Advertisement

ಸರಳತೆಗೆ ಸಾಕ್ಷಿಯಾದ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ

12:02 PM Jan 30, 2021 | Team Udayavani |

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಇಂದು ಬೆಳಗ್ಗೆ ಕೋವಿಡ್ ಜಾಗೃತಿಯ ಮಧ್ಯೆ ಸಂಪ್ರದಾಯ ಮೀರದೆ ಸರಳತೆ ಮಹಾ ರಥೋತ್ಸವ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿತು.

Advertisement

ಸರ್ಕಾರದ ಮಾರ್ಗಸೂಚಿಗೆ ಒಳಪಟ್ಟು ಜಿಲ್ಲಾಡಳಿತದ ಅನುಮತಿ ಮೇರೆಗೆ ಮಹಾ ರಥೋತ್ಸವ ಇಂದು ಬೆಳಗ್ಗೆ 8.45 ಗಂಟೆ ಸುಮಾರಿಗೆ ಗವಿಸಿದ್ದೇಶ್ವರ ಜಯ ಘೋಷದ ಮಧ್ಯೆ ನೆರವೇರಿತು.

ಇದನ್ನೂ ಓದಿ: ನೂತನ ಕೃಷಿ ಕಾಯ್ದೆ; ಹೋರಾಟದಿಂದ ಹಿಂದೆ ಸರಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ

82ನೇ ವಯಸ್ಸಿನಲ್ಲಿ ಕೋವಿಡ್ ಗೆದ್ದ ಬಿಜಕಲ್ ಮಠದ ಶ್ರೀ ಶಿವಲಿಂಗ ಸ್ವಾಮೀಜಿಗಳು ಮಹಾ ರಥೋತ್ಸವಕ್ಕೆ ಚಾಲನೆ‌ ನೀಡಿದರು. ವಿವಿಧ ಮಠಗಳ ಸ್ವಾಮೀಜಿ ಅವರು ಪಾಲ್ಗೊಂಡಿದ್ದರು.

Advertisement

ಪ್ರತಿ ವರ್ಷ 7-8 ಲಕ್ಷ ಭಕ್ತರ ಮಧ್ಯೆ ಮಹಾ ರಥೋತ್ಸವ ಸಂಜೆ 5.45 ಗಂಟೆಗೆ ನೆರವೇರುತ್ತಿತ್ತು. ಆದರೆ ಕಳೆದ ವರ್ಷ ಕೋವಿಡ್ ಮಹಾಮಾರಿ ಉಲ್ಭಣಿಸಿದ ಹಿನ್ನೆಲೆಯಲ್ಲಿ ಈ ಬಾರಿ ಮಹಾ ರಥೋತ್ಸವವು ಕಡಿಮೆ ಸಂಖ್ಯೆಯ ಭಕ್ತರ ಮಧ್ಯೆ ಸಾಗಿತು. ಜನದಟ್ಟಣೆ ತಡೆಯುವ ಉದ್ದೇಶದಿಂದ ಈ ಬಾರಿ ಬೆಳಗ್ಗೆ 8.45 ಗಂಟೆಗೆ ಮಹಾ ರಥೋತ್ಸವ ಜರುಗಿತು. ಆದರೂ ಬೆಳಗಿನ ಜಾವವೇ ಸಹಸ್ರಾರು ಭಕ್ತರು ಮಠದ ಆವರಣದಲ್ಲಿ ಜಮಾಯಿಸಿದ್ದರು.

ಇದನ್ನೂ ಓದಿ:ಬಲಾ ಬೊಲ್ಲ.. ಬಲಾ ಕಾಟಿ… ಮತ್ತೆ ಮೊಳಗಲು ಸಿದ್ದವಾಗಿದೆ ಕಂಬಳದ ಕಹಳೆ

Advertisement

Udayavani is now on Telegram. Click here to join our channel and stay updated with the latest news.

Next