Advertisement
ಅವರು ತಾಲೂಕಿನ ಕೋಳಾಲ ಹೋಬಳಿಯ ಬೈರಗೊಂಡ್ಲು ಗ್ರಾಮದ ತಿಮ್ಮಪ್ಪ ದೇವಾಲಯದ ಸಮುದಾಯ ಭವನದಲ್ಲಿ ಬಫರ್ ಡ್ಯಾಂ ನಲ್ಲಿ ಜಮೀನು ಕಳೆದುಕೊಳ್ಳುವ ರೈತರ ಸಭೆ ನಡೆಸಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರಟಗೆರೆ ತಾಲೂಕಿನ ರೈತರಿಗೆ ದೊಡ್ಡಬಳ್ಳಾಪುರ ತಾಲೂಕುನಲ್ಲಿ ಜಮೀನು ಕಳೆದು ಕೊಳ್ಳುವ ರೈತರಿಗೆ ನೀಡುವ ಪರಿಹಾರವನ್ನು ಸಮಾನ ರೀತಿಯಲ್ಲಿ ನೀಡುವ ನಿಟ್ಟಿನಲ್ಲಿ ಸರಕಾರ ಶ್ರಮ ಪಡದೆ ಬಫರ್ ಡ್ಯಾಂನ್ನು ಸಂಪೂರ್ಣವಾಗಿ ದೊಡ್ಡಬಳ್ಳಾಪುರ ತಾಲೂಕಿಗೆ ಸ್ಥಳಾಂತರಿಸಲು ತಿರ್ಮಾನಿಸಿದೆ. ತುಮಕೂರು ಜಿಲ್ಲೆಯ ಮಂತ್ರಿಗಳಾದ ಮಾಧುಸ್ವಾಮಿ ಮತ್ತು ನಾನು ಇದನ್ನು ಪ್ರಬಲವಾಗಿ ವಿರೋಧಿಸಿದ್ದೇವೆ ಸರ್ಕಾರ ಇನ್ನು ೧೫ ದಿನಗಳ ಕಾಲಾವಕಾಶ ನಮಗೆ ನೀಡಿದೆ ಇಂತಹ ಪರಿಸ್ಥಿತಿಯಲ್ಲಿ ರೈತರ ಅಭಿಪ್ರಾಯ ಪಡೆದುಕೊಳ್ಳಲು ಬಂದಿರುವುದಾಗಿ ತಿಳಿಸಿದರು.
Related Articles
Advertisement
ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ, ನಿಮ್ಮ ಅಭಿಪ್ರಾಯ ಸಭೆಯಲ್ಲಿ ತಿಳಿಸುತ್ತೇನೆ, ಉತ್ತರ ಕರ್ನಾಟಕದಲ್ಲಿ ಅಲಮಟ್ಟಿ ಡ್ಯಾಂ ಎತ್ತರ ಗೊಳಿಸಿದ್ದಕ್ಕಾಗಿ ಬಾಗಲಕೋಟೆ ಜಿಲ್ಲೆಯೆ ಮುಳುಗಿಹೋಗಿ ನವಬಾಗಲಕೋಟೆ ನಿರ್ಮಾಣವಾಯಿತು, ಕೆಆರ್‌ಎಸ್ ಡ್ಯಾಂ ನಿರ್ಮಿಸಲು ಹಲವು ರೈತರ ತ್ಯಾಗವೂ ಇದೆ, ನೀವುಗಳು ಸಭೆೆಯಲ್ಲಿ ಪ್ರಸ್ತಾಪಿಸಿದ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗದ ನೀರಾವರಿ ಯೋಜನೆ ತರಲು ಮೊದಲು ಡ್ಯಾಂ ನಿರ್ಮಿಸಿಯೆ ನಡೆದದ್ದು, ಕೆಲವು ಮಹತ್ತರ ಯೋಜನೆ ಹಲವರಿಗೆ ಒಳ್ಳೆಯದಾದರೆ ಕೆಲವರಿಗೆ ತೊಂದರೆಯೂ ಆಗಿದೆ ಇದನ್ನು ಮನಗೊಂಡು ತಿರ್ಮಾನಿಸಿ ಇದರಲ್ಲಿ ರೈತರ ತಿರ್ಮಾನವೂ ಅತ್ಯಂತ ಪ್ರಮುಖವಾಗಿದೆ ಎಂದರು.
ಸಭೆಯಲ್ಲಿ ಹೋರಾಟ ಸಮಿತಿಯ ಚಿಕ್ಕತಿಮ್ಮಯ್ಯ, ಮುಖಂಡರಾದ ವೆಂಕಟೇಶ್, ಕೆಂಪಣ್ಣ, ನಟರಾಜು, ರಾಘವೇಂದ್ರ, ಚಂದ್ರಶೇಖರ, ಪುರುಷೋತ್ತಮ, ಮುದ್ದಪ್ಪ, ರೈತ ಸಂಘಟನೆಯ ಸಬ್ಬೀರ್‌ಪಾಷ, ಸ್ವಾಮಿ, ಭದ್ರಯ್ಯ, ಜಯರಾಮ್ಯ, ತಿರುಪಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವಥನಾರಾಯಣ ಸೇರಿದಂತೆ ಇತರರು ಹಾಜರಿದ್ದರು.