ಕೊಪ್ಪಳ: ವಿದ್ಯುತ್ ತಂತಿ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಕೊಪ್ಪಳದ ನಗರದ ಬನ್ನಿಕಟ್ಟಿ ಏರಿಯಾದಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಇಲ್ಲಿನ ದೇವರಾಜ ಅರಸ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.
ಹೈಸ್ಕೂಲ್ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಮೆತಗಲ್(16), ಬಸವರಾಜ(16), ದೇವರಾಜ ಹಲಗೇರಿ(15), ಗಣೇಶ ಲಾಚನಕೇರಿ(14), ಕುಮಾರ ಹೈದರ್ ನಗರ(15) ಮೃತ ವಿದ್ಯಾರ್ಥಿಗಳು.
ವಸತಿ ನಿಲಯದಲ್ಲಿ ಇತ್ತೀಚೆಗೆ ಧ್ವಜಾರೋಹಣ ಮಾಡಲಾಗಿತ್ತು. ಧ್ವಜಾರೋಹಣ ಕಂಬವನ್ನು ಬ್ಯಾರಲ್ ನಲ್ಲಿ ಇಡಲಾಗಿತ್ತು. ಆ ಬ್ಯಾರಲ್ ಗೆ ವಿದ್ಯುತ್ ತಂತಿ ತಾಗಿದೆ. ಇದನ್ನು ಗಮನಿಸದೇ ವಿದ್ಯಾರ್ಥಿಗಳು ಕಂಬವನ್ನು ಕೆಳಗೆ ಇಳಿಸಲು ಮುಂದಾಗಿದ್ದಾರೆ. ಆಗ ವಿದ್ಯುತ್ ಸ್ಪರ್ಶದಿಂದ ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆಎಂದು ವರದಿಯಾಗಿದೆ.
ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.