Advertisement
ಜಿಲ್ಲಾಡಳಿತ ಮತ್ತು ಜಿಪಂ ನೇತೃತ್ವದಲ್ಲಿ ನಿರ್ಮೂಲನೆ ಮೊದಲ ಹೆಜ್ಜೆ ಎಂಬ ಮಹತ್ತರ ಯೋಜನೆ ಹಾಕಿಕೊಂಡು ಪತ್ತೆ ಹಚ್ಚಲು ಪಣ ತೊಡಲಾಗಿದೆ. ಕ್ಷಯರೋಗಿಗಳನ್ನು ಪತ್ತೆ ಹಚ್ಚಲು ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಷಯರೋಗ ನಿರ್ಮೂಲನೆಯಲ್ಲಿ ಎಲ್ಲ ರೋಗಿಗಳನ್ನು ಪತ್ತೆ ಹಚ್ಚುವುದು ಅತೀ ಮುಖ್ಯ. ಅನೇಕ ಖಾಸಗಿ ವೈದ್ಯರು ಕ್ಷಯರೋಗಿಗಳ ಮಾಹಿತಿ ನೀಡದಿರುವುದು ಹಾಗೂ 73 ಗ್ರಾಮಗಳಲ್ಲಿ ಯಾವುದೇ ಕ್ಷಯರೋಗಿ ಪತ್ತೆ ಮಾಡದಿರುವುದು ಕಂಡುಬಂದಿದೆ. ಆದ್ದರಿಂದ ಸಾರ್ವಜನಿಕರು, ಸ್ವಯಂ ಸೇವಾ ಸಂಘ ಸಂಸ್ಥೆಗಳು, ಖಾಸಗಿ ವೈದ್ಯರು, ಸರ್ಕಾರದ ಕ್ಷಯ ರೋಗ ನಿರ್ಮೂಲನಾ ಅಭಿಯಾನಕ್ಕೆ ಕೈಜೋಡಿಸಿ 2025ರೊಳಗೆ “ಕ್ಷಯರೋಗ ನಿರ್ಮೂಲನೆ’ ಮಾಡಲು ಶ್ರಮಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ|ಮಹೇಶ್ ಎಂ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.