Advertisement

ಕೊಪ್ಪಳ: ಮಾಸ್ಕ್ ಧರಿಸದ ಜನರಿಂದ 10 ದಿನದಲ್ಲಿ 11 ಲಕ್ಷ ದಂಡ ವಸೂಲಿ!

11:42 AM Oct 02, 2020 | keerthan |

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಜಿಲ್ಲಾಡಳಿತವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಜನರು ನಿಯಮ ಉಲ್ಲಂಘಿಸಿ ಮಾಸ್ಕ್ ಧರಿಸದೇ ಸುತ್ತಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಮಾಸ್ಕ್ ಧರಿಸದ ಜನರಿಗೆ ದಂಡದ ಬಿಸಿ ಮುಟ್ಟಿಸುತ್ತಿದೆ.

Advertisement

ಜಿಲ್ಲೆಯಲ್ಲಿ ಕಳೆದ 10 ದಿನದಲ್ಲಿ 8578 ಪ್ರಕರಣದಲ್ಲಿ 11, 93,033 ದಂಡ ವಸೂಲಿ ಮಾಡಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಬೈಕ್ ಸವಾರರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ:ಕೋವಿಡ್‌ ರೋಗಿಯ ಮಾನಸಿಕ ಸ್ವಾಸ್ಥ್ಯ; ಶಿಫಾರಸುಗಳು ಜಾರಿಯಾಗಲಿ

ಅಲ್ಲದೆ ಕಳೆದ ಕೆಲವು ದಿನಗಳ ಹಿಂದಷ್ಟೆ ಡಿಸಿ ವಿಕಾಸ್ ಕಿಶೋರ್ ಅವರೂ ಸಹಿತ ಮಾಸ್ಕ್ ಧರಿಸುವಂತೆ ಕೊಪ್ಪಳದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಿದ್ದರು. ಕೆಲವರು ಮಾಸ್ಕ್ ಧರಿಸದೇ ವಹಿವಾಟು‌ ನಡೆಸಿದ್ದರಿಂದ ಅವರಿಗೆ ದಂಡವನ್ನೂ ಹಾಕಿ ಎಚ್ಚರಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next