Advertisement
ಕಳೆದ ಕೆಲ ವರ್ಷಗಳಿಂದ ಮಿರ್ಚಿ ಸೇವಾ ಸಮಿತಿ ಭಕ್ತರಿಗೆ ಬಿಸಿ ಬಿಸಿ ಮಿರ್ಚಿ ಸೇವೆ ಮಾಡುವ ಉದ್ದೇಶದಿಂದ ಅಜ್ಜನ ಜಾತ್ರೆಯಮಹಾ ರಥೋತ್ಸವದ ಮರು ದಿನ ಮಹಾ ದಾಸೋಹದಲ್ಲಿ ಬಿಸಿ ಬಿಸಿ ಮಿರ್ಚಿ ಸಿದ್ಧಪಡಿಸಿ ಭಕ್ತರಿಗೆ ಪ್ರೀತಿಯಿಂದಲೇ ಉಣ
ಬಡಿಸುವ ಸೇವೆ ನಡೆಸಿದ್ದಾರೆ.
ಮುಂದಾಗಿದ್ದಾರೆ. ಭಾನುವಾರ ಬೆಳಗ್ಗೆ ಮಿರ್ಚಿ ಸೇವಾ ಕಾರ್ಯ ಆರಂಭವಾಯಿತು. ಈ ಮಿರ್ಚಿಗಾಗಿ 25 ಕ್ವಿಂಟಲ್ ಹಿಟ್ಟು, 22 ಕ್ವಿಂಟಲ್ ಹಸಿ ಮೆಣಸಿನಕಾಯಿ, 12 ಬ್ಯಾರಲ್ ಒಳ್ಳೆಣ್ಣೆ, 60 ಕೆಜಿ ಉಪ್ಪು, 60 ಕೆಜಿ ಅಜಿವಾನ ಹಾಗೂ 400 ಬಾಣಸಿಗರು ಹಾಗೂ ಮೆಣಸಿನಕಾಯಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸೇವಾ ಮಹಿಳೆಯರು ಸೇರಿ ಸಾವಿರಾರು ಜನರು ಮಿರ್ಚಿ ಸಿದ್ಧತಾ
ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಗವಿಶ್ರೀಗಳಿಂದ ಮಿರ್ಚಿ ಹಾಕಿ ಚಾಲನೆ:
ಮಹಾ ದಾಸೋಹದ ಆವರಣದ ಪಕ್ಕದಲ್ಲಿಯೇ ಮಿರ್ಚಿ ಸಿದ್ಧಪಡಿಸುವ ಬಾಣಸಿಗರ ಹಾಗೂ ಸೇವಾ ಕಾರ್ಯಕರ್ತರ ಸ್ಥಳಕ್ಕೆ
ಆಗಮಿಸಿದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ತಾವೂ ಸಹ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಮಿರ್ಚಿಯನ್ನು ಎಣ್ಣೆಯಲ್ಲಿ ತೇಲಿ ಬಿಡುವ ಮೂಲಕ ಸೇವಾ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.