Advertisement
ಎ. 5ರಂದು ಬೆಳಗ್ಗೆ 8ಕ್ಕೆ ಗಣಹೋಮ, 11ಕ್ಕೆ ನಾಗ ತಂಬಿಲ, ಮಧ್ಯಾಹ್ನ 12ಕ್ಕೆ ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆ, 1ಕ್ಕೆ ಅನ್ನ ಪ್ರಸಾದ, ಸಂಜೆ 6.30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ರಾತ್ರಿ 9 ಕ್ಕೆ ಅನ್ನಪ್ರಸಾದ, ಎ.6ರಂದು ಅಪರಾಹ್ನ 12ಕ್ಕೆ ಗುಳಿಗ ತಂಬಿಲ, 1ಕ್ಕೆ ಅನ್ನ ಪ್ರಸಾದ, ಸಂಜೆ 6ಕ್ಕೆ ಭಂಡಾರ ಇಳಿಯುವುದು, ರಾತ್ರಿ 7ರಿಂದ ಶ್ರೀ ಗುಳಿಗನ ಕೋಲ, ಅನ್ನಪ್ರಸಾದ, 10ರಿಂದ ಶ್ರೀ ಪಂಜುರ್ಲಿ ಕಲ್ಲುರ್ಟಿ (ಸತ್ಯದೇವತೆ), ಕೋಲ, ಪ್ರಸಾದ ವಿತರಣೆ ನಡೆಯಲಿದೆ. ಎ. 7ರಂದು ಬೆಳಗ್ಗೆ ಶ್ರೀ ಧೂಮಾವತಿ ದೈವದ ನೇಮ, ಮಧ್ಯಾಹ್ನ 1ರಿಂದ ಅನ್ನಪ್ರಸಾದ, ಸಂಜೆ 6ರಿಂದ ಶ್ರೀ ಕೊರತಿ ಅಮ್ಮನ ಕೋಲ, ಭಂಡಾರ ಏರುವುದು.ಎ. 8ರಂದು ಮಧ್ಯಾಹ್ನ 12ಕ್ಕೆ ಗುಳಿಗ ತಂಬಿಲ, 1ಕ್ಕೆ ಅನ್ನಪ್ರಸಾದ, ರಾತ್ರಿ 7ರಿಂದ ಗುಳಿಗನ ಕೋಲ, ಕೊರತಿ ಅಮ್ಮನ ಕೋಲ, ಅನ್ನಪ್ರಸಾದ ವಿತರಣೆ ನಡೆಯಲಿದೆ.