ಕುಷ್ಟಗಿ: ಕೊಪ್ಪಳ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೇಟ್ ನೀಡುವಂತೆ ಪುರಸಭೆ ಗಂಗಾಧರ ಸ್ವಾಮಿ ಹಿರೇಮಠ ಆಗ್ರಹಿಸಿದ್ದಾರೆ.
ಶುಕ್ರವಾರ ಇಲ್ಲಿನ ಹಳೆಯ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಸರ್ವ ಧರ್ಮ ಸಮನ್ವಯಕಾರ, ಅಭಿವೃದ್ಧಿಯ ಹರಿಕಾರರು ಆಗಿದ್ದು ಈ ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ದಿಸಲು ಅವಕಾಶ ಕಲ್ಪಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮೀತ ಶಾ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಕ್ಷ ನಳೀನಕುಮಾರ ಕಟೀಲ ಅವರಿಗೆ ಮನವಿ ರವಾನಿಸಿದ್ದಾರೆ.
ಸಂಗಣ್ಣ ಕರಡಿ ಅವರು,ಕೊಪ್ಪಳ ಜಿಲ್ಲೆಯ ಹಿರಿಯ ರಾಜಕಾರಣಿ ಅವರಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೇಟ್ ನೀಡುವುದರಿಂದ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಗಂಗಾವತಿ ಬಿಜೆಪಿ ಗೆಲ್ಲುವುದರಲ್ಲಿ ಎರಡು ಮಾತಿಲ್ಲ. ಸಂಘಟನೆಯ ಬಲವು ಇನ್ನಷ್ಟು ಹೆಚ್ಚಲಿದೆ ಎಂದು ಗಂಗಾಧರಸ್ವಾಮಿ ಹಿರೇಮಠ ತಿಳಿಸಿದರು.
ಬಿಜೆಪಿ ಮುಖಂಡ ಶಶಿಧರ ಕವಲಿ ಮಾತನಾಡಿ, ಕರಡಿ ಸಂಗಣ್ಣ ಅವರು 1978 ರಲ್ಲಿ ಟಿಡಿಪಿ ಸದಸ್ಯರಾಗಿ, 1984ರಲ್ಲಿ ಜಿ.ಪಂ. ಸದಸ್ಯರಾಗಿ, 1994 ರಿಂದ ನಾಲ್ಕು ಬಾರಿ ಶಾಸಕರಾಗಿ ನಂತರ ಎರಡು ಬಾರಿ ಸಂಸದರಾಗಿ ರಾಜಕಾರಣದಲ್ಲಿ ಪಾದರಸದಂತೆ ಸಕ್ರೀಯವಾಗಿದ್ದಾರೆ. ಸಂಸದರು ಎಂದರೆ ಜನರ ಕೈಗೆ ಸಿಗುವ ಕಾಲದಲ್ಲಿ ಕರಡಿ ಸಂಗಣ್ಣ ಅವರು ಜನರ ಮದ್ಯೆ ಇರುವ ರಾಜಕಾರಣಿ ಎಂದರು. ಪಟ್ಟಣ ಪಂಚಾಯತಿ ಅಧ್ಯಕ್ಷ ಸಿದ್ದಲಿಂಗಪ್ಲ ಕಲಕಬಂಡಿ, ಶಿವಣ್ಣ ತುರಕಾಣಿ, ಮಲ್ಲಿಕಾರ್ಜುನ ಮಸೂತಿ, ಪ್ರಕಾಶಗೌಡ ಬೆದವಟ್ಟಿ, ಪುರಸಭೆ ಸದಸ್ಯರಾದ ಬಸವರಾಜ ಬುಡಕುಂಟಿ, ಜೆ.ಜಿ. ಆಚಾರ್, ವೀರಣ್ಣ ಸೊಬರದ, ಮಹಾಂತಯ್ಯ ಅರಳಲಿಮಠ ಮತ್ತೀತರರಿದ್ದರು.