Advertisement
ಇನ್ನೂ ಸ್ಥಳೀಯರು ಹೇಳುವ ಪ್ರಕಾರ, ಹನುಕುಂಟಿ ಭಾಗದಲ್ಲಿ ರೈತರು ದನಗಳನ್ನು ಹೊಲದಲ್ಲೇ ಕಟ್ಟುತ್ತಾರೆ. ಇನ್ನು ಇಲ್ಲೊಂದು ಡೈರಿ ಫಾರಂ ಇದೆ. ಇತ್ತೀಚೆಗೆ ಚಿರತೆ ಬಂದಿದ್ದ ಸಂದರ್ಭದಲ್ಲಿ ದನಗಳು ಗಡಬಡಿಸುವುದು. ಬೆದರುವುದು. ನಾಯಿ ಕೂಗುವ ಶಬ್ಧಗಳು ಕೇಳಿ ಬಂದಿವೆ. ಇದನ್ನೆಲ್ಲ ಗಮನಿಸಿದರೆ ಕಾಡು ಪ್ರಾಣಿ ಬಂದಿರುವ ಹಾಗೆ ಕಾಣುತ್ತದೆ ಎನ್ನುವ ಮಾತನ್ನಾಡುತ್ತಿದ್ದಾರೆ. ಈ ಕುರಿತು ಅಳವಂಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪಿಎಸ್‌ಐ ಸಹಿತ ಈ ಬಗ್ಗೆ ಪರಿಶೀಲನೆ ಮಾಡುವ ಕುರಿತು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
Related Articles
Advertisement
ಬೆಳಗ್ಗೆ ನಗರದ ಎಪಿಎಂಸಿ ಆವರಣದಲ್ಲಿ ಕಾಣಿಸಿಕೊಂಡಿದ್ದ ಕರಡಿ ಬಳಿಕ ಜಾಲಿಗಿಡದ ಪೊದೆಯಲ್ಲಿ ಅವಿತು ಕುಳಿತಿತ್ತು. ಜನತೆ ಕಲ್ಲು, ಕಟ್ಟಿಗೆ ಎಸೆದ ಕಾರಣ ಮತ್ತೆ ಎಪಿಎಂಸಿ ಆವರಣದಲ್ಲಿ ಸುತ್ತಾಡಿತು. ಜನರ ಗುಂಪು ಹೆಚ್ಚಾಗುತ್ತಿದ್ದಂತೆ ಕರಡಿ ಜೀವ ಭಯಕ್ಕೆ ವಿವಿಧ ಓಣಿಗಳಲ್ಲಿ ಓಡಾಟ ನಡೆಸಿತು. ಕರಡಿ ಬಂತು ಕರಡಿ ಎಂದು ಜನ ಭಯ ಪಡುತ್ತಲೇ ಮನೆ ಸೇರಿದರು. ಇನ್ನೂ ಕೆಲವರು ಕರಡಿ ಹಿಂದೆಯೇ ಹೋಗಿ ಮೊಬೈಲ್ನಲ್ಲಿ ಫೋಟೋ, ವೀಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರು. ಇದರಿಂದ ಮತ್ತಷ್ಟು ಜನ ಕರಡಿ ವೀಕ್ಷಣೆಗೆ ಸ್ಥಳಕ್ಕೆ ಓಡೋಡಿ ಬಂದರು.ಜನರ ನಿಯಂತ್ರಣಕ್ಕೆ ಸಾಹಸ: ಇಲ್ಲಿನ ಈಶ್ವರ ಪಾರ್ಕ್‌ನಲ್ಲಿ ಕರಡಿ ಓಡಾಟ ನಡೆಸಿದೆ. ಅದರ ಹಿಂದೆಯೇ ಜನರು ಓಡಾಟ ಮಾಡಿದ್ದರಿಂದ ಕರಡಿ ಆರ್ಭಟಿಸುತ್ತಲೇ ನಾಯಿ ಮೇಲೆ ದಾಳಿ ಮಾಡಿತು. ಜನರ ಮೇಲೂ ದಾಳಿ ಮಾಡುವ ಪ್ರಯತ್ನ ಮಾಡಿತಾದರೂ ಜನತೆ ಸ್ವಲ್ಪ ಅಂತರದಲ್ಲಿಯೇ ಪಾರಾಗುತ್ತಿದ್ದರು. ಇನ್ನೂ ಪೇದೆಯ ಮೇಲೆ ದಾಳಿ ಮಾಡುವ ಪ್ರಯತ್ನ ನಡೆಯಿತು. ನಂತರ ಎಸಿಬಿ ಕಚೇರಿ ಪಕ್ಕದಲ್ಲಿಯೇ ಹಲವು ನ್ಯಾಯಾಧಿಧೀಶರ ಸರ್ಕಾರಿ ನಿವಾಸಗಳಿದ್ದು, ಅಲ್ಲೆ ಕಾರು ಪಾರ್ಕಿಂಗ್ ಸ್ಥಳದಲ್ಲಿ ಅವಿತು ಕುಳಿತ್ತಿತ್ತು. ಅಷ್ಟರೊಳಗೆ ಜನದಟ್ಟಣೆ ಹೆಚ್ಚಾದ ಕಾರಣ ಪೊಲೀಸರು ಸ್ಥಳಕ್ಕಾಗಮಿಸಿ ಕರಡಿಗಿಂತ ಜನರನ್ನು ನಿಯಂತ್ರಣ ಮಾಡುವಲ್ಲೇ ಸುಸ್ತಾದರು. ಪೊಲೀಸರು ಜನರತ್ತ ಲಾಠಿ ಬೀಸಿ ಗುಂಪು ಚದುರಿಸುವ ಪ್ರಯತ್ನ ಮಾಡಿದರು.
ಹಂದಿ ಹಿಡಿಯುವ ಬಲೆ ಬಳಕೆ: ಕರಡಿ ನಗರದಲ್ಲಿ ಸುತ್ತಾಡಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಈಶ್ವರ ಪಾರ್ಕ್‌ನತ್ತ ಬಂದಿದ್ದರೂ ಕರಡಿ ಸೆರೆ ಹಿಡಿಯಲು ಅವರ ಬಳಿ ಯಾವುದೇ ಸಾಧನಗಳಿರಲಿಲ್ಲ. ಕರಡಿ ಹಿಡಿಯಲು ತಮ್ಮ ಬಳಿ ಏನೂ ಇಲ್ಲ ಎಂಬ ಭಾವನೆ ಸ್ಥಳದಲ್ಲಿಯೇ ಜನರಿಗೆ ಕಾಣಿಸಿತು. ಅವರ ಬಳಿ ಬಲೆ, ಬೋನ್ ಸೇರಿದಂತೆ ಮುಂಜಾಗ್ರತಾ ಕ್ರಮಕ್ಕೆ ಬೇಕಾದ ಸಾಮಗ್ರಿಗಳೇ ಇರಲಿಲ್ಲ. ಕೊನೆಗೆ ಹಂದಿ ಹಿಡಿಯುವ ಬಲೆಯಲ್ಲೇ ಕರಡಿ ಹಿಡಿದರು.
ಅರಿವಳಿಕೆ ಔಷಧಿ ಸಿಡಿಸಿದರು: ಗದಗ ಜಿಲ್ಲೆಯ ಬಿಂಕದಕಟ್ಟೆಯಿಂದ ಪಶುಪಾಲನಾ ಇಲಾಖೆ ಸಹಾಕ ನಿಖೀಲ್, ಹಂಪಿಯ ರಮೇಶ ತಂಡವು ಆಗಮಿಸಿ ಕರಡಿಗೆ ಪ್ರಜ್ಞೆ ತಪ್ಪಿಸುವ ಅರಿವಳಿಕೆ ಔಷಧಿಯನ್ನು ಗುರಿಯಿಟ್ಟು ಹೊಡೆಯುವ ಮೂಲಕ ಕರಡಿ ಬಲೆಗೆ ಬೀಳುವಂತೆ ಮಾಡಿದರು. ಮೊದಲು ಪ್ರಯೋಗಿಸಿದ ಅರಿವಳಿಕೆ ಔಷಧ ಬಲೆಗೆ ಬಿದ್ದು ಕರಡಿಗೆ ನಾಟಲಿಲ್ಲ. ಹಾಗಾಗಿ ತಕ್ಷಣ ಎರಡನೇ ಸೂಜಿ ಹೊಡೆಯುವ ಮೂಲಕ ಕರಡಿ ಹಿಡಿಯುವ ಪ್ರಯತ್ನ ನಡೆಸಿದರು. ಆದರೂ ಕರಡಿಯ ಆರ್ಭಟ ಜೋರಾಗಿತ್ತು.