Advertisement

ಕೊಪ್ಪಳದಲ್ಲಿ ಇಂದು 69 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

05:38 PM Jul 19, 2020 | sudhir |

ಕೊಪ್ಪಳ: ಜಿಲ್ಲೆಯಲ್ಲಿ ಭಾನುವಾರ ಕೋವಿಡ್ ಆರ್ಭಟ ಮುಂದುವರೆದಿದ್ದು ಬರೊಬ್ಬರಿ 69 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆಯು 515ಕ್ಕೆ ಏರಿಕೆಯಾದಂತಾಗಿದೆ.

Advertisement

ಇದು ಜಿಲ್ಲೆಯ ಜನರನ್ನು ನಿತ್ಯ ಜೀವ ಭಯದಲ್ಲೆ ಜೀವನ ಸಾಗಿಸುವಂತೆ ಮಾಡಿದೆ.

ಜಿಲ್ಲೆಯಲ್ಲಿ ಈ ವರೆಗೂ 12 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಭಾನುವಾರ 46 ಜನರು ಸೋಂಕಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ ಒಟ್ಟಾರೆ ಈ ವರೆಗೂ 328 ಜನರು ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ಸೋಂಕಿನ ಸಂಖ್ಯೆ ಏರುತ್ತಿರುವುದು ಜನರಲ್ಲಿ ಆತಂಕವನ್ನೂ ಹೆಚ್ಚಿಸುತ್ತಿದೆ. ಇದಲ್ಲದೆ, ಜಿಲ್ಲೆಯ ಓರ್ವ ಶಾಸಕರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಅವರು ಚಿಕಿತ್ಸೆಗೆ ತೆರಳುತ್ತಿದ್ದಾರೆ. ಅಲ್ಲದೆ ಈಚೆಗೆ ಅವರು ಸರ್ಕಾರಿ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಇತರೆ ಶಾಸಕರು ಹಾಗೂ ಅಧಿಕಾರಿ ವರ್ಗದವರು ಸಹಿತ ಕ್ವಾರೆಂಟೆನ್ ಗೆ ಒಳಗಾಗುವ ಸಾಧ್ಯತೆಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next