Advertisement

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಕೊಪ್ಪಳ ಬೆಸ್ಟ್‌

05:18 PM Dec 20, 2019 | Suhan S |

ಕೊಪ್ಪಳ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಪ್ರಸಕ್ತ ವರ್ಷದಲ್ಲಿ ಅನುದಾನ ಬಳಕೆ ಮಾಡುವಲ್ಲಿ ಕೊಪ್ಪಳ ಜಿಲ್ಲೆ ಅಗ್ರಸ್ಥಾನದಲ್ಲಿದೆ.

Advertisement

ಆದರೆ ಭೌತಿಕವಾಗಿ ಕಾಮಗಾರಿ ವೇಗವಾಗಿ ನಿರ್ವಹಿಸುವಲ್ಲಿ ಬಳ್ಳಾರಿ ಜಿಲ್ಲೆಯು ಮೊದಲ ಸ್ಥಾನ ಕಾಯ್ದುಕೊಂಡಿದೆ. ಉಳಿದಂತೆ ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ ಜಿಲ್ಲೆಗಳು ನಿಧಾನಗತಿಯಲ್ಲಿ ಕಾರ್ಯ ಆರಂಭಿಸಿವೆ. ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಪ್ರಾದೇಶಿಕವಾರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ಭಾಗದಲ್ಲಿನ ಮೂಲಭೂತ ಸೌಕರ್ಯ, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಶಿಕ್ಷಣಕ್ಕೂ ಒತ್ತು ನೀಡಿ ಈ ಹಿಂದಿನ ಸರ್ಕಾರಗಳು ಮಂಡಳಿಗೆ ಈ ಹಿಂದೆ

ಒಂದು ಸಾವಿರ ಕೋಟಿ ಹಣ ನೀಡಿ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದವು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಂಡಳಿಗೆ ವಾರ್ಷಿಕ 1500 ಕೋಟಿ ರೂ. ಕೊಡುವ ಮೂಲಕ ಅವೃದ್ಧಿಗೆ ಮತ್ತಷ್ಟು ಆದ್ಯತೆ ನೀಡಿದ್ದರು. ತರುವಾಯ ಬಂದ ಮೈತ್ರಿ, ಬಿಜೆಪಿ ಸರ್ಕಾರವೂ ಅಭಿವೃದ್ಧಿಗೆ ಜೈ ಎಂದಿದೆ.

6 ಜಿಲ್ಲೆಯಲ್ಲಿ ಕೊಪ್ಪಳ ಜಿಲ್ಲೆ ಫಸ್ಟ್‌:ಮಂಡಳಿಯಿಂದ ಪ್ರಸಕ್ತ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಗೆ 244 ಕೋಟಿ ಅನುದಾನ ಹಂಚಿಕೆಯಲ್ಲಿ ಶೇ. 54ರಷ್ಟು ಪ್ರಗತಿ ಸಾಧಿಸಿದ್ದರೆ, ಬೀದರ್‌-220 ಕೋಟಿಯಲ್ಲಿ ಶೇ. 39, ಕಲಬುರಗಿ-413 ಕೋಟಿಯಲ್ಲಿ ಶೇ. 45, ಕೊಪ್ಪಳ-169 ಕೋಟಿಯಲ್ಲಿ ಶೇ. 56, ರಾಯಚೂರು-264 ಕೋಟಿಯಲ್ಲಿ ಶೇ. 48, ಯಾದಗಿರಿ-172 ಕೋಟಿಯಲ್ಲಿ ಶೇ. 48ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ ಮಂಡಳಿಗೆ ಹಂಚಿಕೆಯಾದ 1,500 ಕೋಟಿಯಲ್ಲಿ ಆರ್ಥಿಕವಾಗಿ ನವೆಂಬರ್‌ ಅಂತ್ಯಕ್ಕೆ ಶೇ. 47ರಷ್ಟು ಪ್ರಗತಿ ಸಾಧಿಸಿದೆ.

ಈ ಆರು ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯೇ ಹೆಚ್ಚಿನ ಪ್ರಗತಿ ಸಾಧಿಸಿದೆ. ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕವಾಗಿ ಕೊಪ್ಪಳ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಭೌತಿಕವಾಗಿ ಕಾಮಗಾರಿಯಲ್ಲಿ ಪ್ರಗತಿ ಸಾಧಿಸಿ ಬಳ್ಳಾರಿ ಜಿಲ್ಲೆಯು ಅಗ್ರ ಸ್ಥಾನದಲ್ಲಿದೆ. ಉಳಿದಂತೆ ಐದು ಜಿಲ್ಲೆಗಳಲ್ಲೂ ಭೌತಿಕ ಪ್ರಗತಿ ಸ್ವಲ್ಪ ಮಟ್ಟಿಗೆ ಸಾಗಿದೆ.

Advertisement

ಭೌತಿಕ ಪ್ರಗತಿಯಲ್ಲಿ ಬಳ್ಳಾರಿ ಟಾಪ್‌ :  ಇನ್ನೂ ಕಾಮಗಾರಿಗಳಲ್ಲಿ ಹೆಚ್ಚಿನ ಪ್ರಗತಿ ಸಾ ಧಿಸುವ ಲೆಕ್ಕಾಚಾರ ಅವಲೋಕಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ 1,341 ಕಾಮಗಾರಿಗಳ ಪೈಕಿ ಶೇ. 63ರಷ್ಟು ಪ್ರಗತಿ ಸಾ ಧಿಸಿದೆ. ಬೀದರ್‌ನಲ್ಲಿ 705 ಕಾಮಗಾರಿಯಲ್ಲಿ ಶೇ. 52ರಷ್ಟು, ಕಲಬುರಗಿಯಲ್ಲಿ 2,116 ಕಾಮಗಾರಿಯಲ್ಲಿ ಶೇ. 52 ಪ್ರಗತಿ, ಕೊಪ್ಪಳ 740 ಕಾಮಗಾರಿಯಲ್ಲಿ ಶೇ. 47, ರಾಯಚೂರು 1,259 ಕಾಮಗಾರಿಯಲ್ಲಿ ಶೇ. 37, ಯಾದಗಿರಿಯಲ್ಲಿ 946 ಕಾಮಗಾರಿಯಲ್ಲಿ ಶೇ. 44ರಷ್ಟು ಭೌತಿಕ ಪ್ರಗತಿ ಸೇರಿದಂತೆ ಒಟ್ಟಾರೆ 7,108 ಕಾಮಗಾರಿಗಳಲ್ಲಿ 2,764 ಕಾಮಗಾರಿ ಪೂರ್ಣಗೊಂಡಿದ್ದರೆ, 462 ಕಾಮಗಾರಿ ಆರಂಭಿಸಿ ಪೂರ್ಣ ಮಾಡಬೇಕಿದೆ. ಇನ್ನೂ 320 ಕಾಮಗಾರಿ ಇನ್ನೂ ಆರಂಭ ಮಾಡಬೇಕಿದೆ. ಒಟ್ಟಾರೆ ಭೌತಿಕವಾಗಿ ಶೇ. 50ರಷ್ಟು ಪ್ರಗತಿ ಸಾಧಿ ಸಿದ್ದು, ಆರು ಜಿಲ್ಲೆಗಳ ಪೈಕಿ ಬಳ್ಳಾರಿ ಜಿಲ್ಲೆ ಹೆಚ್ಚಿನ ಪ್ರಗತಿ ಸಾಧಿಸಿದೆ.

ರಾಯಚೂರು, ಯಾದಗಿರಿ ನಿಧಾನ: ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆದಿವೆ. ಸ್ವತಃ ಕಲಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಅವರು ಅಭಿವೃದ್ಧಿ ಕಾಮಗಾರಿ ನಿಧಾನಗತಿಯಾದರೆ ಅನುದಾನ ನೀಡುವುದಿಲ್ಲ ಎನ್ನುವ ಖಡಕ್‌ ಸಂದೇಶ ನೀಡಿದ್ದಾರೆ. ಆದರೆ ಕೆಲವು ಜಿಲ್ಲೆಯಲ್ಲಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದರೂ ಭೌತಿಕ ಪ್ರಗತಿ ಸಾಧಿಸುವಲ್ಲಿ ಹಿನ್ನೆಡೆ ಅನುಭವಿಸುತ್ತಿವೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next