Advertisement
ಬಿಜೆಪಿ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ನಡೆಯುವ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಸಮಾವೇಶದ ಸ್ಥಳಕ್ಕೆ ಆಗಮಿಸಿದ್ದ ಲಕ್ಷಾಂತರ ಜನರು ಬಿಸಲು ಲೆಕ್ಕಿಸದೇ ಬಂದು ಕುಳಿತು ಮೋದಿ ಹಾದಿಯನ್ನೇ ನೋಡುತ್ತಿದ್ದರು.ಎಲ್ಲೆಡೆಯೂ ಜನ ಸಂಗುಳಿ ನೋಡಿದ ಪೊಲೀಸರೇ ಕಕ್ಕಾಬಿಕ್ಕಿಯಾಗಿ ಜನರ ನಿಯಂತ್ರಣ ಮಾಡುವಲ್ಲಿ ಹರ ಸಾಹಸ ಪಡುತ್ತಿದ್ದರು.
ಬಿದ್ದಿದ್ದರು. ಎಲ್ಲೂ ನೋಡಿದರೂ ಮೋದಿಯ ಮಾತು-ಗುಣಗಾನ ಕೇಳಿ ಬಂದಿತು. ಅಲ್ಲದೇ, ಕೇಸರಿಯಮ ವಾತಾವರಣ ನೋಡಿ ಎಲ್ಲರೂ ತಬ್ಬಿಬ್ಟಾಗುತ್ತಿದ್ದರು. ಗಂಗಾವತಿ ಕೃಷಿ ವಿಸ್ತರಣಾ ಕೇಂದ್ರದ ಮುಂದೆ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪೆಂಡಾಲ್‌ನಲ್ಲಿನ ಮಿತಿಯನ್ನೂ ಮೀರಿ ಜನಸ್ತೋಮ ಸೇರಿತ್ತು. ನಗರದ ಇಸ್ಲಾಂಪುರ ಸರ್ಕಲ್‌ನಿಂದ ಹಿಡಿದು ಸಮಾವೇಶದವರೆಗೂ ಜನರು ನಡೆದುಕೊಂಡೇ ಆಗಮಿಸಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಗಮಿಸಿದ ಮೋದಿ ನೇರ ವೇದಿಕೆಯತ್ತ ಆಗಮಿಸಿ ಜನರತ್ತ ಕೈ ಬೀಸಿದರು. ಮೋದಿಯನ್ನು ಹತ್ತಿರದಿಂದ ನೋಡಲು ಆಗಮಿಸುತ್ತಿದ್ದ ಯುವಕರನ್ನು ನೋಡಿ ಮತ್ತೆ ಅವರತ್ತ ಕೈ ಬೀಸಿ ಅಲ್ಲೇ ನಿಂತ
ಸ್ಥಳದಲ್ಲೇ ಇರಿ ನಾನು ನಿಮ್ಮ ಮಾತನಾಡುವೆ ಎಂದು ಸನ್ನೆ ಮಾಡಿ ಸೆಲ್ಯೂಟ್ ಹೊಡೆದರು. ಆದರೂ ಮೋದಿಯ ಸ್ಟೈಲ್‌ಗೆ ಫಿದಾ ಆದ ಯುವ ಜನತೆ ಮೋದಿ.. ಮೋದಿ.. ಎನ್ನುವ ಜೈಕಾರ ಕೂಗುತ್ತಲೇ ಇದ್ದರು.
Related Articles
ಸ್ವಾಮೀಜಿ, ಮಠಗಳ ಸಂತರು, ಅಂಜನಾ ದ್ರಿ ಬೆಟ್ಟ ಸೇರಿದಂತೆ ಹಲವು ಮಠಗಳ ಸ್ಮರಣೆ ಮಾಡುತ್ತಲೇ ಮಾತು ಆರಂಭಿಸಿದರು. ಎಲ್ಲಲ್ಲೂ ಮಾತಿನ ಮಧ್ಯೆ ಮೋದಿ ಬಗ್ಗೆ ಜೈಕಾರ ಹಾಕುತ್ತಿದ್ದಂತೆ, ಜನರ ನಿಯಂತ್ರಣ ತಪ್ಪಿ ಮೋದಿ ವೇದಿಕೆಯ ಸಮೀಪದಲ್ಲಿಯೇ ಯುವಕರು ಆಗಮಿಸಿದರು. ಇದರಿಂದ
ಸ್ವತಃ ಮೋದಿ ಅವರೇ ವೇದಿಕೆಯ ಕೊನೆಯ ಭಾಗಕ್ಕೆ ತೆರಳಿ ಯುವ ಸಮೂಹದತ್ತ ಕೈ ಬೀಸಿ ನಿಮ್ಮ ಪ್ರೀತಿ, ವಾತ್ಸಲ್ಯಕ್ಕೆ ತುಂಬ ಅಭಾರಿಯಾಗಿದ್ದೇನೆ. ಈ ಪುಣ್ಯ ಭೂಮಿಯಲ್ಲಿ ಈ ಜನಸಾಗರ ನೋಡಿದ್ದು ನನ್ನ ಸೌಭಾಗ್ಯವೇ ಸರಿ. ಪ್ರತಿಯೊಬ್ಬರೂ ತಾಳ್ಮೆಯಿಂದ ಇರಿ. ಸಾವಧಾನವಾಗಿರಿ ಎಂದರಲ್ಲದೇ, ಈ ಜನಸ್ತೋಮದ ಆಶೀರ್ವಾದ ನಮಗೆ ಬೇಕಿದೆ. ಮತದಾನದ ದಿನದಂದು ಇದೇ ರೀತಿ ಬೃಹತ್ ಪ್ರಮಾಣದಲ್ಲಿ ಮತಗಟ್ಟೆಗಳ ಮುಂದೆ ನಿಂತ ವೋಟ್ ಮಾಡಿಸಬೇಕೆಂಬ ಸಂದೇಶ
ನೀಡಿದರು.
Advertisement
ಮೋದಿಗೆ ಬೆಳ್ಳಿ ಗದೆ ಅರ್ಪಣೆಪ್ರಧಾನಿ ನರೇಂದ್ರ ಮೋದಿ ಹನುಮನು ಜನಿಸಿದ ನಾಡಿಗೆ ಆಗಮಿಸುತ್ತಿರುವ
ಹಿನ್ನೆಲೆಯಲ್ಲಿ ಗಂಗಾವತಿಯ ಹನುಮ ಮಾಲಾಧಾರಿಗಳು ಬೆಳ್ಳಿ
ಗದೆ ಅರ್ಪಣೆ ಮಾಡಿದರು. ಅಲ್ಲದೇ, ಹಲವು ಮಾಲಾಧಾರಿಗಳು ವೇದಿಕೆ
ಮುಂಭಾಗದಲ್ಲಿಯೇ ಕುಳಿತು ಮೋದಿ ಪರ ಜೈಕಾರ ಕೂಗಿದರು. ಜೊತೆಗೆ ಅಲ್ಲಲ್ಲಿ ನಿಂತು ವಿವಿಧ ವ್ಯವಸ್ಥೆ ಮಾಡುತ್ತಿದ್ದರು.