Advertisement

Koppal: ಸಂಗೀತದಿಂದ ರೋಗ ನಿಯಂತ್ರಣ ಸಾಧ್ಯ- ಇಟಗಿ

04:14 PM Dec 03, 2023 | Team Udayavani |

ಯಲಬುರ್ಗಾ: ಸಂಗೀತ ಎಂಬುದು ಯೋಗವಿದ್ದಂತೆ. ಆದ್ದರಿಂದ ಮಾನಸಿಕ ಒತ್ತಡ ಹಾಗೂ ಹಲವು ರೋಗ ನಿಯಂತ್ರಿಸುವ ಶಕ್ತಿ
ಇದೆ. ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಆನಂದ ಸಿಗುತ್ತವೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಮೂರ್ತಿ ಇಟಗಿ ಹೇಳಿದರು.

Advertisement

ಪಟ್ಟಣದ ಎಸ್‌.ಎ. ನಿಂಗೋಜಿ ಬಿಇಡಿ ಕಾಲೇಜಿನಲ್ಲಿ ಶನಿವಾರ ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವ್ರದ್ಧಿ ಟ್ರಸ್ಟ್‌ ಹಾಗೂ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂಸ್ತಾನಿ ಸಂಗೀತವು 12ನೇ ಶತಮನಾದಲ್ಲಿ ಕಂಡುಬಂತು. ಅದೇ ಸಂದರ್ಭವು ಬಸವೇಶ್ವರ ಕಾಲಘಟ್ಟವಾಗಿತ್ತು. ಒಂದು ಕಡೆ ಸಂಗೀತ ಇನ್ನೊಂದು ಕಡೆ ವಚನಗಳ ಅಮೃತಸಾರ ಹೆಚ್ಚು ಪ್ರಚಲಿತವಾಗಿತ್ತು. ಆದರೆ ಆಧುನಿಕ ಯುಗದಲ್ಲಿ ಅಂತರ್ಜಾಲದ ಅವಲಂಬನೆಯಿಂದ ವಿದ್ಯಾರ್ಥಿಗಳು, ಯುವಕರು ಹಿಂದೂಸ್ಥಾನಿ ಸಂಗೀತ, ಭರತನಾಟ್ಯ, ಶಾಸ್ತ್ರೀಯ ಸಂಗೀತ,
ಯಕ್ಷಗಾನ, ಭಕ್ತ ಪ್ರಧಾನ ನಾಟಕ ಸೇರಿದಂತೆ ದೇಶಿಯ ಸಂಸ್ಕೃತಿ ಬಿಂಬಿಸುವ ಕಲೆಯ ಕಡೆ ಗಮನ ಹರಿಸದೇ ಪಾಶ್ಚಾತ್ಯ ಸಂಸ್ಕೃತಿ ಕಡೆ ಒಲವು ತೋರುತ್ತಿರುವುದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಸಂಗೀತದ ಜತೆಗೆ ವಚನಗಳನ್ನು ಕಲಿಯಬೇಕು. ಪುಟ್ಟರಾಜ ಗವಾಯಿಗಳು ಕರ್ನಾಟಕದ ರತ್ನವಿದ್ದಂತೆ. ದೇಶಿ ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಸಂಗೀತ ಕಲಿಯಬೇಕು. ಸಂಗೀತವು ಸಮತೋಲನ ಕಾಪಾಡಲು  ಅತ್ಯಂತ ಉಪಯೋಗಕಾರಿ, ಸಂಗೀತ ಕ್ಷೇತ್ರದಲ್ಲಿ ತೊಡಗಿದವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ, ಸಂಗೀತ ಸಾಹಿತ್ಯದ ಜೊತೆಗೆ ನಂಟನ್ನು ಇಟ್ಟುಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ,
ಪಠ್ಯದ ಜೊತೆಗೆ ಸಂಗೀತ ಆಲಿಸುವುದರಿಂದ ಮನಸ್ಸು ನಿಯಂತ್ರಣದಲ್ಲಿಡಲು ಸಾಧ್ಯ ಎಂದರು.

ಕಲಾವಿದರಾದ ಲಿಂಗರಾಜ ಬಿಸನಳ್ಳಿ ಹಾಗೂ ಖಾನಸಾಬ್‌ ಕಲ್ಲೂರು ಅವರು ಸುಗಮ ಸಂಗೀತವು ಎಲ್ಲರ ಮನಸ್ಸನ್ನು ಸೊರೆಗೊಂಡಿತು. ಶಿಕ್ಷಕಿಯರಾದ ಶಬನಾ, ಯಮುನಾ, ದೀಪಾ, ವೀರೇಶ ಹೊನ್ನೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಿವೇದಿತಾ, ಗಂಗಮ್ಮ, ಐಶ್ವರ್ಯ, ಪೂರ್ವಿತಾ ಪ್ರಾರ್ಥಿಸಿದರು. ಶಿಕ್ಷಕರಾದ ಪ್ರಶಾಂತ ಸದರಿ ನಿರೂಪಿಸಿದರು. ಶಿವಕುಮಾರ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next