ಕುಷ್ಟಗಿ: ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಯಂಗ್ ಆ್ಯಂಡ್ ಎನರ್ಜಟಿಕ್ ಇದ್ದಾರೆ ಅವರಿಗೂ ರಾಜಕೀಯ ಕುಟುಂಬದ ಹಿನ್ನೆಲೆ ಇದೆ. ಅಭ್ಯರ್ಥಿ ಬಗ್ಗೆ ಯಾವೂದೇ ಕಾಮೆಂಟ್ಸ್ ಇಲ್ಲ, ನಮ್ಮ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಸಿಕ್ಕಿದ್ದಾರೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಹೇಳಿಕೆ ನೀಡಿದ್ದಾರೆ.
ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರು ಮತ್ತೊಮ್ಮೆ ಮೋದಿ ಪ್ರಧಾನಿಯಾಗುವ ಆಪೇಕ್ಷೆ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಖಂಡಿತವಾಗಿ ಗೆಲುವು ಸಾಧಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸವಾಲುಗಳನ್ನು ಸ್ವೀಕರಿಸಬೇಕಿದ್ದು, ಫಲ, ಪ್ರತಿಫಲ ದೇವರಿಗೆ ಬಿಟ್ಟಿದ್ದು ಎಂದರು.
ಈ ಕ್ಷೇತ್ರದ ಬಿಜೆಪಿ ಗೆಲ್ಲಿಸುವ ಅಭ್ಯರ್ಥಿ ಹೊಣೆಗಾರಿಕೆ ಹೆಚ್ಚಾಯಿತೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಹೆಚ್ಚಾಗಿರುವುದನ್ನು ಒಪ್ಪಿಕೊಳ್ಳುವೆ ಇದರ ಜತೆಗೆ ಜಗತ್ತು ಕಂಡ ನಾಯಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಗೆಲವು ಸಾಕ್ಷಿಯಾಗಲಿದೆ ಎಂದರು.
ಪಕ್ಷ ಇದೆ, ಪಕ್ಷದ ಸಂಘಟನೆ ಇದೆ ಲಕ್ಷಾಂತರ ಕಾರ್ಯಕರ್ತರಿರುವ ದೊಡ್ಡ ಶಕ್ತಿ ಇದೆ. ಜನರು ಸಹ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಬಯಸಿದ್ದು ಇದೆಲ್ಲವೂ ಡಾ. ಬಸವರಾಜ ಕ್ಯಾವಟರ್ ಗೆಲುವಿಗೆ ಪೂರಕವಾಗಲಿದೆ ಎಂದರು.
ಮಾಜಿ ಸಚಿವ ಹಾಲಪ್ಪ ಆಚಾರ್ , ಕುಷ್ಟಗಿ ಸಾಸಕ ದೊಡ್ಡನಗೌಡ ಪಾಟೀಲ ಅವರ ಬಗ್ಗೆ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಸಂಗಣ್ಣ, ಅವರವರಿಗೆ ಅವರದೇ ಆದ ವಿಚಾರ ಪ್ರತಿಪಾದಿಸುವ ಹಕ್ಕು ಇರುತ್ತದೆ. ಅವರು ತಮಗೇ ಬೇಕಿರುವುದು ಪ್ರತಿಪಾದನೆ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ಪಕ್ಷದ ಪ್ರಕ್ರಿಯೆಯಾಗಿದ್ದು, ನವೀನ್ ಗುಳಗಣ್ಣವರ್ ಅವರನ್ನು ಜಿಲ್ಲಾಧ್ಯಕ್ಷ ನಾವು ಮಾಡಿಸಿದ್ದು ಅಲ್ಲ. ನಾನು ಸ್ಥಳೀಯ ಚಂದ್ರ ಶೇಖರ ಕವಲೂರು ಅವರನ್ನು ನೇಮಿಸಲು ಸೂಚಿಸಿದ್ದೆ. ಬಸವರಾಜ ದಡೇಸುಗೂರು ಆಕಾಂಕ್ಷಿಯಾಗಿದ್ದರು ಜಿಲ್ಲಾಧ್ಯಕ್ಷರು ನಮ್ಮಿಂದ ಆಯ್ಕೆಯಾಗಿಲ್ಲ ಅದು ಹೈಕಮಾಂಡ್ ತೀರ್ಮಾನ ಎಂದರು.
ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಬಸವರಾಜ್ ದಡೇಸುಗೂರು, ವಿಜಯಕುಮಾರ ಹಿರೇಮಠ, ದೇವೇಂದ್ರಪ್ಪ ಬಳೂಟಗಿ, ಕೆ. ಮಹೇಶ ಮತ್ತಿತರಿದ್ದರು.