Advertisement
ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಜನರು ಬೈಕ್‌ಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಪೊಲೀಸರು ಹಲವು ಬಾರಿ ಎಚ್ಚರಿಸಿ ಬೇಸತ್ತಿದ್ದಾರೆ. ಕೆಲವು ಬಾರಿಲಾಠಿ ರುಚಿ ತೋರಿಸಿದ್ದಾರೆ. ಇಷ್ಟಾದರೂ ಜನರು ಸಂಚಾರ ಮಾಡುವುದನ್ನು ಬಿಡುತ್ತಿಲ್ಲ. ಕೆಲವು ದಿನಗಳ ಹಿಂದೆ ಪೊಲೀಸರೇ ಜನರಿಗೆ ಕುಂಕುಮ ಹಚ್ಚಿ, ಮಂಗಳಾರತಿ ಮಾಡಿದ್ದರು. ಇನ್ನು ಜನರಿಗೆ ಈಡುಗಾಯಿ ದೃಷ್ಟಿ ತೆಗೆದು ಮನೆಯಲ್ಲಿಯೇ ಇರಿ, ರಸ್ತೆಗೆ ಇಳಿಯಬೇಡಿ ಎಂದು ಮನವಿ ಮಾಡಿದ್ದರು.
ಕೆಲ ಸ್ವಯಂಸೇವಕರ ಜೊತೆಗೆ ರಸ್ತೆಗಿಳಿದು ಬೈಕ್ ಸವಾರರನ್ನು ತಡೆದು ರಕ್ಷಾ ಬಂಧನ ಕಟ್ಟಿ ದಯವಿಟ್ಟು ಮನೆಯಲ್ಲಿಯೇ ಇರಿ ಅಣ್ಣಂದಿರಾ..ಕೊರೊನಾ ಸೋಂಕು ದೂರ ಮಾಡಬೇಕೆಂದರೆ
ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರು. ಇದರಿಂದ ಮುಜುಗುರಕ್ಕೊಳಗಾದ ಬೈಕ್ ಸವಾರರು ರಸ್ತೆಗಿಳಿಯುವುದಿಲ್ಲ ಎಂದು ಹೇಳಿ ಮುಂದೆ ಸಾಗಿದರು. ಇನ್ನೂ ಡಿಸಿ ಸುನೀಲ್ ಕುಮಾರ ಅವರೇ ಸೋಮವಾರ ರಸ್ತೆಗಳಿದು ವಿವಿಧೆಡೆ ಚೆಕ್‌ಪೋಸ್ಟ್ ತಪಾಸಣೆ ನಡೆಸಿದರಲ್ಲದೇ, ರಸ್ತೆಯಲ್ಲಿ ಅನಗತ್ಯ ಸುತ್ತಾಟ ನಡೆಸುವವರನ್ನು ತರಾಟೆ ತೆಗೆದುಕೊಂಡರು.