Advertisement
ಜಿಲ್ಲೆಯಲ್ಲಿ ಬುಧವಾರ ದೃಢಪಟ್ಟ 12 ಸೋಂಕಿತರ ಪೈಕಿ, ಗಂಗಾವತಿ ತಾಲೂಕಿನ ಮರ್ಲಾನಹಳ್ಳಿಯ 20 ವರ್ಷದ ಯುವಕ, ಹಿರೇ ಜಂತಕಲ್‌ನ 19 ವರ್ಷದ ಯುವಕ, ಗೌರಮ್ಮ ಕ್ಯಾಂಪ್‌ನ 19 ವರ್ಷದ ಯುವತಿ, ಯಲಬುರ್ಗಾ ತಾಲೂಕಿನ ಮಂಗಳೂರಿನ 24 ವರ್ಷದ ಯುವಕ, ಕೊಪ್ಪಳದ 41 ವರ್ಷದ ಇಬ್ಬರು ವ್ಯಕ್ತಿಗಳು, ಭಾಗ್ಯನಗರದ 26 ವರ್ಷದ ಯುವಕ, ಗಂಗಾವತಿಯ 41 ವರ್ಷದ ವ್ಯಕ್ತಿ, ಕೊಪ್ಪಳ ಬಿ.ಟಿ. ಪಾಟೀಲ್ ನಗರದ 24 ವರ್ಷದ ಯುವಕ, ಗಂಗಾವತಿಯ 59 ವರ್ಷದ ಪುರುಷ, 47 ವರ್ಷದ ಮಹಿಳೆ ಸೇರಿ ಒಟ್ಟು 12 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇವರಲ್ಲಿ 7 ಜನರು ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿದ್ದರೆ, ಓರ್ವ ಬೆಂಗಳೂರಿನಿಂದ ಆಗಮಿಸಿದ್ದಾನೆ. ಉಳಿದವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ. ಇನ್ನೂ ಬುಧವಾರ ಆಸ್ಪತ್ರೆಗೆ 5 ಕೇಸ್‌ಗಳು ದಾಖಲಾಗಿದ್ದು, 41 ವ್ಯಕ್ತಿಗಳು ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಈ ವರೆಗೂ 182 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾಡಳಿತ ಸೋಂಕಿನಿಂದ ಬಳಲುವ ವ್ಯಕ್ತಿಗಳನ್ನು ಪತ್ತೆ ಮಾಡುತ್ತಿದ್ದು, ಈ ವರೆಗೂ 15,879 ಜನರ ಸ್ವಾಬ್ ಪರೀಕ್ಷೆ ಮಾಡಿದೆ. ಇವರಲ್ಲಿ 14,517 ಜನರ ವರದಿ ನೆಗಟಿವ್ ಬಂದಿದೆ. ಇನ್ನೂ 1362 ಜನರ ಸ್ವಾಬ್ ವರದಿ ಬರಬೇಕಿದೆ.