Advertisement

ಚರಂಡಿ ಮರು ಕಾಮಗಾರಿಗೆ ಆದೇಶ

11:08 AM May 30, 2019 | Team Udayavani |

ಗಂಗಾವತಿ: ಅಮೃತ ಸಿಟಿ ಯೋಜನೆಯಡಿ ನಡೆಸುತ್ತಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಪುನರ್‌ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಆದೇಶದ ನೀಡಿದ್ದಾರೆ.

Advertisement

ಈ ಕುರಿತು ನಗರಸಭೆ ಸದಸ್ಯ ಎಫ್‌.ರಾಘವೇಂದ್ರ ಪ್ರಕಟಣೆ ನೀಡಿದ್ದು, ಮೊದಲು ಕೈಗೊಂಡ ಕಾಮಗಾರಿ ನಿಲ್ಲಿಸಬೇಕು. ಚಿಕ್ಕಮಕ್ಕಳ ಪಾರ್ಕ್‌ ನಿಂದ ಕಾಮಗಾರಿ ನಡೆಸುತ್ತಿರುವುದು ಸ್ವಾಗತಾರ್ಹ. ಕಾಮಗಾರಿಗೆ ಬಳಸುವ ಸಾಮಾಗ್ರಿಗಳು ಕಳಪೆಯಾಗಿದ್ದು ಮತ್ತು ಅವೈಜ್ಞಾನಿಕವಾಗಿವೆ. 11ಕೆವಿ ವಿದ್ಯುತ್‌ ಕಂಬಗಳು ಚರಂಡಿಯಲ್ಲಿ ಬರುತ್ತಿದ್ದು, ಇದನ್ನು ಸ್ಥಳಾಂತರ ಮಾಡದೇ ಕಾಮಗಾರಿ ನಡೆಸುತ್ತಿದ್ದು, ಚಿಕ್ಕಮಕ್ಕಳ ಪಾರ್ಕ್‌ನಿಂದ ಕನಕದಾಸ ವೃತ್ತದ ಮೂಲಕ ಹೊಸಳ್ಳಿ ಮುಖ್ಯರಸ್ತೆ ಮಾರ್ಗವಾಗಿ ದುರ್ಗಮ್ಮನ ಹಳ್ಳದ ಚರಂಡಿವರೆಗೂ ಸುಮಾರು 1,700 ಮೀಟರ್‌ ಕಾಮಗಾರಿಯ ಅಂದಾಜು ಮೊತ್ತ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಬೇಕಾಗಿತ್ತು. ಕಾಮಗಾರಿ ಗುತ್ತಿಗೆ ಪಡೆದವರು ಸಣ್ಣ ಮಕ್ಕಳ ಪಾರ್ಕ್‌ನಿಂದ ಪ್ರಾರಂಭಿಸುವ ಬದಲಾಗಿ ಎಲ್ಲಿಬೇಕೆಂದಲ್ಲಿ ಗುಂಡಿ ತೋಡಿ ಸಾರ್ವಜನಿಕ ರಸ್ತೆಯನ್ನು ಹಾಳು ಮಾಡಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಕಾರಣ ತಕ್ಷಣವಾಗಿ ಮೇಲಿನ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಬೇಕು. ಎಲ್ಲ ಗುತ್ತಿಗೆದಾರರ ಪರವಾನಗಿ ಕಪ್ಪುಪಟ್ಟಿಗೆ ಸೇರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವ ದೂರು ನೀಡಲಾಗಿತ್ತು.

ಸದರಿ ಕಾಮಗಾರಿಗಳನ್ನು ಏಜೆನ್ಸಿ, ಉಪ ಗುತ್ತಿಗೆಯ ಮೇಲೆ ಅನುಭವ ಇಲ್ಲದ ವ್ಯಕ್ತಿಗಳಿಗೆ ಒಪ್ಪಿಸಿದ್ದು, ಚರಂಡಿ ಕಾಮಗಾರಿ ನಿರ್ವಹಿಸುತ್ತಿರುವ ವ್ಯಕ್ತಿಗಳು ಹಣಬಲ, ರಾಜಕೀಯ ಬಲದಿಂದ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಗಂಗಾವತಿ ಅರ್ಧದಷ್ಟು ಚರಂಡಿ ನೀರು ಮತ್ತು ಮಳೆನೀರು ಹರಿದು ಹೋಗುವ ಪ್ರಮುಖವಾದ ಈ ಚರಂಡಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸುತ್ತಿದ್ದಾರೆ. ಇದರ ಬಗ್ಗೆ ಈಗಾಗಲೇ ಪೌರಾಯುಕ್ತರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿದ್ದಿಲ್ಲ. ನಂತರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಆದೇಶದಂತೆ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರ ಮಂಜುನಾಥ ತಳವಾರ್‌ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡಿದಾಗ ಕಳಪೆ ಎಂದು ಸಾಬೀತಾಗಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗಳು ಈಗ ಸೂಚಿಸಿದ್ದಾರೆ ಎಂದು ಎಫ್‌.ರಾಘವೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next