Advertisement
ಭಾರೀ ಮಳೆಯ ಹಿನ್ನೆಲೆಯಲ್ಲಿ ಈ ಮುಳುಗು ಸೇತುವೆಯಲ್ಲಿ ಕಸ ಕಡ್ಡಿಗಳು ಸಿಲುಕಿದ್ದವು. ಸ್ಥಳೀಯರು ಕಸಕಡ್ಡಿಗಳನ್ನು ತೆರವು ಮಾಡಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದಾರೆ. ಆದರೆ ಈ ಬಾರಿ ಸೇತುವೆಗೆ ದೊಡ್ಡ ಮಟ್ಟದ ಹಾನಿ ಸಂಭವಿಸಿದ್ದರಿಂದ ಇಲ್ಲಿ ಸರ್ವ ಋತು ಸೇತುವೆ ನಿರ್ಮಾಣ ಆಗಬೇಕು ಎಂಬ ಬೇಡಿಕೆಗೆ ಬಲ ಬಂದಿದೆ.
Related Articles
Advertisement
ಮೂರು ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಕೂರ್ನಡ್ಕ ಹೊಳೆಗೆ ಈಗಿರುವುದು ಮುಳುಗು ಸೇತುವೆ.
ದಕ್ಷಿಣ ಕನ್ನಡದ ಆಲೆಟ್ಟಿ, ಕೊಡಗಿನ ಪೆರಾಜೆ ಹಾಗೂ ಕಾಸರಗೋಡಿನ ಪನತ್ತಡಿ ಪಂಚಾಯತ್‌ನ ಕಲ್ಲಪಳ್ಳಿ, ಕಮ್ಮಾಡಿ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆ ಇದು.
ಮಳೆಗಾಲದಲ್ಲಿ ಹೊಳೆ ತುಂಬಿ ಹರಿದರೆ ಸಂಪರ್ಕ ಕಡಿತಗೊಂಡು ಜನರಿಗೆ ಸಮಸ್ಯೆಯಾಗುತ್ತದೆ.
ಸೇತುವೆಯಲ್ಲಿ ಶಾಲಾ ವಾಹನಗಳು ಸೇರಿ ನೂರಕ್ಕೂ ಅಧಿಕ ವಾಹನಗಳು ದಿನವೂ ಓಡಾಡುತ್ತವೆ.
ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಮಂದಿಗೆ ಸಂಪರ್ಕ ಕೊಂಡಿ.
ಆಲೆಟ್ಟಿ, ಬಡ್ಡಡ್ಕ, ಕಲ್ಲಪಳ್ಳಿ, ಕಮ್ಮಾಡಿ ಭಾಗದಿಂದ ಹಾಗೂ ಪೆರಾಜೆ ಭಾಗದಿಂದ ಸಂಚಾರಕ್ಕೆ ಅಗತ್ಯ
ಕಲ್ಲು ಬಂಡೆ, ಮರ ಬಡಿದು ಹಾನಿ
ಕೂರ್ನಡ್ಕದ ಮುಳುಗು ಸೇತುವೆ ತೀರಾ ನಾದುರಸ್ತಿಯಲ್ಲಿದೆ. ಭಾರೀ ಮಳೆಗೆ ಮರ, ಕಲ್ಲು ಬಂಡೆ ಹರಿದುಬಂದು ಇನ್ನಷ್ಟು ಹಾನಿಯಾಗಿದೆ. ಮುಂಬರುವ ಮಳೆಗಾಲಕ್ಕೆ ಮೊದಲು ಇಲ್ಲಿ ನೂತನ ಸೇತುವೆ ನಿರ್ಮಾಣ ಮಾಡುವ ಬಹಳ ಅಗತ್ಯ ಇದೆ. ಹಲವು ವರ್ಷಗಳ ಬೇಡಿಕೆ ಈಡೇರಬೇಕಾಗಿದೆ.
– ಆಶೋಕ ಪೀಚೆ, ಆಲೆಟ್ಟಿ ಗ್ರಾಮಸ್ಥ
ಸೇತುವೆ ನಿರ್ಮಾಣ ಅಗತ್ಯ
ಈ ಮುಳುಗು ಸೇತುವೆಯನ್ನು ಕೆಡವಿ ಬೇರೆ ಸೇತುವೆ ನಿರ್ಮಾಣ ಮಾಡಬೇಕೆಂದು ಶಾಸಕರಿಗೆ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಸೇತುವೆ ಬಹಳ ನಾದುರಸ್ತಿಯಲ್ಲಿದ್ದು ಇಲ್ಲಿಗೆ ಅಗತ್ಯ ಸೇತುವೆ ನಿರ್ಮಾಣ ಆಗಬೇಕಾಗಿದೆ.
-ವೀಣಾ ವಸಂತ, ಅಲೆಟ್ಟಿ ಗ್ರಾ.ಪಂ. ಅಧ್ಯಕೆ
– ತೇಜೇಶ್ವರ್ ಕುಂದಲ್ಪಾಡಿ