Advertisement

Koratagere: 4 ತಿಂಗಳ ಚಿರತೆ ಮರಿ ಪತ್ತೆ

06:41 PM Sep 03, 2024 | Team Udayavani |

ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗಾ ಹೋಬಳಿಯ ಹೊಲತಾಳು ಗ್ರಾಮದಲ್ಲಿ ಸುಮಾರು 4 ತಿಂಗಳ ಚಿರತೆ ಮರಿ ಪತ್ತೆಯಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Advertisement

ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಕುರಂಕೋಟೆ ಗ್ರಾ.ಪಂ. ಹೊಲತಾಳು ಗ್ರಾಮದಲ್ಲಿ ಮುಂಜಾನೆ ಸುಮಾರು 5 ಗಂಟೆ ಸಮಯ ನಾಯಿಗಳು ಬೊಗಳುವ ಶಬ್ದ ಹೆಚ್ಚಾಗಿ ಕೇಳಿ ಬಂದ ಹಿನ್ನೆಲೆ ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ನೋಡಿದಾಗ ಚಿರತೆ ಮರಿ ಕಂಡು ಬಂದಿದೆ.

ಮರಿ ಚಿರತೆ ನೋಡಲು ಗ್ರಾಮಸ್ಥರು ಮುಗಿ ಬಿದ್ದಿದ್ದು, ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಮಾಹಿತಿ ಲಭಿಸಿದ ತಕ್ಷಣ ತಾಲೂಕು ಅರಣ್ಯಾಧಿಕಾರಿ ಸಿ.ರವಿ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಮರಿಯನ್ನು ವಶಕ್ಕೆ ಪಡೆದು ಸ್ವಲ್ಪ ಸಮಯ ಆರೈಕೆ ಮಾಡಿ ನಂತರ ಚಿರತೆ ಮರಿಯನ್ನು ತಾಯಿ ಚಿರತೆ ಜೊತೆಗೆ ಸೇರಲು ಮತ್ತೆ ಅರಣ್ಯದಲ್ಲಿಯೇ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next