Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಗಿರಿಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಅಪ್ರಾಪ್ತ ವಿದ್ಯಾರ್ಥಿನಿಯ ಹೆಸರನ್ನು ಉಲ್ಲೇಖೀಸಿ ಶಾಲೆ, ಕಾಲೇಜು ಗೋಡೆಯ ಮೇಲೆ ಅಶ್ಲೀಲವಾಗಿ ಬರೆದ ಘಟನೆ ನಡೆದಿತ್ತು. ಈ ಬಗ್ಗೆ ಅಪ್ರಾಪೆ¤ಯ ಪಾಲಕರು ಕನಕಗಿರಿ ಠಾಣೆಯಲ್ಲಿ ದೂರು ನೀಡಿದ್ದರು.
Related Articles
ಬರಹ ಬರೆಯುತ್ತಿದ್ದನು. ಆ ಬಾಲಕಿ ತನ್ನ ಸ್ನೇಹಿತೆಗೆ ಇದೆಲ್ಲವನ್ನು ಹೇಳಿಕೊಳ್ಳುತ್ತಿದ್ದಳು. ಈ ಆರೋಪಿ ಬಾಲಕಿಯ ಮನೆಯವರೊಂದಿಗೂ ಒಡನಾಟ ಹೊಂದಿದ್ದ. ಅಲ್ಲದೇ ಅವರ ಸಂಬಂ ಧಿಕನೂ ಆಗಿದ್ದಾನೆ ಎಂದರು.
Advertisement
ಅಪ್ರಾಪ್ತೆ ಕಳೆದ ಕೆಲವು ತಿಂಗಳ ಹಿಂದೆ ನನ್ನ ಜತೆ ಮಾತುಕತೆ ಬಿಟ್ಟು ಬಿಡು, ನನಗೆ ಸರ್ಕಾರಿ ನೌಕರಿ ಇರುವ ವ್ಯಕ್ತಿ ಜತೆ ಮದುವೆ ಮಾಡುತ್ತಾರೆಂದು ಹೇಳಿದ್ದಳಂತೆ. ವಿದ್ಯಾರ್ಥಿನಿಯನ್ನು ಒಬ್ಬಂಟಿ ಮಾಡಬೇಕು. ಬಾಲಕಿಯನ್ನು ಯಾರೂ ಮಾತನಾಡಿಸಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೊನೆಗೂ ಪ್ರಕರಣ ಸುಖಾಂತ್ಯ ಕಂಡಿದೆ. ಅಪ್ರಾಪ್ತರು ಈ ಬಗ್ಗೆ ಕಾಳಜಿ ವಹಿಸಬೇಕು. ಸಾಮಾಜಿಕ ಜಾಲತಾಣಗಳ ಬಗ್ಗೆಯೂ ಹೆಚ್ಚು ನಿಗಾ ವಹಿಸಬೇಕು ಎಂದು ಎಸ್ಪಿ ತಿಳಿಸಿದ್ದಾರೆ. ಗಂಗಾವತಿ ಡಿಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಉಪಸ್ಥಿತರಿದ್ದರು.