ಕೊಪ್ಪಳ: 2024 ರ ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಘನಾಥರಾವ್ ಮಲ್ಕಾಪುರೆ ಹೇಳಿದರು.
ಕೊಪ್ಪಳ ಲೋಕಸಭಾ ಕ್ಷೇತ್ರ ಪ್ರಚಾರ ಕಚೇರಿ ಉದ್ಘಾಟನೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
10 ವರ್ಷದಲ್ಲಿ ಮೋದಿ ನೇತೃತ್ವದ ಸರಕಾರದ ಸಾಧನೆ ಹಾಗು ಮನಮೋಹನ್ ಸಿಂಗ್ ಸರಕಾರ ಸಾಧನೆಯನ್ನು ಜನ ತುಲನೆ ಮಾಡುತ್ತಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಎದುರಿಸಲು ಇಂಡಿಯಾ ಒಕ್ಕೂಟ ಬಿಕ್ಕಟ್ಟಿನಲ್ಲಿದೆ. ಒಕ್ಕೂಟ ಆರಂಭದ ಮೊದಲೇ ಬಿರುಕು ಬಿಟ್ಟಿದೆ. ಕಾಂಗ್ರೆಸ್ ದ್ವಂದ್ವ ನೀತಿಯಿಂದಾಗಿ ಈಗ ಹೀನಾಯ ಸ್ಥಿತಿಗೆ ತಲುಪಿದೆ ಎಂದರು.
ಲೋಕಸಭಾ ಕ್ಷೇತ್ರದಲ್ಲಿ 10 ವರ್ಷದಲ್ಲಿ ಕರಡಿ ಸಂಗಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಈಗಾಗಲೇ ನಾವು ಚುನಾವಣೆಗೆ ಕಾರ್ಯಕರ್ತರು ಸಿದ್ದವಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯ ಬಗ್ಗೆ ಕಾರ್ಯಕರ್ತರು ಚಿಂತನೆ ಮಾಡುತ್ತಿಲ್ಲ. ಕಾರ್ಯಕರ್ತರ ಅಭಿಪ್ರಾಯ ಪಡೆದು ಘೋಷಣೆ ಮಾಡಲಿದ್ದೇವೆ ಎಂದರು.
ನರೇಂದ್ರ ಮೋದಿಯಲ್ಲಿ ಎಲ್ಲರೂ ಟಿಕೆಟ್ ಕೇಳುತ್ತಿದ್ದಾರೆ. ಕೊಪ್ಪಳದಲ್ಲಿ ಎಂಪಿ ಸ್ಥಾನ ಖಾಲಿ ಇಲ್ಲ. ಆದರೂ ಟಿಕೆಟ್ ಕೇಳುತ್ತಾರೆ. ಈ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಗ್ಯಾರಂಟಿ ಯೋಜನೆಗಳು ಅಧೋಗತಿಗೆ ಹೋಗಿದೆ. ಜನ ಒಮ್ಮೆ ಕನಸು ಕಂಡಿದ್ದರು. ಈಗ ಗ್ಯಾರಂಟಿ ಯೋಜನೆ ವಿಫಲವಾಗಿವೆ. ಹಾಗಾಗಿ ಜನರು ರೊಚ್ಚಿಗೆದ್ದಿದ್ದಾರೆ ಎಂದರು.
ಈ ವೇಳೆ ನವೀನ್ ಗುಳಗಣ್ಣನವರ, ಪರಣ್ಣ ಮುನವಳ್ಳಿ, ಸಂಗಣ್ಣ ಕರಡಿ, ಹಾಲಪ್ಪ ಆಚಾರ, ಶರಣು ತಳ್ಳಿಕೇರಿ, ಚಂದ್ರಶೇಖರ ಹಲಗೇರಿ, ಗಿರಿಗೌಡ, ಜಿ ವೀರಪ್ಪ, ಕರಿಯಪ್ಪ, ಮಂಜುಳಾ ಕರಡಿ, ಕೆ ಶರಣಪ್ಪ. ರಾಜೇಶ ಹಿರೇಮಠ, ಪ್ರತಾಪಗೌಡ ಪಾಟೀಲ, ಅನಿಲ್ ಮೋಕಾ ಇದ್ದರು.