ಕೊಪ್ಪಳ: ಕಳ್ಳರು ರಾತ್ರಿ ಬೆಳಗಾಗುವುದರೊಳಗೆ ತಮ್ಮ ಕೈಚಳಕ ತೋರೊಸಿ ಸಾರ್ವಜನಿಕರ ನಿದ್ದೆಗೆಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ-ಹ್ಯಾಟಿ ಸೀಮಾದಲ್ಲಿ ಬುಧವಾರ ರಾತ್ರಿ ಸುಮಾರು ಹನ್ನೊಂದು ರೈತರ ಪಂಪಸೆಟ್ ಕೇಬಲ್ ಕಳ್ಳತನ ಮಾಡಿರುವುದಾಗಿ ವರದಿಯಾಗಿದೆ.
ಬಸಪ್ಪ, ಶಿವಪ್ಪ, ಮೈಲಾರಪ್ಪ, ಮಂಜುನಾಥ, ಗುತ್ತೂರಪ್ಪ ಸೇರಿ ಸುಮಾರು 11 ರೈತರ ಪಂಪಸೆಟ್ ಕೇಬಲ್ ಕಳ್ಳತನವಾಗಿದೆ. ಬುಧವಾರ ತಡರಾತ್ರಿ ಜಮೀನಿನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ರೈತರು ಬೆಳಗಿನ ಜಾಗ 3 ಗಂಟೆಗೆ ಜಮೀನಿಗೆ ನೀರು ಹರಿಸಲು ತೆರಳಿದ ವೇಳೆ ಕೇಬಲ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಹತ್ತಾರು ಸಾವಿರ ಬೆಲೆಬಾಳುವ ಪಂಪಸೆಟ್ ಕೇಬಲ್ ಇದಾಗಿದ್ದು ಬರದ ಪರಿಸ್ಥಿತಿಯಲ್ಲಿ ಕೇಬಲ್ ಕಳ್ಳತನ ಮಾಡಿದ್ದಕ್ಕೆ ರೈತರು ಕಣ್ಣೀರು ಹಾಕುವಂತಾಗಿದೆ.
ಮೊದಲೇ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿವೆ, ಬೆಳೆ ಸಂರಕ್ಷಣೆ ಮಾಡಲು ರೈತರು ಹರಸಾಹಸ ಪಡುತ್ತಿದ್ದಾರೆ, ವಿದ್ಯುತ್ ಗೋಳಾಟದ ಮಧ್ಯೆ ಕೇಬಲ್ ಕಳ್ಳತನವಾಗಿರುವುದು ರೈತರಿಗೆ ಆಘಾತ ಉಂಟುಮಾಡಿದೆ.
ಕಳ್ಳತನದ ಹಿಂದೆ ಯಾವುದೋ ಖದೀಮರ ಜಾಲದಿಂದಲೇ ಈ ಕೆಲಸ ಮಾಡಿದೆ, ಕೇಬಲ್ ಕಳ್ಳತನ ಮಾಡೋದು ಸುಲಭದ ಮಾತಲ್ಲ ಯಾವುದೋ ಒಂದು ಜಾಲವೇ ಇದನ್ನು ಪ್ಲಾನ್ ಮಾಡಿ ಕಳ್ಳತನ ಮಾಡಿದೆ ಎಂದು ರೈತರು ಆರೋಪಿಸಿದ್ದು ಕೂಡಲೇ ಖದೀಮರ ಪತ್ತೆಗೆ ಪೊಲೀಸರು ಮುಂದಾಗಬೇಕು ಇದರಿಂದ ಇನ್ನುಳಿದ ರೈತರ ಕೇಬಲ್ ಉಳಿಯಬೇಕು. ಜೊತೆಗೆ ಕಳ್ಳತನ ಮಾಡಿದವರನ್ನು ಶೀಘ್ರ ಪತ್ತೆಹಚ್ಚಬೇಕು ಎಂದು ರೈತ ಸಮೂಹ ಒತ್ತಾಯಿಸಿದೆ.
ಇದನ್ನೂ ಓದಿ: Arvind Kejriwal: ಬಂಧನ ಭೀತಿಯಲ್ಲಿ ದೆಹಲಿ ಸಿಎಂ… ನಿವಾಸದ ಬಳಿ ಪೊಲೀಸ್ ಬಿಗಿ ಭದ್ರತೆ