Advertisement

ಕೊಪ್ಪಳ: ಮನೆಯ ಮೇಲ್ಚಾವಣಿಗೆ ಕುಸಿದು ತಂದೆಯ ಎದುರು ಪ್ರಾಣಬಿಟ್ಟ ಮೂವರು  ಮಕ್ಕಳು

09:50 AM Oct 16, 2019 | Team Udayavani |

ಕೊಪ್ಪಳ : ಭಾರೀ ಮಳೆಯ ಪರಿಣಾಮದಿಂದ ಮನೆಯ ಮೇಲ್ಚಾವಣಿಗೆ ಬಿದ್ದು ಅಕ್ಕ-ತಮ್ಮಂದಿರು ಸಾವನ್ನಪ್ಪಿದ ದುರ್ಘಟನೆ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.

Advertisement

ಮೃತ ದುರ್ದೈವಿಗಳನ್ನು ಸುಜಾತ (23), ಅಮರೇಶ್ (18), ಗವಿಸಿದ್ದಪ್ಪ(15)  ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ಮನೆ ನೆನೆದಿತ್ತು. ಮನೆ ಬೀಳುವುದಿಲ್ಲ ಎಂದು ಕುಟುಂಬ ಸದಸ್ಯರು ಮನೆಯಲ್ಲೆ ವಾಸವಾಗಿದ್ದರು. ಇಂದು ಮುಂಜಾನೆ 5 ಗಂಟೆ ವೇಳೆಗೆ ಮನೆಯ ಮೇಲ್ಚಾವಣಿಗೆ ಕುಸಿದು ಬಿದ್ದಿತ್ತು. ಆ ವೇಳೆ ಮನೆಯಲ್ಲಿ ಮಲಗಿದ್ದ ಅಕ್ಕ- ತಮ್ಮಂದಿರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದೃಷ್ಟವಶಾತ್   ತಂದೆ ಸೋಮಣ್ಣ ಕುದುರಿಮೋತಿ ಸಾವಿನ ದವಡೆಯಿಂದ ಪಾರಾಗಿದ್ದು, ಕಣ್ಣೆದುರೆ ಮೃತಪಟ್ಟ ಮಕ್ಕಳನ್ನು ನೋಡಿ ಕಣ್ಣೀರುಡುತ್ತಿದ್ದಾರೆ. ಗ್ರಾಮದಲ್ಲಿ ನೀರವಮೌನ ಆವರಿಸಿದ್ದು ಆಕ್ರಂದನ ಮುಗಿಲು ಮುಟ್ಟಿದೆ.

ಕೊಪ್ಪಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next