Advertisement

ಮಣಿಪಾಲ ಆರೋಗ್ಯ ಕಾರ್ಡ್‌ ಸದ್ಬಳಕೆಗೆ ಕರೆ

05:33 PM Jul 05, 2020 | Naveen |

ಕೊಪ್ಪ: ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ನೀಡಲು ಮಣಿಪಾಲ ಆರೋಗ್ಯ ಕಾರ್ಡ್‌ ಸೌಲಭ್ಯವನ್ನು 19 ವರ್ಷಗಳಿಂದ ಒದಗಿಸಲಾಗುತ್ತಿದೆ. ಈ ವರ್ಷ ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿ ಮತ್ತು ವಿತರಣೆಗೆ ಚಾಲನೆ ನೀಡಲಾಗಿದ್ದು, ಸದ್ಬಳಕೆ ಮಾಡಿ ಕೊಳ್ಳಬೇಕೆಂದು ಮಣಿಪಾಲ ಕಸ್ತೂರಿಬಾ ಆಸ್ಪತ್ರೆ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು.

Advertisement

ಪಟ್ಟಣದಲ್ಲಿ ಗಾಯತ್ರಿ ಸಹಕಾರಿ ಸೌಹಾರ್ದ ಸೊಸೈಟಿ ಸಭಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಡ್‌ಗೆ ನೋಂದಾಯಿಸಿದ ವರ್ಷದ ಅವಧಿಯಲ್ಲಿ ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ವೈದ್ಯರ ಸಮಾಲೋಚನೆಗೆ ಶೇ.50 ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗೆ ಶೇ.30, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಗೆ ಸಲಕರಣೆ ಹೊರತುಪಡಿಸಿ ಶೇ. 25, ಸಿ.ಟಿ, ಎಂ.ಆರ್‌.ಐ, ಅಲ್ಟ್ರಾಸೌಂಡ್‌ ತಪಾಸಣೆಗೆ ಶೇ. 20, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಗೆ ಶೇ. 20, ಔಷಧ ಖರೀದಿಗೆ ಶೇ.
12 ರಿಯಾಯಿತಿ ನೀಡಲಾಗಿದೆ ಎಂದರು.

ಕೊಪ್ಪದಲ್ಲಿ ಮಾಹಿತಿಗಾಗಿ 9449340738, 9449455380, 9481622625 ಸಂಪರ್ಕಿಸಬಹುದು ಎಂದರು. ಗಾಯತ್ರಿ ಸಹಕಾರಿ ಸೌಹಾರ್ದ ಸೊಸೈಟಿ ಅಧ್ಯಕ್ಷ ವಿಶ್ವನಾಥ್‌, ಯಡಗೆರೆ ಸೌಹಾರ್ದ ಸೊಸೈಟಿ ಸಿಇಒ ಸುಧೀರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next