Advertisement

ಕೊಪ್ಪಳ: ಮೂವರು ಮಕ್ಕಳ ಸಾವಿನ ಪ್ರಕರಣ; ಸಿಎಂಗೆ ಡಿಸಿ ವರದಿ ಸಲ್ಲಿಕೆ

08:10 PM Aug 29, 2019 | Sriram |

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಮರಳು ದಿನ್ನೆ ಕುಸಿದು ಮೂವರು ಕಂದಮ್ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ನಾಲ್ವರ ಮೇಲೆ ಕೇಸ್ ದಾಖಲಿಸಿದ ಕುರಿತಂತೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ.

Advertisement

ನವಲಿಯಲ್ಲಿ ಬುಧವಾರ ಮರಳಿನ ದಿನ್ನೆ ಕುಸಿದು ಕವಿತಾ, ಸವಿತಾ ಹಾಗೂ ಸೋನಂ ಎನ್ನುವ ಮೂರು ಮಕ್ಕಳು ಮೃತಪಟ್ಟಿದ್ದವು. ಸ್ಥಳಕ್ಕೆ ಎಸ್ಪಿ ರೇಣುಕಾ ಸುಕುಮಾರ, ಎಸಿ ಸಿ.ಡಿ.ಗೀತಾ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪ್ರಾಥಮಿಕ ವರದಿಯಂತೆ, ಭೂ ಮಾಲಿಕ ಗುರು ಶಾಂತಯ್ಯ ಅವರಿಂದ ಜಮೀನಿನ ಒಪ್ಪಿಗೆ ಪಡೆದು ಅಮರೇಶ ಕರಡಿ, ಶಿವರಾಜ, ತಾಯವ್ವ ನಾರಿನಾಳ ಗಣಿಗಾರಿಕೆ ನಡೆಸುತ್ತಿದ್ದರು. ಹಾಗಾಗಿ ಈ ನಾಲ್ವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಅಕ್ರಮ ಮರಳು ದಂಧೆ ನಡೆದ ಸಂಬಂಧ ದೂರುಗಳಿದ್ದು, ಕನಕಗಿರಿ ತಾಲೂಕು ತಹಸೀಲಾರ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಕನಕಗಿರಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಅವರು ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಡಿಸಿ ಸುನೀಲ್ ಕುಮಾರ ಅವರು ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next