ಕೊಪ್ಪಳ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ 62 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಭರ್ಜರಿಯಾಗಿ ನಡೆದಿದ್ದು, ವಿವಿಧ ಇಲಾಖೆಗಳಲ್ಲಿ ಈಗಾಗಲೇ ಕೆಲವು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಆದರೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಐದು ನಿರ್ದೇಶಕರ ಸ್ಥಾನಗಳ ಚುನಾವಣೆ ರಾಜಕೀಯವನ್ನೂ ಮೀರಿಸುವಂತಿದೆ.
Advertisement
ಜಿಲ್ಲೆಯಲ್ಲಿ ಸರ್ಕಾರಿ ನೌಕರರಲ್ಲಿ ಬರಿ ಚುನಾವಣೆಯದ್ದೇ ಮಾತಾಗಿದೆ. ಅವರು ಆ ಬಣ, ಇವರು ಈ ಬಣ ಎನ್ನುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಲ್ಲೇ ಸಂಘಕ್ಕೆ ಚುನಾವಣೆ ಘೋಷಣೆಯಾಗಿದ್ದರಿಂದ ಎಲ್ಲರೂ ಸಂಘದ ನಿರ್ದೇಶಕ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರೆ.
Related Articles
Advertisement
ಈ ಮೊದಲು ಸರ್ಕಾರಿ ನೌಕರರ ಸಂಘದ ಚುನಾವಣೆ ಅಷ್ಟೊಂದು ರಾಜಕೀಯ ರಂಗು ಪಡೆಯುತ್ತಿರಲಿಲ್ಲ. ಆದರೆ ಇತ್ತೀಚೆಗೆ ನೌಕರ ಸಂಘದಲ್ಲೂ ರಾಜಕೀಯ ಬೆರೆತ ಹಿನ್ನೆಲೆಯಲ್ಲಿ ಇಲ್ಲೂ ಅವರದ್ದೇ ಬಣಗಳನ್ನು ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿವೆ.
ಒಟ್ಟಿನಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದಿರುವ ಚುನಾವಣೆ ಎಂಎಲ್ಎ, ಎಂಪಿ ಚುನಾವಣೆಯನ್ನೂ ನಾಚಿಸುವಂತಿದೆ. ಸೋಸಿಯಲ್ ಮೀಡಿಯಾ ಸೇರಿದಂತೆ ಕರಪತ್ರ, ಬ್ಯಾನರ್‌ಗಳ ಅಬ್ಬರಕ್ಕೆ ಭರವಿಲ್ಲ.
ಸರ್ಕಾರಿ ನೌಕರರಿಗೆ ಸೇವೆ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಕಾರಿ ಸಮಿತಿಗೆ ನಾವು ಸ್ಪರ್ಧಿಸಿದ್ದೇವೆ. ನಮ್ಮ ತಂಡದಿಂದ ಐವರು ಸ್ಪರ್ಧಿಸಿದ್ದಾರೆ. ನಮ್ಮ ತಾಲೂಕಿನಲ್ಲಿ 1276 ಮತದಾರರಿದ್ದಾರೆ. ಎಲ್ಲ ಶಾಲೆಗಳಿಗೆ ತೆರಳಿ ಮತಯಾಚಿಸಿದ್ದೇವೆ.•ಬೀರಪ್ಪ ಅಂಡಗಿ,
ಪ್ರಾಥಮಿಕ ಶಾಲಾ ವಿಭಾಗದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ.