Advertisement

Koppala: ಉದ್ಯಮಿ ಅರ್ಜುನ್ ಸಾ ಕಾಟ್ವಾ ಶವ ಪತ್ತೆ

10:03 AM Oct 09, 2024 | Team Udayavani |

ಕೊಪ್ಪಳ: ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದ ಕೊಪ್ಪಳ ನಗರದ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ, ಕಾಂಗ್ರೆಸ್ ಮುಖಂಡ ಅರ್ಜುನ್ ಸಾ ಕಾಟ್ವಾ (62) ಅವರ ಮೃತ ದೇಹ ನಗರದ ಬಳಿ ಹುಲಿಕೆರೆಯಲ್ಲಿ ಅ.9ರ ಬುಧವಾರ ಪತ್ತೆಯಾಗಿದೆ.

Advertisement

ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಎನ್ನಲಾಗಿದ್ದರೂ ನಿಖರ ಕಾರಣ ತಿಳಿದು ಬಂದಿಲ್ಲ.

ಹುಲಿಕೆರೆ ಬಳಿಯೇ ಅವರ ಬೈಕ್ ಸಹ ಪತ್ತೆಯಾಗಿದ್ದು, ಕೆರೆಯಲ್ಲಿ ಶವ ತೇಲಿದ ಮೇಲೆ ಮೃತದೇಹ ನೋಡಿದವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೊಪ್ಪಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಉದ್ಯಮಿ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next