Advertisement

Koppala: 3 ಲಕ್ಷ ರೂ.ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಅಧಿಕಾರಿ

11:10 PM May 29, 2024 | Team Udayavani |

ಕೊಪ್ಪಳ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೇಔಟ್ ಗೆ ಪರವಾನಗಿ ನೀಡಲು ಲಂಚ ಕೇಳಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಡಿಸಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಯಲ್ಲಿ ಬುಧವಾರ ರಾತ್ರಿ ಲಂಚ ಪಡೆಯುತ್ತಿದ್ದಾಗ ಕೊಪ್ಪಳ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಅಧಿಕಾರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Advertisement

ರಮೇಶ್ ಬಸವವಗೌಡ, ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಇಲಾಖೆಯಲ್ಲಿ ಟೌನ್ ಪ್ಲ್ಯಾನರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಲೇಔಟ್ ಪರವಾನಗಿ ನೀಡಲು ಎಂಟು ಲಕ್ಷ ರೂಪಾಯಿ ಗೆ ರಮೇಶ ಬೇಡಿಕೆ ಇಟ್ಟಿದ್ದರಂತೆ. ತನ್ನ ಖಾಸಗಿ ಸಹಾಯಕ ಮೂಲಕ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಕುಕನೂರ ಮೂಲದ ರವಿಚಂದ್ರ ಎನ್ನೋರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಮೂರು ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ರಮೇಶ ಬಲೆಗೆ ಬಿದ್ದಿದ್ದಾನೆ. ರಾತ್ರಿ ಲೋಕಾಯುಕ್ತ ಎಸ್ಪಿ ಮಾರ್ಗದರ್ಶನ ದಲ್ಲಿ ಕೊಪ್ಪಳ ಲೋಕಾಯುಕ್ತ ಪಿಐ ಸುನೀಲ್ ಮೇಗಲಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪರಿಶೀಲನೆ ಮುಂದುವರಿದಿದೆ.

ಇದನ್ನೂ ಓದಿ: Mahalingapura: ಅಕ್ರಮ ಭ್ರೂಣಹತ್ಯೆ ಪ್ರಕರಣ: ಮೂವರ ಬಂಧನ, ಏಳು ಜನರ ವಿರುದ್ಧ ಪ್ರಕರಣ ದಾಖಲು

Advertisement
Advertisement

Udayavani is now on Telegram. Click here to join our channel and stay updated with the latest news.

Next