Advertisement
ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜ.18ರಂದು ಬೆಳಗ್ಗೆ 8:30ಕ್ಕೆ ಕೃಪಾದೃಷ್ಟಿ-ನೇತ್ರದಾನ ಜಾಗೃತಿ ಅಭಿಯಾನ ಜಾಥಾ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಬಸವ ಪಟ ಆರೋಹಣ ಕಾರ್ಯಕ್ರಮ, ಅಂದು ಸಂಜೆ ಮಠದ ಕೈಲಾಸ ಮಂಟಪದಲ್ಲಿ ಉಡಿ ತುಂಬುವ ಕಾರ್ಯಕ್ರಮ, ಜ.19ರಂದು ಸಂಜೆ 5ಕ್ಕೆ ತೆಪ್ಪೋತ್ಸವದಲ್ಲಿ ಗವಿಸಿದ್ಧೇಶ್ವರ ಮೂರ್ತಿಯ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.
Related Articles
Advertisement
ಭಕ್ತಹಿತಚಿಂತನ ಸಭೆ:ಜ.23ರಂದು ಬೆಳಗ್ಗೆ ಕಬಡ್ಡಿ ಪಂದ್ಯಾವಳಿ, ಸಂಜೆ 4ಗಂಟೆಗೆ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ, ಸಿದ್ಧೇಶ್ವರರ ಮೂರ್ತಿ ಮೆರವಣಿಗೆ ನಡೆಯಲಿದೆ. ಸಂಜೆ 5:30ಕ್ಕೆ ಕೈಲಾಸ ಮಂಟಪದಲ್ಲಿ ಭಕ್ತ ಹಿತಚಿಂತನ ಸಭೆ ನಡೆಯಲಿದ್ದು, ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ, ಕರಿಬಸವ ಶಿವಾಚಾರ್ಯರು, ಪರಮ ರಾಮಾರೂಢ ಸ್ವಾಮೀಜಿ, ಅಮರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಟಿ.ಎಸ್. ನಾಗಾಭರಣ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಗೀತ, ನೆರಳು ಬೆಳಕು ಕಾರ್ಯಕ್ರಮ ನಡೆಯಲಿದೆ. ಜ.22 ಹಾಗೂ 23ರಂದು ರಾತ್ರಿ 10:30ಕ್ಕೆ ಕೈಲಾಸ ಮಂಟಪದಲ್ಲಿ ಗವಿಸಿದ್ಧೇಶ್ವರರ ಸೇವಾ ನಾಟ್ಯ ಸಂಘದಿಂದ ಶ್ರೀ ಗವಿಸಿದ್ಧೇಶ್ವರರ ಮಹಾತ್ಮ ನಾಟಕ ಪ್ರದರ್ಶನಗೊಳ್ಳಲಿದೆ.
ಜ.24ರಂದು ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ನಾಡೋಜ ಡಾ| ಅನ್ನದಾನೇಶ್ವರ ಸ್ವಾಮೀಜಿ, ವಾಮದೇವ ಶಿವಾಚಾರ್ಯರು, ಚಿದಾನಂದ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ರಾಷ್ಟ್ರೀಯ ಜಲಪುರುಷ ಡಾ| ರಾಜೇಂದ್ರ ಸಿಂಗ್ ಸಮಾರೋಪ ನುಡಿಯನ್ನಾಡಲಿದ್ದಾರೆ. ಬಳಿಕ ಭಾವತರಂಗ, ವಿಸ್ಮಯ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.