Advertisement
ನಗರದ ಶಿವಶಾಂತ ಮಂಗಲ ಭವನದಲ್ಲಿ ಬುಧವಾರ ಮತ್ತೆ ಕಲ್ಯಾಣ ಸಮಿತಿಯಿಂದ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಏಷ್ಟೋ ಜನರು ದೇವರನ್ನು ಒಲಿಸಿಕೊಳ್ಳಲು ಮಠ, ಮಂದಿರ, ಮಸೀದಿ, ಚರ್ಚ್‌ಗಳಿಗೆ ತೆರಳಿ ಗಂಟೆಗಳ ಕಾಲ ಧ್ಯಾನ, ಮೌನಾಚರಣೆ ಮಾಡುತ್ತಾರೆ. ಆದರೆ ದೇಗುಲದಿಂದ ಹೊರ ಬಂದಾಕ್ಷಣ ಮತ್ತೆ ಲೌಖೀಕ ಬದುಕಿನಲ್ಲಿ ತೊಡಗಿ ಮಾಡಬಾರದ್ದನ್ನು ಮಾಡುತ್ತಾರೆ. ಅಂತರಂಗದಲ್ಲಿ ಒಂದಿದ್ದರೆ, ಬಹಿರಂಗದಲ್ಲಿ ಒಂದು ಮಾಡುತ್ತಾರೆ. ಮೊದಲು ಅಂತರಂಗ, ಬಹಿರಂಗ ಶುದ್ಧಿ ಮಾಡಿಕೊಳ್ಳಬೇಕಿದೆ. ಒಳ್ಳೆಯ ಮಾತು, ಒಳ್ಳೆಯ ಕಾರ್ಯ, ಎಲ್ಲರ ಹಿತ ಬಯಸುವುದು, ಉತ್ತಮರ ಸಂಗವು ನಮ್ಮನ್ನು ಶುದ್ಧಿಗೊಳಿಸಲಿದೆ. ಇತ್ತೀಚೆಗಂತೂ ಶುದ್ಧಿಗಾಗಿ ದೂರದ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ನಿಮ್ಮ ಕಾಯಕದಲ್ಲಿಯೇ ನೀವು ದೇವರನ್ನು ಕಾಣಿ. ಶ್ರಮವಿಲ್ಲದೇ ನಾವು ಉನ್ನತಿಗೆ ಬರಲು ಸಾಧ್ಯವಿಲ್ಲ ಎಂದರು.
Related Articles
Advertisement
12ನೇ ಶತಮಾನದಲ್ಲಿ ಬಸವಣ್ಣ ವೇದದ ನೀತಿಗಳ ವಿರುದ್ಧ ಹೋರಾಡಿದರು. ಪ್ರಭುತ್ವವನ್ನೇ ಧಿಕ್ಕಾರ ಮಾಡಿ ಕಾಯಕವೇ ಕೈಲಾಸ. ಅಲ್ಲಿಯೇ ದೇವರನ್ನು ಕಾಣಿ ಎಂಬ ಸಂದೇಶ ಸಾರಿದರು. ಆದರೆ ಇಂದು ವಂಚನೆಯ ವ್ಯವಸ್ಥೆ ಹೆಚ್ಚಾಗಿದೆ. ಆಯ್ದಕ್ಕಿ ಲಕ್ಕಮ್ಮ ಈಸಕ್ಕಿ ಆಸೆ ನಮಗೇಕಯ್ಯ ಎಂದು ಪತಿಗೆ ಹೇಳಿದ್ದರಂತೆ. ಒಂದು ದಿನಕ್ಕೆ ಆಗುವಷ್ಟು ಅಕ್ಕಿ ನಮಗಿದೆ. ನಾಳೆಯ ಅಕ್ಕಿ ನಮಗೇಕೆ ಎಂದು ಹೇಳಿದ್ದಳು. ಆದರೆ ಇಂದು ಕೋಟಿ ಕೋಟಿ ಲೂಟಿ ಹೊಡೆದು ಪರಾರಿಯಾಗುವ ಸಂಸ್ಕೃತಿ ಬೆಳೆದಿದೆ. ಇಂದು ಬಸವಣ್ಣನ ಕಾಯಕ ಚಿಂತನೆ, ಲಕ್ಕಮ್ಮನ ಚಿಂತನೆಗಳು ಅವಶ್ಯವಾಗಿವೆ ಎಂದರು.
ಅರ್ಥ, ಅಹಂಕಾರ, ಕುಲ ಮಧ ತೊಲಗಿದುವುದು ಮತ್ತೆ ಕಲ್ಯಾಣದ ಆಶಯವಾಗಿದೆ. ಜಗತ್ತಿನ ಎಲ್ಲ ಧರ್ಮಗಳು ಮನುಷ್ಯ ಹೇಗೆ ಬಾಳಬೇಕು ಎಂದು ಬೋಧಿಸಿವೆ. ಹಲವಾರು ಧರ್ಮಗಳು ಕೂಡಿಕೊಂಡು ಹೇಗೆ ಬದುಕಬೇಕು ಎಂದು ಯಾವ ಧರ್ಮ ಹೇಳಿಲ್ಲ. ಆದರೆ ಬಸವಣ್ಣ ಅದನ್ನು ಹೇಳಿದ್ದಾರೆ. ತಾತ್ವಿಕವಾಗಿ, ಮಾನಸಿಕವಾಗಿ ನಮ್ಮ ಚಿಂತನೆಗಳ ಮೂಲಕ 12ನೇ ಶತಮಾನದ ಚಿಂತನೆ ಮಾಡೋಣ, ಮಾನವ ಧರ್ಮ ಕಾಪಾಡೋಣ ಎನ್ನುವ ಸಂದೇಶ ನೀಡಿದರು. ಸಮಾರಂಭದಲ್ಲಿ ಸಾವಿತ್ರಿ ಮಜಂದಾರ, ಮೌಲಾನಾ ಮಹ್ಮದ್ ಇಮ್ತಿಯಾಜ್ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.