Advertisement

Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ

08:40 PM Nov 27, 2024 | Team Udayavani |

ಕೊರಟಗೆರೆ: ಮಿನಿ ವಿಧಾನಸೌಧ ಕಟ್ಟಡದಲ್ಲಿದ್ದ ಹೆಜ್ಜೇನು ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಮೂವರು ಸಾರ್ವಜನಿಕರ ಮೇಲೆ ದಿಢೀರ್ ದಾಳಿ ನಡೆಸಿರುವ ಘಟನೆ ಬುಧವಾರ ನಡೆದಿದೆ. ಈ ವೇಳೆ ಗಾಯಗೊಂಡವರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಪಟ್ಟಣದ ಮಿನಿ ವಿಧಾನ ಸೌಧ ಕಚೇರಿಗೆ ಸಾರ್ವಜನಿಕರು ತೆರಳುವ ವೇಳೆ ಹೆಜ್ಜೇನು ದಿಢೀರ್ ದಾಳಿ ನಡೆಸಿ ಗ್ರಾಮ ಸಹಾಯಕ ರಘುನಂದನ್, ತುಮಕೂರಿನ ಅನಂತರಾಜು, ರಮೇಶ್, ಕೊರಟಗೆರೆಯ ಶಿವಣ್ಣನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾರ್ವಜನಿಕ ಆಸ್ಪತ್ರೆಗೆ ತಹಸೀಲ್ದಾರ್ ಮಂಜುನಾಥ.ಕೆ ಭೇಟಿ ನೀಡಿ ಅಸ್ವಸ್ಥರಾಗಿದ್ದ ನಾಲ್ವರ ಆರೋಗ್ಯ ವಿಚಾರಿಸಿದರು. ತ್ವರಿತವಾಗಿ ಹೆಜ್ಜೇನು ಗೂಡುಗಳ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next