷಕರಿಗೆ ಗೊತ್ತಿಲ್ವಂತೆ !!

10:48 PM Dec 28, 2022 | Team Udayavani |

ಕೊರಟಗೆರೆ: ಸರಕಾರದ ಆದೇಶವೇ ಇಲ್ಲದೇ ಅಂಚೆ ಇಲಾಖೆಯಲ್ಲಿ ಅನಧಿಕೃತವಾಗಿ ಡಿ.ಗ್ರೂಪ್ ನೌಕರನ ನೇಮಕ.. ಪ್ರತಿ ತಿಂಗಳು ಈತನ ಬ್ಯಾಂಕ್ ಖಾತೆಗೆ 15ಸಾವಿರ ಸಂಬಳ ಜಮಾ.. ಕಳೆದ 3ವರ್ಷದಿಂದ ಈತನೇ ಕೊರಟಗೆರೆ ಪಟ್ಟಣದ ಅಂಚೆ ಇಲಾಖೆ ಕಚೇರಿಯ ಬಾಸ್. ಡಿ.ಗ್ರೂಪ್ ನೌಕರ(ಹೊರಗುತ್ತಿಗೆ ಸಿಬಂದಿ) ನೇಮಕದ ಬಗ್ಗೆ ತುಮಕೂರು ಅಂಚೆ ಇಲಾಖೆಯ ಜಿಲ್ಲಾ ಅಧಿಕ್ಷಕರಿಗೆ ಮಾಹಿತಿಯೇ ಇಲ್ವಂತೆ..!!

Advertisement

ಕೊರಟಗೆರೆ ಪಟ್ಟಣದ ಕೇಂದ್ರ ಸ್ಥಾನದಲ್ಲಿನ ಅಂಚೆ ಕಚೇರಿಯಲ್ಲಿ ಅಧಿಕೃತ ನೌಕರಗಿಂತ ಅನಧಿಕೃತ ಸಿಬ್ಬಂದಿಗಳ ದರ್ಬಾರು ಹೆಚ್ಚಾಗಿದೆ. ನೌಕರರ ಪ್ರತಿನಿತ್ಯದ ದಾಖಲಾತಿ ಪರಿಶೀಲನೆ ನಡೆಸಬೇಕಾದ ಅಂಚೆ ನಿರೀಕ್ಷಕರೇ ಕೊರಟಗೆರೆಗೆ ಬರೋದು ತುಂಬಾನೇ ಕಡಿಮೆ. ತುಮಕೂರು ಅಂಚೆ ಇಲಾಖೆಯ ಜಿಲ್ಲಾಮಟ್ಟದ ಅಧಿಕ್ಷಕರು ಮತ್ತು ಉಪ ಅಧಿಕ್ಷಕರ ನಿರ್ಲಕ್ಷದ ಜಾಣಮೌನವು ಕೊರಟಗೆರೆಯಲ್ಲಿ ಸಮಸ್ಯೆ ದ್ವಿಗುಣವಾಗಲು ಕಾರಣವಾಗಿದೆ.

ಡಿ.ಗ್ರೂಪ್ ನೌಕರ ಸುರೇಶ್ ಎಂಬಾತ ಪ್ರತಿನಿತ್ಯ ಬೆಳಿಗ್ಗೆ 8ಗಂಟೆಗೆ ಅಂಚೆ ಇಲಾಖೆಗೆ ಮೊದಲು ಬರ್ತಾನೇ. ಅಂಚೆ ಕಾಗದ, ಕ್ಯಾಸ್ ಕೌಂಟರ್, ಬ್ಯಾಗ್ ಕಟ್ಟೋದು ಸೇರಿದಂತೆ ಪ್ರಮುಖ ದಾಖಲೆಗಳಿಗೆ ಈತನೇ ಅಂಚೆ ಮುದ್ರೆ ಹಾಕ್ತಾನೇ. ಕಚೇರಿಯ ಬೀಗ ತೆಗೆಯುವ ಕೆಲಸದಿಂದ ಹಿಡಿದು ಸಂಜೆ ಕಚೇರಿಯ ಬಾಗಿಲು ಹಾಕುವ ಜವಾಬ್ದಾರಿಯು ಈತನದೇ. ಸಿಸಿಟಿವಿ ಇಲ್ಲದಿರುವ ಕಚೇರಿಯಲ್ಲಿ ಏನಾದರೂ ಅನಾಹುತ ಎದುರಾದರೇ ಜವಾಬ್ದಾರಿ ಯಾರು ಎಂಬುದೇ ಯಕ್ಷಪ್ರಶ್ನೆ.

ಕೊರಟಗೆರೆ ಪಟ್ಟಣದ ಅಂಚೆ ಕಚೇರಿಯಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಶಣ್ಮುಕ ಆಚಾರ್ಯ ಕಳೆದ 3ವರ್ಷದ ಹಿಂದೆ ಮೃತಪಟ್ಟ ನಂತರ ಪಾವಗಡದ ಸುರೇಶ್ ಎಂಬಾತನಿಗೆ ಕಚೇರಿಯ ಪೊಸ್ಟ್ ಮಾಸ್ಟರ್ ಜೀವನ್ ಪ್ರಕಾಶ್ ಮತ್ತು ಅಂಚೆ ನಿರೀಕ್ಷಕ ಹರ್ಷನ ಎಂಬಾತನ ಕೃಪಕಟಾಕ್ಷದಿಂದ ನೇಮಕವಾಗಿ ಸಂಬಳವು ಬರುತ್ತೀದೆ. ಅನಧಿಕೃತ ಡಿ.ಗ್ರೂಪ್ ನೌಕರ(ಹೊರಗುತ್ತಿಗೆ ಸಿಬ್ಬಂದಿ) ಸುರೇಶ್ ನೇಮಕಾತಿಯನ್ನು ತಕ್ಷಣ ತನಿಖೆ ನಡೆಸಬೇಕಿದೆ.

ಸಿಸಿಟಿವಿಯೇ ಇಲ್ಲದಿರುವ ಅಂಚೆ ಕಚೇರಿಯ ನಗದು ಹಣ ಅಥವಾ ದಾಖಲೆಗಳು ಮಾಯವಾದರೇ ಪೊಸ್ಟ್ ಮಾಸ್ಟರ್ ಜೀವನ್‍ಪ್ರಕಾಶ್ ಮತ್ತು ಅಂಚೆ ನಿರೀಕ್ಷಕ ಹರ್ಷರವರೇ ನೇರವಾಗಿ ಜವಾಬ್ದಾರಿ ಆಗ್ತಾರೇ. ತುಮಕೂರು ಜಿಲ್ಲಾ ಸಹಾಯಕ ಅಧಿಕ್ಷಕರಾದ ಉಮಾ ಮತ್ತು ಜಿಲ್ಲಾ ಅಧಿಕ್ಷಕರಾದ ಗೋವಿಂದರಾಜು ತಕ್ಷಣ ಪರಿಶೀಲನೆ ನಡೆಸಿ ಅನಧಿಕೃತ ನೌಕರನ ನೇಮಕದ ತನಿಖೆ ನಡೆಸಿ ತಕ್ಷಣ ಕಚೇರಿಗೆ ಸಿಸಿಟಿವಿಯ ವ್ಯವಸ್ಥೆ ಮಾಡಬೇಕಿದೆ.

Advertisement

ಸಿಸಿಟಿವಿಯೇ ಇಲ್ಲದೇ ಅಂಚೆ ಕಚೇರಿ..
ಸರಕಾರಿ ಕಚೇರಿಯಲ್ಲಿ ಸಿಸಿಟಿವಿ ಕಡ್ಡಾಯ ಅಳವಡಿಕೆಗೆ ಸರಕಾರವೇ ಆದೇಶ ಮಾಡಿದೆ. ಅತಿಸೂಕ್ಷ್ಮ ಮತ್ತು ಗೌಪ್ಯತೆಯ ಅಂಚೆ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಅಧಿಕಾರಿಗಳ ನಿರ್ಲಕ್ಷವೇಕೆ. ಕಚೇರಿ ವೇಳೆ ಅಂಚೆ ಅಧಿಕಾರಿಗಳಿಗೆ ಸಮಸ್ಯೆ ಆದರೇ ಹೊಣೆಯಾರು. ರಾತ್ರಿವೇಳೆ ಕಚೇರಿಯಲ್ಲಿನ ಹಣ ಅಥವಾ ದಾಖಲೆಗಳು ಕಳ್ಳತನ ಆದರೇ ಅದಕ್ಕೆ ಜವಾಬ್ದಾರಿ ಯಾರು. ಸಿಸಿಟಿವಿ ಅಳವಡಿಕೆ ನಿರ್ಲಕ್ಷಕ್ಕೆ ಮೇಲಾಧಿಕಾರಿಗಳ ಜವಾಬ್ದಾರಿ ಏನು ಎಂಬುದೇ ಪ್ರಶ್ನೆ.

ಅಂಚೆ ನಿರೀಕ್ಷಕರಿಂದ ಉಡಾಫೆ ಉತ್ತರ..
ನಿಮ್ಮದು ಏನೇ ದೂರು ಇದ್ರು ತುಮಕೂರು ಅಂಚೆ ಅಧೀಕ್ಷಕರಿಗೆ ದೂರು ನೀಡಿ. ಅವರು ನನಗೇ ಆದೇಶ ಮಾಡಿದರೇ ನಾನು ತನಿಖೆ ಮಾಡುತ್ತೇನೆ. ನಾನು ಯಾರಿಗೂ ಅಂಚೆ ಇಲಾಖೆಯ ಮಾಹಿತಿ ನೀಡೋದಿಲ್ಲ. ನಾನು ಯಾರ ಪ್ರಶ್ನೆಗೂ ಉತ್ತರಿಸುವ ಅವಶ್ಯಕತೆಯು ಇಲ್ಲ. ಕೊರಟಗೆರೆ ಏನೇ ಸಮಸ್ಯೆ ಇದ್ರು ನೇರವಾಗಿ ಅಧೀಕ್ಷಕರ ಕಚೇರಿಗೆ ಬೇಟಿನೀಡಿ ಎಂದು ಕೊರಟಗೆರೆಗೆ ನೇಮಕ ಆಗಿರುವ ಅಂಚೆ ನಿರೀಕ್ಷಕ ಹರ್ಷ ಉಢಾಫೆಯ ಉತ್ತರ ನೀಡಿದ್ದಾರೆ.

ಪಾವಗಡದ ಸುರೇಶ್ ಎಂಬಾತ ನಮ್ಮಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ. ಅಂಚೆ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ನೇಮಕವಾಗಿದೆ. ಪ್ರತಿತಿಂಗಳು ಆತನ ಬ್ಯಾಂಕು ಖಾತೆಗೆ 15ಸಾವಿರ ಸಂಬಳ ಬರಲಿದೆ. ನಿಮಗೇ ಹೆಚ್ಚಿನ ಮಾಹಿತಿ ಬೇಕಾದರೇ ಅಧೀಕ್ಷಕರಿಗೆ ಕೇಳಿ. ಡಿ.ಗ್ರೂಪ್ ನೌಕರನ ಬಗ್ಗೆ ಹೆಚ್ಚೇನು ನನಗೇನು ಗೋತ್ತಿಲ್ಲ.-ಜೀವನ್‍ಪ್ರಕಾಶ್. ಪೊಸ್ಟ್ ಮಾಸ್ಟರ್

ಅಂಚೆ ಇಲಾಖೆಯಿಂದ ಅಧಿಕೃತವಾಗಿ ಡಿ.ಗ್ರೂಪ್ ನೌಕರರ ನೇಮಕ ಮಾಡಿಲ್ಲ. ಕೊರಟಗೆರೆ ಪಟ್ಟಣದ ಅಂಚೆ ಕಚೇರಿಯ ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಈಗಾಗಲೇ ದೂರು ಬಂದಿದೆ. ಈಗಾಗಲೇ ಕೊರಟಗೆರೆ ಅಂಚೆ ಇಲಾಖೆಯ ಬಗ್ಗೆ ಪೂಸ್ಟ್ ಮಾಸ್ಟರ್‍ಗೆ ನೇಮಕಾತಿಯ ಮಾಹಿತಿ ಕೇಳಿದ್ದೇವೆ. ಸಿಬಂದಿ ನೇಮಕಾತಿ ವಿಚಾರದಲ್ಲಿ ಲೋಪ ಕಂಡಬಂದರೇ ತಕ್ಷಣ ಕ್ರಮ ಕೈಗೊಳ್ಳುತ್ತೇನೆ.-ಗೋವಿಂದರಾಜು. ಅಧೀಕ್ಷಕ. ಅಂಚೆ ಇಲಾಖೆ. ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next