Advertisement

ಕೊರಟಗೆರೆ: ನಾಗರಕಟ್ಟೆಯ 5ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ

09:28 PM Jan 30, 2023 | Team Udayavani |

ಕೊರಟಗೆರೆ: ಪಟ್ಟಣದ ಮಧ್ಯ ಭಾಗದಲ್ಲಿರುವ ನಾಗರಕಟ್ಟೆಯ ಐದನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಅದ್ದೂರಿಯಿಂದ ನೂರಾರು ಭಕ್ತಾದಿಗಳು  ನೆರವೇರಿಸಿದರು .

Advertisement

ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ ಮಾತನಾಡಿ ಈ ನಾಗರಕಟ್ಟೆಯು ಪುರಾತನ  ಕಾಲದಿಂದಲೂ ಇಲ್ಲಿ ಇದೆ. ಬೇಡಿ ಬಂದ ಭಕ್ತರ  ಬೇಡಿಕೆಯನ್ನು ಈಡೇರಿಸಿರುವ ಉದಾಹರಣೆಗಳು ಇಲ್ಲಿರುವ ಜನರು ಹೇಳುತ್ತಾರೆ.  ಆದರೆ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೆ ಕುಂಠಿತಗೊಂಡಿದ್ದ ನಾಗರಕಟ್ಟೆಯು ಇತ್ತೀಚಿಗೆ ಕೆಲಸದಲ್ಲಿ ಯುವಕರ ಕೆಲಸದಿಂದ ಈ ನಾಗರ ಕಟ್ಟೆಯು ಅಭಿವೃದ್ಧಿ ಹೊಂದಿದ್ದು  ಸುಮಾರು ಐದು ವರ್ಷಗಳಿಂದ  ಇಲ್ಲಿನ ಕೆಲ ಯುವಕರು  ಒಂದು ಸಮಿತಿಯನ್ನು ರಚಿಸಿಕೊಂಡು ನಾಗರಕಟ್ಟೆಯನ್ನು  ಅಭಿವೃದ್ಧಿಪಡಿಸಿ ಇಂದು 5ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಅದ್ದೂರಿಯಿಂದ ನಡೆಸಿದ್ದಾರೆ. ಅವರೆಲ್ಲರಿಗೂ ಭಗವಂತ ಒಳ್ಳೆಯದನ್ನು ಉಂಟುಮಾಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಪವನ್ ಕುಮಾರ್ ಮಾತನಾಡಿ ನಾವು ಚಿಕ್ಕಂದಿನಿಂದಲೂ ನೋಡುತ್ತಿದ್ದೆವು. ಈ ನಾಗದೇವತೆಯನ್ನು ನಂಬಿ ಬಂದ ಭಕ್ತರನ್ನು ಎಂದೂ ಕೈ ಬಿಟ್ಟಿಲ್ಲ.       ಬೇಡಿ ಬಂದ ಭಕ್ತರ  ಬೇಡಿಕೆಗಳನ್ನು ಈಡೇರಿಸಿರುವ ನಾಗದೇವತೆ ಇಲ್ಲಿ ನೆಲೆಸಿದ್ದಾಳೆ ಎಂದು ಭಕ್ತರ ನಂಬಿಕೆ ಹಾಗೆ ನಾವೆಲ್ಲರೂ  ಇಲ್ಲಿ ಪ್ರತಿ ವರ್ಷವೂ ನಾಗರ ಪಂಚಮಿಯಲ್ಲಿ ವಿಶೇಷ ಪೂಜೆ ಪುರಸ್ಕಾರಗಳನ್ನು ಹಮ್ಮಿಕೊಳ್ಳುತ್ತವೆ.  ನಾಡಿನ ಸಮಸ್ತ ಜನತೆಗೆ   ನಾಗದೇವತೆಯು ಆಶೀರ್ವದಿಸಲಿ ಎಂದು ಕೇಳಿಕೊಳ್ಳುತ್ತೇನೆ.

ಭಕ್ತಾದಿ ಮೆಡಿಕಲ್ ನಂಜುಂಡ ಶೆಟ್ಟಿ  ಮಾತನಾಡಿ ಐದು ವರ್ಷಗಳ ಹಿಂದೆ ನಾಗರಕಟ್ಟೆಯನ್ನು ಪ್ರತಿಷ್ಠಾಪನೆ ಮಾಡಲಾಯಿತು.ಎರಡೂ ವರ್ಷಗಳಿಂದ ಕೊರೋನ ಇದ್ದ ಕಾರಣ ಸಾಂಕೇತಿಕವಾಗಿ ಪೂಜೆ ನೆರವೇರಿಸಿದೇವು.  ಇದೀಗ ಅಂತಹ ಮಹಾಮಾರಿಯಿಂದ ದೂರವಾಗಿ ಜನರು ಸಂತೋಷದಿಂದ ಇದ್ದಾರೆ  ಅದಕ್ಕಾಗಿ ನಾಡಿನ ಸಮಸ್ತ ಜನರ ಆರೋಗ್ಯವನ್ನು ಕಾಪಾಡುವಂತೆ ನಾಗದೇವತೆಯ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಅದ್ದೂರಿನಿಂದ ನೆರವೇರಿಸುತ್ತೇವೆ .ನಾಡಿನ ಸಮಸ್ತ ಜನತೆಯ ಆರೋಗ್ಯವನ್ನು ದೇವರು ಕಾಪಾಡಲಿ ಎಂದರು.

ಹನುಮಂತನಾಥ ಸ್ವಾಮೀಜಿ ಮಾತನಾಡಿ, ಲೋಕ ಕಲ್ಯಾಣ ಭಕ್ತರಿಂದ ನಾಗದೇವತೆಗಳ ಪ್ರತಿಮೆಗೆ  ಕ್ಷೀರಾಭಿಷೇಕ ಪುಷ್ಪಾರ್ಚನೆ  ವಿಶೇಷ ಅಲಂಕಾರದೊಂದಿಗೆ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಈ ನಾಗದೇವತೆಯು  ಬೇಡಿ ಬಂದ ಭಕ್ತರ ಎಲ್ಲ ಈಡೇರಿಕೆಗಳನ್ನು ಈಡೇರಿಸಲಿ. ಹಾಗೂ ನಾನು ಸಮಸ್ತ ಜನತೆಯ ಆರೋಗ್ಯವನ್ನು ಕಾಪಾಡಲಿ. ಇಂತಹ ಧಾರ್ಮಿಕ ಕಾರ್ಯಗಳನ್ನು ಅತಿ ಹೆಚ್ಚು ಹೆಚ್ಚು ಜನರು ಮಾಡುವಂತಾಗಲಿ. ದೆವರನ್ನು ನಂಬಿ ಕೆಲಸ ಕಾರ್ಯಗಳನ್ನು ಮಾಡಿದರೆ ಆ ಕೆಲಸಗಳು ಅಭಿವೃದ್ಧಿ ಹೊಂದುತ್ತವೆ. ನಾವು ಮಾಡುವ ಕೆಲಸ ಕಾರ್ಯಗಳನ್ನು ದೇವರಂತೆ ನಂಬಿ ಕೆಲಸ ಕಾರ್ಯಗಳನ್ನು ಮುಂದುವರಿಸಬೇಕು.  ಆಗ ನಮ್ಮ ಕೆಲಸಗಳು ಯಶಸ್ಸನ್ನು ಕಾಣುತ್ತದೆ ಎಂದರು.

Advertisement

ಈ ಸಂದರ್ಭದಲ್ಲಿ  ಎಂ ಜಿ ಜ್ಯೂ ವೆಲ್ಸ್ ಮಾಲಕ ಬದ್ರಿನಾಥ್, ನಂಜುಂಡಿ ಮೆಡಿಕಲ್ ಮಾಲಿಕ ಶಾಲಿನಿ ನಂಜುಂಡಿ, ಮಯೂರ ಮಂಜುಳಾ ಗೋವಿಂದರಾಜು, ಮುಖಂಡ ರಮೇಶ್, ಪಟ್ಟಣ ಪಂಚಾಯತಿ ಸದಸ್ಯ ಲಕ್ಷ್ಮಿನಾರಾಯಣ್, ನಾಗರಕಟ್ಟೆ ಸಮಿತಿಯ ಜೈರಾಮ್, ಎಸ್ ಆರ್ ಕೆ ರಾಮಣ್ಣ, ಮಂಜುನಾಥ್, ನಾರಾಯಣಪ್ಪ,ರಂಗರಾಜು,ಬೇಕರಿ  ಮೋಹನ್ ಸೇರಿದಂತೆ ಅಪಾರ ಭಕ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next