Advertisement

ಕೊರಟಗೆರೆಯಲ್ಲಿ ಜನಸಂಕಲ್ಪ ಸಮಾವೇಶ; ಬಿಜೆಪಿ ಟಿಕೆಟ್ ಆಕಾಂಕ್ಷಿ ಬೆಂಬಲಿಗರ ಹೈಡ್ರಾಮಾ

09:53 PM Dec 07, 2022 | Team Udayavani |

ಕೊರಟಗೆರೆ: ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದಿಂದ ಬುಧವಾರ ಏರ್ಪಡಿಸಲಾಗಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಮುಖಂಡರೊಬ್ಬರ ಬೆಂಬಲಿಗರು ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.

Advertisement

ಸಮಾವೇಶದ ವೇಳೆ ಬಿಜೆಪಿ ಆಕಾಂಕ್ಷಿ ಡಾ.ಲಕ್ಷ್ಮೀಕಾಂತ ಬೆಂಬಲಿಗರ ಹೈಡ್ರಾಮಾ ನಡೆಸಿದ್ದು, ಸಿಎಂ ಬಸವರಾಜು ಬೊಮ್ಮಾಯಿ ಮತ್ತು ಸಚಿವ ಗೋವಿಂದ ಕಾರಜೋಳ ಭಾಷಣದ ವೇಳೆ ಭಾವಚಿತ್ರ ಹಿಡಿದು ಯುವಕರು ಘೋಷಣೆಗಳು ಕೂಗಿದ್ದಾರೆ. ಭಾಷಣಕ್ಕೆ ಅಡ್ಡಿಯಾದ ವೇಳೆ ಗೋವಿಂದ ಕಾರಜೋಳ ಸುಮ್ಮನಿರಲು 5 ಬಾರಿ ಮನವಿ ಮಾಡಿದ್ದಾರೆ. ನಂತರವು ಸಹ ಘೋಷಣೆ ಹೆಚ್ಚಾದ ಹಿನ್ನಲೆ ವೇದಿಕೆ ಮೇಲೆಯೇ ಮುಖ್ಯಮಂತ್ರಿಗಳು ಲಕ್ಷ್ಮೀಕಾಂತ್ ಅವರನ್ನು ಕೆರೆದು ಕ್ಲಾಸ್ ತೆಗೆದುಕೊಂಡು ಬೆಂಬಲಿಗರನ್ನು ಸುಮ್ಮನಿರುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಶಾಸಕರ ನಿರ್ಲಕ್ಷದಿಂದ ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯು ಕುಂಠಿತವಾಗಿದೆ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಸಿಎಂ ಬೊಮ್ಮಾಯಿ ಸಾಹೇಬ್ರು ಭರವಸೆ ನೀಡಿದ್ದಾರೆ. ಕೊರಟಗೆರೆಯಲ್ಲಿ ಜನಸಂಕಲ್ಪ ಯಾತ್ರೆಯ ಸಮಾವೇಶವು ಯಶಸ್ವಿಕಂಡಿದೆ. ೨೦೨೩ಕ್ಕೆ ಬಿಜೆಪಿ ಪಕ್ಷವು ಕೊರಟಗೆರೆ ಕ್ಷೇತ್ರದಲ್ಲಿ ಜಯಬೇರಿ ಭಾರಿಸಲಿದೆ. ಸಮಾವೇಶ ಯಶಸ್ವಿಗೆ ಕಾರಣರಾದ ಮುಖಂಡರು ಮತ್ತು ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ಹೆಚ್.ಅನಿಲ್‌ಕುಮಾರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next